Home P.Special ಲೋಕ ಸಮರದಲ್ಲಿ ಖುಲ್ಲಂಖುಲ್ಲಾ ಟ್ರೋಲ್​ - ಪಾಪ ನಿಖಿಲ್​..!

ಲೋಕ ಸಮರದಲ್ಲಿ ಖುಲ್ಲಂಖುಲ್ಲಾ ಟ್ರೋಲ್​ – ಪಾಪ ನಿಖಿಲ್​..!

ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ ಭಾರತದ ಲೋಕಸಭೆ ಚುನಾವಣೆ  ರಿಸಲ್ಟ್​ ಹೊರ ಬಿದ್ದಿದೆ. ಭವ್ಯ ಭಾರತವನ್ನು ಮುನ್ನೆಡೆಸೋ ನಾಯಕನಾಗಿ ಮೋದಿಗೆ ಮತ್ತೆ ಜನಾಶೀರ್ವಾದ ಮಾಡಿದ್ದಾರೆ. ಚುನಾವಣೆ ಅಂದ ಮೇಲೆ ಆರೋಪಗಳು ಪ್ರತ್ಯಾರೋಪಗಳು ಕಾಮನ್​. ಒಬ್ಬೊಬ್ರು ನಾಯಕರು ಕೊಡೋ ಹೇಳಿಕೆಗೂ, ಮಾಡಿಕೊಳ್ಳುವ ಎಡವಟ್ಟುಗಳಿಗೂ ಆದ ಟ್ರೋಲ್​ಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಸೌಂಡ್​ ಮಾಡ್ತಿವೆ.

ಕದನ ಕಲಿಗಳು ಯಾರು ಅಂತಾ ನಿರ್ಧಾರ ಆದಾಗಿನಿಂದ್ಲೂ ದಿನಕ್ಕೊಂದು, ಕ್ಷಣಕ್ಕೊಂದು ಸುದ್ದಿಯಿಂದ ಇಡೀ ಇಂಡಿಯಾದಲ್ಲೇ ಹೆಚ್ಚು ಸದ್ದು ಮಾಡಿದ್ದ ಕ್ಷೇತ್ರ ಅಂದ್ರೆ ಅದು ಮಂಡ್ಯ. ಮೈತ್ರಿ ಅಭ್ಯರ್ಥಿಯಾಗಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್​ ಕುಮಾರಸ್ವಾಮಿ. ಇವರ ವಿರುದ್ಧ ಕಲಿಯುಗದ ಕರ್ಣ ಅಂಬರೀಶ್​ ಪತ್ನಿ ಸುಮಲತಾ ಅಂಬರೀಶ್ ಅಖಾಡಕ್ಕೆ ಇಳಿದಿದ್ರು. ಜಿದ್ದಾ ಜಿದ್ದಿನ ರಣಕಣವಾಗಿದ್ದ ಸಕ್ಕರೆನಾಡಲ್ಲಿ ಸ್ವಾಭಿಮಾನದ ಕಹಳೆ ಊದಿದ್ರು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​. ಈಗ ಪ್ರಚಂಡ ಬಹುಮತಗಳಿಂದ ಗೆದ್ದು ಬೀಗಿದ್ದಾರೆ. ನಿಖಿಲ್​ ಸೋತು ಸುಣ್ಣವಾಗಿದ್ದಾರೆ.  ಆದ್ರೆ ಮಂಡ್ಯ ಇಂಡಿಯಾ ಟ್ರೋಲ್​ಗಳಂತೂ ಇನ್ನೂ ನಿಂತಿಲ್ಲ.

ಇದು ಕಾಲೆಳೆಯುವವರ ಕಾಲ… ಚುನಾವಣೆಯ ರಾಜಕೀಯ ಕಾವೇರುತ್ತಿದ್ದಂತೆಯೇ ಸೋಷಿಯಲ್ಮೀಡಿಯಾದಲ್ಲೂ ರಾಜಕೀಯ ಪಕ್ಷಗಳ ಕುರಿತ ಅಣಕ, ಟೀಕೆಗಳು ಜೋರಾಗಿದ್ವು. ರಾಜಕಾರಣಿಗಳ ಕಾಲೆಳೆಯೋ ಟ್ರೋಲ್​ ಒಂದಾ ಎರಡಾ? ಪಕ್ಷಗಳ ನಡುವಣ ಕೆಸರೆರಚಾಟ ಜನ ಸಾಮಾನ್ಯರಿಗೆ ಮನರಂಜನೆ. ಸಾಮಾಜಿಕ ಜಾಲತಾಣಗಳಲ್ಲಿ ಇಂದಿನ ರಾಜಕಾರಣ ಬೆತ್ತಲಾಗುತ್ತಿರುವ ಪರಿ ಇದು.

ಕೆಲ ತಿಂಗಳಿನಿಂದ  ಯುಟ್ಯೂಬ್, ಫೇಸ್ಬುಕ್​, ವಾಟ್ಸ್​ಆ್ಯಪ್​​, ಇನ್​ಸ್ಟಾಗ್ರಾಂಗಳಲ್ಲಿ ನ್ಯೂ​ ಟ್ರೆಂಡ್​​ ಸೃಷ್ಟಿ ಮಾಡಿದ್ದು ಇದೊಂದೇ ಡೈಲಾಗ್​. ಸಖತ್ ಹವಾ ಎಬ್ಬಿಸಿದ್ದ ಡೈಲಾಗ್ ಅಂದ್ರೆ ಎಲ್ಲರಿಗೂ ಗೊತ್ತಿರೋ ಹಾಗೇ ನಿಖಿಲ್ ಎಲ್ಲಿದ್ದೀಯಪ್ಪಾ ಅನ್ನೋ ಡೈಲಾಗ್​.

ಜಾಗ್ವಾರ್​ ಸಿನಿಮಾ ಮೂಲಕ ಸಿಎಂ ಕುಮಾರಸ್ವಾಮಿ ಪುತ್ರ ಬೆಳ್ಳಿ ಪರೆದೆಗೆ ಗ್ರ್ಯಾಂಡ್​ ಎಂಟ್ರಿ ಕೊಟ್ರು. ಕೋಟಿ ಕೋಟಿ ಬಂಡವಾಳ ಹಾಕಿ ಪುತ್ರನಿಗೆ ಗ್ರ್ಯಾಂಡ್​ ಓಪನಿಂಗ್​ ಕೊಟ್ಟಿದ್ರು. ಅಷ್ಟೇ ಗ್ರ್ಯಾಂಡ್ ಆಗಿ ಸೆಟ್​ ಹಾಕಿ ಅದ್ದೂರಿ ಆಡಿಯೋ ಕಾರ್ಯಕ್ರಮ ಮಾಡಲಾಗಿತ್ತು. ಮಂಡ್ಯದಲ್ಲಿ ನಡೆದ ಜಾಗ್ವಾರ್ಚಿತ್ರದ ಆಡಿಯೋ ರಿಲೀಸ್ ಅದ್ಧೂರಿ ಸಮಾರಂಭ ಕೂಡ ಸಿನಿಮ್ಯಾಟಿಕ್​ ಆಗೇ ಇತ್ತು. ಕುಮಾರಸ್ವಾಮಿ ತಮ್ಮ ಮಗ ನಟ ನಿಖಿಲ್ಎಲ್ಲಿದ್ದೀಯಪ್ಪಾ ಅಂತಾ ಮೈಕ್ನಲ್ಲಿ ಕರೆದಿದ್ರು.  ಅಂದಿನ ಡೈಲಾಗ್‌’ ಇಂಷ್ಟೊಂದುಹವಾಎಬ್ಬಿಸುತ್ತೆ, ಯ್ಯೂಟ್ಯೂಬ್​ನಲ್ಲಿ ಟ್ರೆಂಡ್​ ಕ್ರಿಯೇಟ್ ಮಾಡುತ್ತೆ ಅಂತಾ ಯಾರೂ ಊಹಿಸಿರಲಿಲ್ಲ

ದೊಡ್ಡ ಗೌಡ್ರ ಕುಟುಂಬ ರಾಜಕಾರಣ ಟೀಕೆ ಮಾಡಲು ಕೂಡಎಲ್ಲಿದ್ದಿಯಪ್ಪಾ ನಿಖಿಲ್‌’ ಡೈಲಾಗ್ಬಳಕೆಯಾಯಿತು. ಸಮಾರಂಭದ ಆಡಿಯೋ, ವಿಡಿಯೋಗಳನ್ನು ರೀಮಿಕ್ಸ್ಮಾಡಿ ಟ್ರೋಲ್ಮಾಡಲಾಯಿತು.

ನಿಖಿಲ್​​ ಎಲ್ಲಿದ್ದೀಯಪ್ಪಾ ಬರೀ ಮಂಡ್ಯಕ್ಕೆ, ಇಂಡಿಯಾಗೆ ಮಾತ್ರ ಸೀಮಿತವಾಗಲಿಲ್ಲ. ವಿದೇಶದಲ್ಲೂ ಅಬ್ಬರಿಸಿದ್ರು ನಮ್​ ನಿಖಿಲಪ್ಪಾ.

ಎಲ್ಲಿದ್ದೀಯಪ್ಪಾ ನಿಖಿಲ್ಡೈಲಾಗ್ಇಟ್ಟುಕೊಂಡು ಹತ್ತಾರು ಬಗೆಯ ಮೈಮ್​ಗಳು ಸೃಷ್ಟಿಯಾದ್ವು. ಇದು ಎಷ್ಟರ ಮಟ್ಟಿಗೆ ಅಂದ್ರೆ ಸ್ವತಃ ಸಿಎಂ ಹೆಚ್​.ಡಿ ಕುಮಾರಸ್ವಾಮಿಯವ್ರೇ ಸೋಷಿಯಲ್​ ಮೀಡಿಯಾದಲ್ಲಿನ ಟೀಕೆಗಳ ಬಗ್ಗೆ ಅಸಹನೆ ವ್ಯಕ್ತ ಪಡಿಸಿದ್ರು.

ಸಖತ್ ವೈರಲ್ ಆಯ್ತು ರೇವಣ್ಣ ಟ್ರೋಲ್ಸಾಂಗ್​

ಸಚಿವ ಎಚ್.ಡಿ ರೇವಣ್ಣ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಟ್ರೋಲ್​ ಪೇಜ್​ಗಳಿಗೆ ಆಹಾರ ಆಗ್ತಾನೆ ಬಂದಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಸುಮಲತಾ ಅಂಬರೀಶ್ ವಿರುದ್ಧ ಟೀಕೆ ಮಾಡಿದ ವಿಚಾರ ಇಟ್ಟುಕೊಂಡು ಡಬ್ಬಿಂಗ್ ಹಾಡುಗಾರರೊಬ್ರು ಅಯೋಗ್ಯ ಚಿತ್ರದ ಏನಮ್ಮಿ ಏನಮ್ಮಿ ಹಾಡಿನ ಮೂಲಕ ರೇವಣ್ಣರನ್ನು ಸಖತ್ತಾಗೇ ಟ್ರೋಲ್ ಮಾಡಿದ್ದಾರೆ.ಇದು ಎಷ್ಟರ ಮಟ್ಟಿಗೆ ವೈರಲ್​ ಆಗಿತ್ತು ಅಂದ್ರೆ ಎಲ್ಲರೂ ಮತ್ತೆ ಮತ್ತೆ ಗುನುಗುವಂತೆ ಮಾಡಿಬಿಟ್ಟಿತ್ತು. ಅಷ್ಟರ ಮಟ್ಟಿಗೆ ಸಚಿವ ಲೋಕೋಪಯೋಗಿ ಹೆಚ್​.ಡಿ ರೇವಣ್ಣ ರಾಜಕೀಯ ವಿಷಯದ ಹೊರತಾಗಿ ಸಖತ್ ಫೇಮಸ್​ ಆಗಿದ್ರು.

ನಿಖಿಲ್​ ಎಲ್ಲಿದ್ದೀಯಪ್ಪಾ ಆಯ್ತು.. ಈಗ ಅನಿತಕ್ಕಾ ಎಲ್ಲಿದ್ದೀಯಕ್ಕಾ..?

ಸೋಷಿಯಲ್​ ಮೀಡಿಯಾದಲ್ಲಿ ನಿಖಿಲ್ ಎಲ್ಲಿದ್ದೀಯಪ್ಪಾ ಅಂತಾ ಹೆಚ್ಚು ಟ್ರೋಲ್ ಆಗಿತ್ತು. ಇದೀಗ ನೆಟ್ಟಿಗರ ಕಣ್ಣು ನಿಖಿಲ್ ತಾಯಿ, ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಸರದಿ. ಅನಿತಕ್ಕಾ ಎಲ್ಲಿದ್ದೀಯಕ್ಕಾ ಅಂತಾ ಟ್ರೋಲ್​ ಶುರುವಾಗಿದೆ.

ಬಿರು ಬೇಸಿಗೆ ಕಾಲದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ವಿಚಾರಕ್ಕೆ ವಿನೋದ್ ಎಂಬವರು ಟ್ರೋಲ್ಆರಂಭಿಸಿದ್ರು. 15 ದಿನಗಳಾದ್ರೂ ನೀರು ಬಿಡಲ್ಲ, ಅನಿತಕ್ಕಾ ಎಲ್ಲಿದ್ದೀರಿ ಎಂದು ಟ್ರೋಲ್ ಮಾಡಿದ್ದು ಇಡೀ ಸಾಮಾಜಿಕ ಜಾಲತಾಣದಲ್ಲಿ ಸಖತ್ತಾಗೇ ಹರಿದಾಡ್ತಿದೆ.

ಇನ್ನು ಲೋಕಸಮರ ಫಲಿತಾಂಶ ಹೊರ ಬಿದ್ದು  ಯಾರು ಸಂಸತ್​ಗೆ ಇನ್ಯಾರು ಮನೆಗೆ ಅಂತಾ ಜನ ತೀರ್ಮಾನ ಮಾಡಿದ್ದಾರೆ. ಚುನಾವಣಾ ಮುಂಚೆ ಅಬ್ಬರಿಸಿ ಬೊಬ್ಬರಿಯುತ್ತಿದ್ದ ನಾಯಕರ ಟ್ರೋಲ್​ಗಳಂತೂ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಅದ್ರಲ್ಲೂ ಸೋತ ಅಭ್ಯರ್ಥಿಗಳದಂತೂ ಕಥೆ ಮುಗಿತು ಅಂತಾ ಹೇಳಬಹುದು. ದೇವೇಗೌಡರ ಕುಟುಂಬದ ಇಬ್ಬರು ಸೋತಿದ್ರೂ, ಟ್ರೋಲ್​ಗಳಂತೂ ಮೂಲಕ ಇಡೀ ಸೋಷಿಯಲ್​ ಮೀಡಿಯಾಗಳಲ್ಲಿ ಗೆದ್ದಿದ್ದಾರೆ.

ಲೋಕ ಸಮರದಲ್ಲಿ ಅಬ್ಬರಿಸಿದ ಟ್ರೋಲ್​ ಪೇಜ್​ಗಳು

ಟ್ರೋಲ್​ ಪೇಜ್​ಗಳು ರಾಜಕೀಯ ನಾಯಕರು, ಹಿರಿಯರು, ಕಿರಿಯರು, ಸಿನಿಮಾದವರು ಹೀಗೆ ಯಾರನ್ನೂ ಬಿಟ್ಟಿಲ್ಲ. ಎಲ್ಲರನ್ನು ಸಖತ್ ಆಗೇ ಕಾಲ್ ಎಳೆದಿವೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈ ಬಾರಿ ಲೋಕ ಸಮರದಲ್ಲಿ ಅಮೇಥಿ ಮತ್ತು ವಯನಾಡು ಎರಡು ಕಡೆಗಳಲ್ಲಿ ಸ್ಪರ್ಧಿಸಿದ್ರು. ಅಮೇಥಿಯಲ್ಲಿ ಸೋತು ವಯನಾಡಿನಲ್ಲಿ ಭರ್ಜರಿ ಜಯ ಸಾಧಿಸಿದ್ರು. ಚುನಾವಣೆಗೂ ಮುಂಚೆ ಕಾಲಿಗೆ ಚಕ್ರ ಕಟ್ಟಿಕೊಂಡವರೆಂತೆ ದೇಶಾದ್ಯಂತ ಅಬ್ಬರ ಪ್ರಚಾರ ನಡೆಸಿದ ರಾಹುಲ್​ ಗಾಂಧಿ ತಾವು ಸ್ಪರ್ಧಿಸಿದ್ದ ವಯನಾಡಿನಲ್ಲೂ ಅಬ್ಬರದ ಪ್ರಚಾರ ಮಾಡಿದ್ರು.

ವಯನಾಡಿನಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ್ರು. ರಾಹುಲ್ ಗಾಂಧಿ ಹಿಂದಿ ಭಾಷಣವನ್ನ ಲೋಕಲ್​ ಲೀಡರ್​ ಒಬ್ರು ಟ್ರಾನ್ಸ್​ಲೇಟ್ ಮಾಡ್ತಿದ್ರು. ರಾಹುಲ್​ಗೆ ಮಲೆಯಾಳಿ ಬರಲ್ಲ, ಇನ್ನೊಬ್ರಿಗೆ ಸರಿಯಾಗಿ ಹಿಂದಿ ಬರಲ್ಲ. ಆ  ಮಾತು ಅದ್ಯಾವ ಪರಿ ಟ್ರೋಲ್​ ಆಗಿತ್ತು ಅಂತೀರಾ. ಅದನ್ನ ನೋಡಿ ಎಲ್ರೂ ಬಿದ್ದು ಬಿದ್ದೂ ನಕ್ಕಿದ್ದೇ ನಕ್ಕಿದ್ದು.

ಸಂಸತ್​ನಲ್ಲಿ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡ ಸಂಗತಿ ವ್ಯಾಪಕ ಚರ್ಚೆಯಾಗಿತ್ತು. ಅಷ್ಟೇ ಹಾಸ್ಯದ ಸರಕೂ ಆಯ್ತು. ಅದು ಸಿಕ್ಕಾಪಟ್ಟೆ ಟ್ರೋಲ್​ ಆಗಿತ್ತು. ಪ್ರಿಯಾ ವಾರಿಯರ್​ ಕಣ್ಸನ್ನೆಗೆ ಹೋಲಿಸಿ ಟ್ರೋಲ್​ ಆಗಿದ್ರು ರಾಹುಲ್​ ಗಾಂಧಿ

ಹೀಗೆ ಅತೀ ಹೆಚ್ಚು ಟ್ರೋಲ್​ ಆಗಿದ್ದು ಅಂದ್ರೆ ಅದು ರಾಹುಲ್ ಗಾಂಧಿ ಅಂತಲೇ ಹೇಳಬಹುದು. ಅಷ್ಟರ ಮಟ್ಟಿಗೆ ರಾಹುಲ್​​ ಅವರನ್ನು ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ.

ಈ ಬಾರಿ ಹೇಗಾದ್ರು ಸರಿಯೇ ಮೋದಿಗೆ ಸೋಲಿನ ರುಚಿ ತೋರಿಸಲೇ ಬೇಕು ಅಂತಾ ಪ್ರಾದೇಶಿಕ ಪಕ್ಷಗಳು ಮಹಾಘಟ್ ಬಂಧನ್ ಮಾಡಿಕೊಂಡಿದ್ರು​. ಆದ್ರೆ ಕಳೆದ ಬಾರಿ ಮೋದಿ ಅಲೆಯಿದ್ರೆ, ಈ ಬಾರಿ ಮೋದಿ ಸುನಾಮಿಯಿಂದ ಎಲ್ಲಾ ಪಕ್ಷಗಳು ಕೊಚ್ಚಿಕೊಂಡು ಹೋಗಿದ್ವು. ಹಾಗಾಗಿ ಮಹಾಘಟ್​ಬಂಧನ್​ ನಾಯಕರ ಜನ್ಮ ಜಾಲಾಡಿವೆ ಟ್ರೋಲ್ ಪೇಜ್​ಗಳು.

ಮೋದಿ ವಿರುದ್ಧ ಅಬ್ಬರಿಸಿ ಬೊಬ್ಬರಿದ ನಾಯಕ ಚಂದ್ರಬಾಬು ನಾಯ್ಡು ಕೊಚ್ಚಿಕೊಂಡು ಹೋಗಿದ್ದಾರೆ. ವೈಎಸ್​ಆರ್​ಸಿಪಿ ಎದುರು ಟಿಡಿಪಿ ನೆಲಕಚ್ಚಿ ಹೋಗಿದೆ. ಅಷ್ಟೇ ಅಲ್ಲಾ ಮಹಾಘಟಬಂಧನ್ ಮಾಡಿಕೊಂಡು ಮೋದಿ ವಿರುದ್ಧ ಗೆದ್ದು ಬೀಗೋ ಕನಸು ಕೂಡ ನುಚ್ಚು ನೂರಾಗಿದೆ. ಇದಾದ ನಂತರ ಚಂದ್ರಬಾಬು ನಾಯ್ಡು ಸ್ಥಿತಿ ಹೇಗಾಗಿ ನೋಡಿ.

ಇದೆಲ್ಲಾ ಓಕೆ. ಲೋಕ ಸಮರದಲ್ಲಿ ವಿಪಕ್ಷಗಳನ್ನು ಧೂಳಿಪಟ ಮಾಡಿದ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕೇಸರಿ ಪಾಳಯ ಸಂಭ್ರಮದಲ್ಲಿ ಮುಳುಗಿ ಹೋಗಿದೆ. ಜ್ಯೂನಿಯರ್​ ಅಮಿತ್ ಶಾ ಹೇಗೆ ಸ್ಟೆಪ್ ಹಾಕಿದ್ದಾರೆ ನೋಡಿ.

ಅದು ಏನೇ ಆಗಿರಲಿ ಅಥವಾ ಯಾರೇ ಆಗಿರಲೀ ಟ್ರೋಲ್ ಮಾಡದೇ ಬಿಡೋದೆ ಇಲ್ಲ. ಟ್ರೋಲ್ ಆದವರಿಗೆ ಸಿಟ್ಟು ಪಿತ್ತೆ ನೆತ್ತಿಗೇರಿದ್ರೆ ಅವುಗಳು ನೋಡುಗರನ್ನು ನಗೆ ಕಡಲಲ್ಲಿ ತೇಳಿಸುತ್ತವೆ. ಅಂತಹ ಸಾವಿರ ಟ್ರೋಲ್​ಗಳು ದಿನ ಬೆಳಗಾದ್ರೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್​ ಮಾಡುತ್ತವೆ.

 

LEAVE A REPLY

Please enter your comment!
Please enter your name here

- Advertisment -

Most Popular

ಆಧುನಿಕ ಭಗೀರಥ ಕಾಮೇಗೌಡರಿಗೆ ಅನಾರೋಗ್ಯ; ದಿಢೀರ್ ಆಸ್ಪತ್ರೆಗೆ ದಾಖಲು.

ಮಂಡ್ಯ: ಮಂಡ್ಯದ ಕೆರೆ ಕಾಮೇಗೌಡರು ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ನಲ್ಲಿ ಪ್ರಶಂಸೆಗೆ ಒಳಪಟ್ಟ ಕೆರೆ ಕಾಮೇಗೌಡರು ದೇಶ ಮಾತ್ರವಲ್ಲ, ವಿಶ್ವದ ಹಲವೆಡೆ...

ಮಳೆ ಮಧ್ಯೆಯೂ ಕರ್ತವ್ಯ ನಿಷ್ಠೆ : ಎಸ್​.ಪಿ ಮೆಚ್ಚುಗೆ

ಬಾಗಲಕೋಟೆ: ಜಿಲ್ಲೆಯ ಕಲಾದಗಿಯಲ್ಲಿ ಗ್ರಾಮದಲ್ಲಿ ಸೋಂಕಿತರು ಹೆಚ್ಚಿದ ಪರಿಣಾಮ ಗ್ರಾಮ ಸೀಲ್ ಡೌನ್ ಮಾಡಲಾಗಿದೆ.ಮಳೆ ಮಧ್ಯೆಯೂ ಪೋಲಿಸ ಪೇದೆ ಕತ೯ವ್ಯ ನಿಷ್ಠೆ ಮೆರದ ವಿಡಿಯೋ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.ಸೀಲ್ ಡೌನ್ ಆಗಿರೋ...

ಗಮನ ಸೆಳೆದ ‘ಮಾಸ್ಕ್ ಪರಾಟಾ..!’

ಕರೋನಾದಿಂದ ಬಚಾವಾಗಲು ಇರುವ ಬಹು ಮುಖ್ಯ ಅಸ್ತ್ರ ಎಂದರೆ ಅದು ಫೇಸ್ ಮಾಸ್ಕ್. ಎಲ್ಲರೂ ಫೇಸ್ ಮಾಸ್ಕ್ ಬಳಸಿ ಎಂದು ಸರ್ಕಾರ ಸೇರಿದಂತೆ, ಸಾಕಷ್ಟು ಮಂದಿ ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಇಲ್ಲೊಂದು ಹೊಟೆಲ್...

ಚಾರ್ಮಾಡಿ ಘಾಟ್​​ನಲ್ಲಿ ರಾತ್ರಿ ಸಂಚಾರಕ್ಕೆ ನಿರ್ಬಂಧ

ಚಿಕ್ಕಮಗಳೂರು : ಮಂಗಳೂರು-ಚಿಕ್ಕಮಗಳೂರು ಮಧ್ಯೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ನಲ್ಲಿ ಭಾರೀ ಮಳೆಯಿಂದಾಗಿ ಮಣ್ಣು ಕುಸಿಯುವ ಭೀತಿ ಎದುರಾಗಿದ್ದು ಇದನ್ನು ತಪ್ಪಿಸಲು ಘಾಟ್ ನಲ್ಲಿ ಸಂಜೆ 7 ಗಂಟೆಯಿಂದ ಬೆಳಗ್ಗೆ 7...

Recent Comments