ಸ್ಯಾಂಡಲ್​ವುಡ್​​ಗೆ ಜೂನಿಯರ್ ರೋರಿಂಗ್ ಸ್ಟಾರ್!

0
303

ಸ್ಯಾಂಡಲ್​ವುಡ್​ ಅನ್ನು ಆಳಿದ್ದ ದಿಗ್ಗಜರ ಮಕ್ಕಳು ಈಗ ಸ್ಟಾರ್​​ಗಳಾಗಿ ಮಿಂಚುತ್ತಿರುವುದು ಗೊತ್ತೇ ಇದೆ. ವಿಶೇಷ ಅಂದ್ರೆ ಈಗ ಸ್ಯಾಂಡಲ್​ವುಡ್​ನಲ್ಲಿ ಅಬ್ಬರಿಸುತ್ತಿರುವ ಸ್ಟಾರ್​ ಗಳ ಮಕ್ಕಳು ಕೂಡ ಚಂದನವನ ಪ್ರವೇಶಿಸುತ್ತಿದ್ದಾರೆ. ಸ್ಟಾರ್ಸ್​ ತಮ್ಮ ಮಕ್ಕಳನ್ನು ಬಾಲ್ಯದಲ್ಲೇ ಸಿನಿರಂಗಕ್ಕೆ ಪರಿಚಯಿಸ್ತಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ವಿನಿಶ್, ರಿಯಲ್ ಸ್ಟಾರ್ ಉಪೇಂದ್ರ ಐಶ್ವರ್ಯಾ, ಗೋಲ್ಡನ್ ಸ್ಟಾರ್ ಗಣೇಶ್ ಮಗ ವಿಹಾನ್ ಮತ್ತು ದುನಿಯಾ ವಿಜಯ್ ಮಗ ಸಾಮ್ರಾಟ್ ಸ್ಯಾಂಡಲ್​ವುಡ್​ ಗೆ ಎಂಟ್ರಿಕೊಟ್ಟಿರುವುದು ಗೊತ್ತೇ ಇದೆ. ಈಗ ಇವರ ಸಾಲಿಗೆ ರೋರಿಂಗ್ ಸ್ಟಾರ್ ಶ್ರೀಮುರಳಿಯವರ ಮಗ ಅಗಸ್ತ್ಯ ಸೇರಿದ್ದಾನೆ.


ಹೌದು ಶ್ರೀಮುರಳಿ ತಮ್ಮ ಮಗನನ್ನು ಸ್ಯಾಂಡಲ್​ವುಡ್​ಗೆ ಪರಿಚಯಿಸ್ತಿದ್ದಾರೆ. ಮುರಳಿ ನಟನೆಯ ‘ಮದಗಜ’ ಸಿನಿಮಾ ಮೂಲಕ ಅಗಸ್ತ್ಯ ಸ್ಯಾಂಡಲ್​​​ವುಡ್ ಪ್ರವೇಶಿಸುತ್ತಿದ್ದಾನೆ. ಅಗಸ್ತ್ಯಗೆ ವಿಶ್ ಮಾಡಿ ಮದಗಜ ಟೀಮ್​ ಪೋಸ್ಟರ್​ವೊಂದನ್ನು ಬಿಡುಗಡೆ ಮಾಡಿದೆ. ಈ ಪೋಸ್ಟರ್​ನಲ್ಲಿ ಜೂನಿಯರ್ ರೋರಿಂಗ್ ಸ್ಟಾರ್ ತನ್ನ ತಂದೆ ಶ್ರೀಮುರಳಿ ಜೊತೆ ಕಾಣಿಸಿಕೊಂಡಿದ್ದಾನೆ.
ಸದ್ಯ ಶ್ರೀಮುರಳಿ ಅಭಿನಯದ ಭರಾಟೆ ರಿಲೀಸ್​ಗೆ ರೆಡಿಯಾಗಿದೆ. ಅಕ್ಟೋಬರ್​ 18ರಂದು ಚಿತ್ರ ಬಿಡುಗಡೆ ಆಗಲಿದೆ. ಶೀಘ್ರದಲ್ಲೇ ಮದಗಜ ಚಿತ್ರೀಕರಣ ಆರಂಭವಾಗಲಿದೆ. ಅಯ್ಯೋಗ್ಯ ಸಿನಿಮಾ ಖ್ಯಾತಿಯ ಡೈರೆಕ್ಟರ್ ಮಹೇಶ್ ಆ್ಯಕ್ಷನ್ ಕಟ್ ಹೇಳ್ತಿರೋ ಸಿನಿಮಾ ಇದಾಗಿದ್ದು, ಈಗಾಗಲೇ ನಿರೀಕ್ಷೆ ಹುಟ್ಟುಹಾಕಿದೆ.
ಇನ್ನು ಈ ಮದಗಜ ಮೂಲಕ ರೋರಿಂಗ್ ಸ್ಟಾರ್ ಮುರಳಿ ಪುತ್ರ ಚಂದನವನಕ್ಕೆ ಬರ್ತಿರುವುದು ಖುಷಿ ವಿಚಾರ. ಸ್ಯಾಂಡಲ್​ ವುಡ್ ಜರ್ನಿ ಆರಂಭಿಸುತ್ತಿರುವ ಅಗಸ್ತ್ಯಗೆ ನಮ್ ಕಡೆಯಿಂದಲೂ ಶುಭಹಾರೈಕೆ.

LEAVE A REPLY

Please enter your comment!
Please enter your name here