ಬೆಳಗಾವಿ: ಬೆಳಗಾವಿ ಜಿಲ್ಲೆಯ ಗಡಿ ಭಾಗವಾದ ನಿಪ್ಪಾಣಿ ಮತಕ್ಷೇತ್ರದಲ್ಲಿ ರಸ್ತೆ, ಹೋಲಗದ್ದೆಗಳಿಗೆ ನೀರು, ಕುಡಿಯುವ ನೀರು, ಹಾಸ್ಟೇಲ್, ಸರ್ಕಾರಿ ಕಛೇರಿಗಳು ಸೇರಿದಂತೆ ಜನರ ಸಮಸ್ಯೆಗೆ ಸ್ಪಂಧಿಸಿ ಸಾರ್ವಜನಿಕ ಕಾರ್ಯಗಳನ್ನು ಕೈಗೊಳ್ಳುವ ಜೊತೆಗೆ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಸಿಗಲೇಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಂತದಲ್ಲಿ ಸುಧಾರಣೆ ಕೈಗೊಳ್ಳಲಾಗಿದೆ. ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದಲ್ಲಿ ಸರಕಾರಿ ತರಬೇತಿ ಸಂಸ್ಥೆಯ ನೂತನ ಕಟ್ಟಡ ಶಿಲ್ಯಾನ್ಯಾಸ ಸಮಾರಂಭಕ್ಕೆ ಚಾಲನೆ ನೀಡಲಾಯಿತು.
ಕ್ಷೇತ್ರದ ಮಕ್ಕಳಲ್ಲಿ ಕೌಶಲ್ಯ ಅಭಿವೃದ್ಧಿಯಾಗಲಿ ಹಾಗೂ ಉನ್ನತ ಶಿಕ್ಷಣ ಅವಕಾಶ ಸಿಗಲು ಅಕ್ಕೋಳ ಗ್ರಾಮದಲ್ಲಿ 2014 ರಲ್ಲಿ ಸರ್ಕಾರಿ ಆಯಟಿಆಯ ಕಾಲೇಜು ಮಂಜೂರು ಮಾಡಲಾಗಿದೆ. ಸ್ವಂತ ಕಟ್ಟಡ ನಿರ್ಮಿಸಲು 04 ಏಕರೆ 23 ಗುಂಟೆ ಜಮಿನು ಮಂಜೂರಾತಿ ಮಾಡಿ ,ಕಟ್ಟಡಕ್ಕಾಗಿ ನಾಬಾರ್ಡ ಆರ.ಐ.ಡಿ.ಎಫ-23 ಯೋಜನೆಅಡಿ 02 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. 11 ಕೋಠಡಿಗಳು ನಿರ್ಮಾಣವಾಗಲಿದ್ದು, ವರ್ಷಾದ್ಯಂತ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ. ಅಂಗಣವಾಡಿಯಿಂದ ಉನ್ನತ ಶಿಕ್ಷಣವರೆಗೆ ಶಿಕ್ಷಣ ಪಡೆಯುತ್ತಿರುವ ಮಕ್ಕಳ ಭವಿಷ್ಯ ರೂಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಚಿವೆ ಶಶಿಕಲಾ ಜೋಲ್ಲೆ ಹೇಳಿದರು. ಸಚಿವೆ ಜೊಲ್ಲೆಗೆ ಸಂಸದ ಪತಿ ಅಣ್ಣಾಸಾಹೇಬ ಜೋಲ್ಲೆ ಸಾಥ ನೀಡಿದರು.