ಲಿಚ್ಚಿ ಹಣ್ಣು ತಿಂದು 50 ಕ್ಕೂ ಹೆಚ್ಚು ಮಕ್ಕಳು ಸಾವು

0
192

ಲಿಚ್ಚಿ ಹಣ್ಣನ್ನು ತಿಂದು 50 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿರುವ ಘಟನೆ ಬಿಹಾರದ ಮುಜಾಫರಪುರ್‌ ಜಿಲ್ಲೆಯಲ್ಲಿ ನಡೆದಿದೆ. 

ಇತ್ತೀಚೆಗೆ ಪ್ರಕಟವಾದ ‘Lancet Global Health’ನ ಅಧ್ಯಯನದಲ್ಲಿ ಈ ಅಂಶ ತಿಳಿದು ಬಂದಿದೆ. ಬಿಹಾರ ಹಾಗೂ ಭಾರತದ ಉತ್ತರ ಭಾಗದಲ್ಲಿ   ಮಕ್ಕಳು  ರಾತ್ರಿ ಹೊತ್ತು ಊಟ ಮಾಡದೆ ರುಚಿಯಾಗಿರುವ ಈ ಹಣ್ಣನ್ನೇ ತಿಂದು ಮಲಗುತ್ತಾರೆ.

ಈ ಲಿಚ್ಚಿ ಹಣ್ಣಿನಲ್ಲಿ ಹೈಪೋಗ್ಲೈಸಿನ್‌ ಎ, ಮಿಥೆಲೈನ್ ಸೈಕ್ಲೋಪ್ರೊಪ್ಲಿ ಅಸೆಟಿಕ್ ಆ್ಯಸಿಡ್ ಹೆಚ್ಚಾಗಿರುತ್ತದೆ.  ಇವು ರಕ್ತದಲ್ಲಿರುವ ಗ್ಲೂಕೋಸ್ ಅಂಶವನ್ನು ಕಡಿಮೆ ಮಾಡುತ್ತದೆ. ಇದರಿಂದ ಮಕ್ಕಳಲ್ಲಿ ಮೆದುಳು ಜ್ವರ ಕಾಣಿಸಿಕೊಂಡು ಮರಣ ಹೊಂದುತ್ತಿದ್ದಾರೆ ಎಂದು ಆರೋಗ್ಯ ಅಧಿಕಾರಿ ಅಶೋಕ್ ಕುಮಾರ್ ತಿಳಿಸಿದ್ದಾರೆ. ಬಿಹಾರದಲ್ಲಿ ಉಷ್ಣಾಂಶ 40ಡಿಗ್ರಿಗಿಂತಲೂ ಅಧಿಕವಿದೆ. ಹೀಗಾಗಿ ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನವಿರಲಿ ಅಂತ ಅಲ್ಲಿನ ಆರೋಗ್ಯ ಇಲಾಖೆ ಪೋಷಕರಿಗೆ ಕಿವಿಮಾತು ಹೇಳಿದೆ.ಮೆದುಳು ಜ್ವರದ ಲಕ್ಷಣವಿರುವ ಮಕ್ಕಳನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಮಕ್ಕಳ ಸಾವಿಗೆ ಸಂಬಂಧಿಸಿದಂತೆ ಕಾರಣ ಅನೇಕ ವರ್ಷಗಳಿಂದ ನಿಗೂಢವಾಗಿಯೇ ಉಳಿದಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸಾವನ್ನಪ್ಪುತ್ತಾ ಇರೋದಕ್ಕೆ ಕಾರಣ ಏನೆಂಬುದು ಖಚಿತವಾಗಿರಲಿಲ್ಲ. ಇದೀಗ Lancet Global Health’ ಅಧ್ಯಯನದಿಂದ ಲಿಚ್ಚಿ ಹಣ್ಣಿನ ಸೇವನೆಯೇ ಮಕ್ಕಳ ಸಾವಿಗೆ ಕಾರಣ ಅನ್ನೋ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

LEAVE A REPLY

Please enter your comment!
Please enter your name here