Saturday, May 28, 2022
Powertv Logo
Homeರಾಜ್ಯಚುನಾವಣೆಗೆ ಭರ್ಜರಿ ತಯಾರಿಯಲ್ಲಿ ಕಮಲ ಪಡೆ

ಚುನಾವಣೆಗೆ ಭರ್ಜರಿ ತಯಾರಿಯಲ್ಲಿ ಕಮಲ ಪಡೆ

ಬೆಂಗಳೂರು: ರಾಜ್ಯ ಬಿಜೆಪಿ ಕಾರ್ಯಕಾರಿಣಿ ಮುಗಿಯುತ್ತಿದ್ದಂತೆ ಸಿಎಂ ಬಸವರಾಜ ಬೊಮ್ಮಾಯಿ ಫುಲ್‌ ಅಲರ್ಟ್‌ ಆಗಿದ್ದಾರೆ.. ಕಾರ್ಯಕಾರಿಣಿಯಲ್ಲಿ ಬೊಮ್ಮಾಯಿಗೆ ವರಿಷ್ಟರು ಖಡಕ್‌ ಸೂಚನೆ ಕೊಟ್ಟಿದ್ದು, ಚುನಾವಣೆಗೆ ಈಗಿನಿಂದಲೇ ಚಾಲನೆ ನೀಡ್ತಿದ್ದಾರೆ.. ಹೌದು, ಚುನಾವಣೆಗೆ ಇನ್ನು ಒಂದು ವರ್ಷ ಮಾತ್ರ ಇದೆ. ಹೀಗಾಗಿ ಇನ್ನಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಿ ಅಂತ ವರಿಷ್ಠರು ಸೂಚನೆ ನೀಡಿದ್ದಾರೆ. ಜೊತೆಗೆ, ಅಗ್ರೆಸ್ಸಿವ್ ಆಗಿ ಕೆಲಸ ನಿರ್ವಹಿಸುವಂತೆ ಸೂಚನೆ ಕೊಟ್ಟಿದ್ದಾರೆ. ಕೇವಲ ಅಭಿವೃದ್ಧಿ ಕೆಲಸ ಮಾಡಿದ್ರೆ ಜನರನ್ನು ಸೆಳೆಯಲು ಆಗೋದಿಲ್ಲ. ಹೀಗಾಗಿ ಮಾಡಿದ ಅಭಿವೃದ್ಧಿ ಬಗ್ಗೆ ಜನರಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಕ್ರಿಯಾತ್ಮಕರಾಗಿ ಅಂತ ಹೈಕಮಾಂಡ್ ಹೇಳಿದೆ. ಬೆಂಗಳೂರಿನಲ್ಲಷ್ಟೇ ಅಲ್ಲ ಎಲ್ಲಾ ಜಿಲ್ಲೆಗಳಲ್ಲೂ ಹೆಚ್ಚೆಚ್ಚು ಪ್ರವಾಸ ಮಾಡಿ, ಅಭಿವೃದ್ಧಿ ಕೆಲಸಗಳ ಜೊತೆಗೆ ಪಕ್ಷದ ಸಭೆ ನಡೆಸಲು ವರಿಷ್ಠರು ಸೂಚನೆ ಕೊಟ್ಟಿದ್ದಾರೆ.

ಹೈಕಮಾಂಡ್ ಸೂಚನೆ ಬರ್ತಾ ಇದ್ದಂತೆ ಸಿಎಂ ಫುಲ್ ಅಲರ್ಟ್ ಆಗಿದ್ದಾರೆ. ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಶೃಂಗೇರಿಗೆ ತೆರಳಿದ ಸಿಎಂ ಅಲ್ಲಿ ಶೃಂಗೇರಿ ಶಾರದಾಂಬ ದರ್ಶನ ಪಡೆದಿದ್ದಾರೆ. ಇನ್ನೆರಡು ದಿನ ಶಿವಮೊಗ್ಗದಲ್ಲಿ ಪಕ್ಷದ ಹಾಗೂ ಇನ್ನಿತರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಈಶ್ವರಪ್ಪ ಮೊಮ್ಮಗನ ಮದುವೆ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಲಿದ್ದಾರೆ.

ಈ ಕಾರ್ಯಕ್ರಮಗಳ ನಂತರ ಸಿಎಂ ಕಲಬುರಗಿ ಜಿಲ್ಲಾ ಭೇಟಿ, ನಂತರ ಬಾದಾಮಿ ಕ್ಷೇತ್ರದಲ್ಲಿ ಸಂಚಾರ ಮಾಡಲಿದ್ದಾರೆ.. ವಿಶೇಷ ಅಂದ್ರೆ, ಸಿಎಂ ಬೊಮ್ಮಾಯಿ ಜೊತೆ ವೇದಿಕೆ ಹಂಚಿಕೊಳ್ತಿರೋರು ಸಿದ್ದರಾಮಯ್ಯ. ಹೌದು, ಬಾದಾಮಿ ಕ್ಷೇತ್ರದ ಕೆರೂರು ಏತ ನೀರಾವರಿ ಯೋಜನೆಯ ಶಂಕುಸ್ಥಾಪನೆ ಸಮಾರಂಭದಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ನಂತರ ಮುಧೋಳ್ ಬಳಿಕ ದಾವಣಗೆರೆಯ ಹರಿಹರದಲ್ಲಿ ರೈತ ಹಾಗೂ ಕೌಶಲ್ಯ ಸಮಾವೇಶ ನಡೆಯಲಿದೆ.ಒಟ್ಟು 5 ದಿನದ ಜಿಲ್ಲಾ ಪ್ರವಾಸ ಮುಗಿಸಿ ಶನಿವಾರ ಸಿಎಂ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

ಒಟ್ಟಿನಲ್ಲಿ ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಅಗ್ರೆಸ್ಸಿವ್ ಆಗಿ ಕೆಲಸ ಮಾಡಲು ಮುಂದಾಗಿದ್ದಾರೆ. ಜಿಲ್ಲಾ ಪ್ರವಾಸ ಕೈಗೊಂಡು ವರಿಷ್ಠರ ಸೂಚನೆಯಂತೆ ಜನರಿಗೆ ಅಭಿವೃದ್ಧಿ ಬಗ್ಗೆ ತಿಳಿಸುವಂತ ಕೆಲಸ ಮಾಡಲಿದ್ದಾರೆ. ಅಭಿವೃದ್ಧಿ ಯೋಜನೆ ಜೊತೆ ಪಕ್ಷ ಸಂಘಟನೆಯ ಹೊಣೆಯನ್ನೂ ಸಿಎಂಗೆ ಹೈಕಮಾಂಡ್ ನೀಡಿದೆ. ಇದು ಸಂಘಟನಾತ್ಮಕವಾಗಿ ಎಷ್ಟು ಲಾಭ ತಂದುಕೊಡುತ್ತದೆ ಅನ್ನೋದನ್ನು ಕಾದುನೋಡಬೇಕಿದೆ.

- Advertisment -

Most Popular

Recent Comments