ನವದೆಹಲಿ: ಕೊರೋನಾ ಸೋಂಕು ಆರಂಭದ ದಿನಗಳಲ್ಲಿ ಮಾಸ್ಕ್ನಿಂದ ಹಿಡಿದು ವೆಂಟಿಲೇಟರ್ವರೆಗೆ ಎಲ್ಲದಕ್ಕೂ ಪರಾವಲಂಭಿಯಾಗಿದ್ದ ಭಾರತ ಇಂದು ಬಹುತೇಕ ಸ್ವಾವಲಂಭಿಯಾಗುವ ಜತೆಗೆ ಲಸಿಕೆ ಉತ್ಪಾದನೆಯಲ್ಲಿ ಜಾಗತಿಕೆವಾಗಿ ಮುಂಚೂಣಿಯಲ್ಲಿದ್ದು, ಎಲ್ಲಾ ದೇಶಗಳು ಭಾರತದಿಂದಲೇ ಔಷಧಿ ಖರಿದಸಲು ಮುಗಿ ಬಿದ್ದಿವೆ. ಕೊರೋನಾ ಸೋಂಕಿನ ಮೂಲವಾದ ಚೀನಾವನ್ನು ಇಂದು ಬಹುತೇಕ ರಾಷ್ಟ್ರಗಳು ನಂಬುತ್ತಿಲ್ಲ. ಒಂದು ಕಾಲದಲ್ಲಿ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಬಹುತೇಕ ಎಲ್ಲಾ ರಾಷ್ಟ್ರಗಳಿಗೂ ಸೆಡ್ಡು ಹೊಡೆದಿದ್ದ ಚೀನಾ ಕುಸಿದಿದ್ದು, ಬಾರತ ಮುನ್ನೆಲೆಗೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಡ್ ಇನ್ ಇಂಡಿಯಾ ಪರಿಕಲ್ಪನೆ ಅಗಾಧ ಪರಿಣಾಮ ಬೀರಿದ್ದು, ಇಂದು ಭಾರತೀಯ ಕಂಪನಿಗಳು ಜಗತ್ತಿಗೆ ಔಷಧಿ ಪೂರೈಸುವ ಮಹತ್ಕಾರ್ಯವನ್ನು ಯಶಸ್ವಿಯಾಗಿ ಪೂರೈಸುತ್ತಿದೆ. ದೇಶಿ ನಿರ್ಮಿತ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳಿಂದ ಭಾರತದ ಮೇಲಿನ ನಂಬಿಕೆ ಮತ್ತಷ್ಟು ದುಪ್ಪಟ್ಟಾಗಿದ್ದು, ಈವರೆಗೂ ಸರಿಸುಮಾರು 92 ರಾಷ್ಟ್ರಗಳು ಭಾರತದಿಂದ ಔಷಧಿ ಖರೀದಿಸಲು ಮುಂದಾಗಿವೆ.
ನೆರೆ ಹೊರೆಯ ರಾಷ್ಟ್ರಗಳಿಗೆ ಮೊದಲು ಆದ್ಯತೆ ನೀಡುತ್ತಿದ್ದು, ಹಾಗೂ ಮೊದಲ ಹಂತದಲ್ಲಿ ಲಸಿಕೆಗಳನ್ನು ನೀಡಲು ಇಚ್ಚಿಸಿದೆ. ನೇಪಾಳ 12 ಮಿಲಿಯನ್ ಡೋಸೆಜ್ಗಳಿಗೆ, ಬಾಂಗ್ಲಾದೇಶ 30 ಮಿಲಿಯನ್, ಬುತಾನ್ ಒಂದು ಮಿಲಿಯನ್ ಡೊಸೆಜ್ಗಳಿಗೆ ಆದೇಶ ನೀಡಿದೆ. ಮ್ಯಾನ್ಮಾರ್,ಶ್ರೀಲಂಕಾ, ಮಾಲ್ಡೀವ್ಸ್, ಆಫ್ಘಾನಿಸ್ತಾನ ದೇಶಗಳು ಬಾರತದಿಂದ ಲಸಿಕೆ ಕರೀದಿಸಲು ಪರಸ್ಪರ ಒಪ್ಪಂದ ಮಾಡಿಕೊಂಡಿದೆ.