ಯುವ ದಸರಾ ವೇದಿಕೆಯಲ್ಲಿ ಚಂದನ್​ ಶೆಟ್ಟಿ – ನಿವೇದಿತಾ ಗೌಡ ನಿಶ್ಚಿತಾರ್ಥ – ವ್ಯಾಪಕ ಟೀಕೆಗೆ ಗುರಿಯಾದ ಬಿಗ್​​​ಬಾಸ್​ ಜೋಡಿ..!

0
460

ಮೈಸೂರು : ಬಿಗ್​ಬಾಸ್​ ಖ್ಯಾತಿಯ ಯುವ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಯುವ ದಸರಾ ವೇದಿಕೆಯಲ್ಲೇ ನಿಶ್ಚಿತಾರ್ಥ ಮಾಡಿಕೊಂಡು ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಯುವ ದಸರಾದ ಝಗಮಗಿಸುವ ವೇದಿಕೆಯಲ್ಲಿ ನಿವೇದಿತಾ ಗೌಡಗೆ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ ಬೆರಳಿಗೆ ಉಂಗುರ ತೊಡಿಸಿ ಮದುವೆ ಆಗ್ತೀನಿ ಅಂತ ಘೋಷಿಸಿದರು.
ಉಂಗುರ ತೊಡಿಸುವ ಮುನ್ನ ನಿವೇದಿತಾ ಗೌಡ ಅವರಿಗೆಂದೇ ಬರೆದಿದ್ದ ‘ಗೊಂಬೆ ಗೊಂಬೆ’ ಹಾಡನ್ನು ಚಂದನ್ ಶೆಟ್ಟಿ ಹೇಳಿದ್ದರು. ಆ ಹಾಡಿಗೆ ನಿವೇದಿತಾ ಸಖತ್ ಸ್ಟೆಪ್ ಕೂಡ ಹಾಕಿದ್ದರು. ಬಳಿಕ ಮಾತನಾಡಿದ ಚಂದನ್ , ವಿದೇಶದ ಸುಂದರ ತಾಣದಲ್ಲಿ ನಿವೇದಿತಾಗೆ ಈ ವಿಷಯವನ್ನು ಹೇಳಲು ಪ್ಲಾನ್ ಮಾಡಿಕೊಂಡಿದ್ದೆ.ಆದರೆ ನನ್ನನ್ನು ಇಷ್ಟಪಡುವ ಜನರ ಮುಂದೆ ಈ ವೇದಿಕೆಯಲ್ಲಿ ಹೇಳುವುದೇ ಉತ್ತಮ. ಇಲ್ಲಿಗೆ ನನ್ನ ಪೇರೆಂಟ್ಸ್, ನಿವೇದಿತಾ ಅಪ್ಪ-ಅಮ್ಮ ಕೂಡ ಬಂದಿದ್ದಾರೆ. ಇಲ್ಲಿಯೇ ಈ ವಿಷಯವನ್ನು ಹೇಳುತ್ತೇನೆಂದು ನಿವೇದಿತಾಗೆ ಪ್ರೊಪೋಸ್ ಮಾಡಿದ್ದೂ ಅಲ್ಲದೆ, ಉಂಗುರ ತೊಡಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡರು.
ಯುವ ದಸರಾ ವೇದಿಕೆಯಲ್ಲಿ ಚಂದನ್-ನಿವೇದಿತಾ ಎಂಗೇಜ್ಮೆಂಟ್ ಮಾಡಿಕೊಂಡಿದ್ದಕ್ಕೆ ಎಲ್ಲೆಡೆಟೀಕೆಗಳು ಕೇಳಿಬರ್ತಾ ಇವೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕೂಡ ಇದಕ್ಕೆ ವಿರೋಧಿಸಿದ್ದು. ದಸರಾ ವೇದಿಕೆಯಲ್ಲಿ ನಿಶ್ಚಿತಾರ್ಥ ಅಕ್ಷಮ್ಯ ಅಪರಾಧ. ಅವರಿಬ್ಬರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಅಷ್ಟೇ ಅಲ್ಲದೆ ಆರು ತಿಂಗಳಲ್ಲಿ ಚಾಮುಂಡಿ ದೇವಿಯೇ ಶಿಕ್ಷೆ ಕೊಡ್ತಾಳೆ ಅಂತ ಹೇಳಿದ್ದಾರೆ.

LEAVE A REPLY

Please enter your comment!
Please enter your name here