Friday, September 30, 2022
Powertv Logo
Homeರಾಜ್ಯರಾಜ್ಯದಲ್ಲಿ ಇಂದಿನಿಂದ ಲಾಕ್​ಡೌನ್​ಗೆ ರಿಲೀಫ್ : ಏನಿರುತ್ತೆ? ಏನಿರಲ್ಲ?

ರಾಜ್ಯದಲ್ಲಿ ಇಂದಿನಿಂದ ಲಾಕ್​ಡೌನ್​ಗೆ ರಿಲೀಫ್ : ಏನಿರುತ್ತೆ? ಏನಿರಲ್ಲ?

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹರಡುವ ಭೀತಿಯಿಂದ ಮೇ 3ರವರೆಗೆ ಲಾಕ್​ಡೌನ್ ಆದೇಶವನ್ನು ಘೋಷಿಸಲಾಗಿದೆ. ಆದರೆ ಇದೀಗ ರಾಜ್ಯ ಸರ್ಕಾರ ಇಂದಿನಿಂದ ಲಾಕ್​ಡೌನ್​ಗೆ ರಿಲೀಫ್ ನೀಡಲು ಮುಂದಾಗಿದ್ದು, ರಾಜ್ಯ ಸರ್ಕಾರದ ಆದಾಯಕ್ಕೆ ಹೊಡೆತ ಬಿದ್ದ ಪರಿಣಾಮ ಆರ್ಥಿಕತೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಒಂದಷ್ಟು ವಿನಾಯಿತಿಗಳನ್ನು ನಿರ್ಧರಿಸಲಾಗಿದೆ. ಈ ಮೂಲಕ ಇಂದಿನಿಂದ ರಾಜ್ಯದಲ್ಲಿ ಹಲವು ನಿಯಮಗಳನ್ನು ವಿಧಿಸಿ ಲಾಕ್​ಡೌನ್ ಸಡಿಲಿಕೆಗೆ ಆದೇಶವನ್ನು ನೀಡಲಾಗಿದೆ. ಆದರೆ ಹಾಟ್​ಸ್ಪಾಟ್​ ಏರಿಯಾಗಳಲ್ಲಿ ಲಾಕ್​ಡೌನ್ ಸಡಿಲಿಕೆ ಅನ್ವಯಿಸುವುದಿಲ್ಲ. ಹಾಗಾಗಿ ಹಾಟ್​ಸ್ಪಾಟ್ ಏರಿಯಾಗಳಲ್ಲಿ ಲಾಕ್​ಡೌನ್ ಮುಂದುವರಿಯಲಿದೆ.

 ಇಂದಿನಿಂದ ಯಾವ್ಯಾವ ಸೌಲಭ್ಯಗಳು ಲಭ್ಯವಾಗಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ…

ಏನಿರುತ್ತೆ?

 • ಕಟ್ಟಡ ಕಾರ್ಮಿಕರಿಗೆ, ರಸ್ತೆ ಕಾಮಗಾರಿಗಳಿಗೆ ಅವಕಾಶ
 • ಗೂಡ್ಸ್‌ ರೈಲು, ಕಾರ್ಗೋ ವಿಮಾನಗಳಿಗೂ ಅನುಮತಿ
 • ಸಿಮೆಂಟ್‌, ಕಬ್ಬಿಣ, ಇಟ್ಟಿಗೆ ಸಾಗಣೆಗಿದ್ದ ನಿರ್ಬಂಧ ತೆರವು
 • ಬಂದರುಗಳಿಂದ ಇದ್ದ ಸರಕು ಸಾಗಣೆ ನಿರ್ಬಂಧಕ್ಕೆ ವಿನಾಯಿತಿ
 • ಆಸ್ಪತ್ರೆಗಳು, ನರ್ಸಿಂಗ್ ಹೋಮ್ಸ್, ಕ್ಲಿನಿಕ್​ಗಳಲ್ಲಿ ಎಂದಿನಂತೆ ಸೇವೆ 
 • ವೆಟರ್ನರಿ ಆಸ್ಪತ್ರೆಗಳು, ಡಿಸ್ಪೆನ್ಸರೀಸ್, ಪೆಥಾಲಜಿ ಸೇವೆಗಳು ಲಭ್ಯ 
 • ಮೆಡಿಕಲ್​ ಶಾಪ್​ಗಳು, ಲ್ಯಾಬೋರೇಟರಿಗಳೂ ಓಪನ್
 • ದಿನನಿತ್ಯದ ವಸ್ತುಗಳ ಸಾಗಣೆಗೆ ಅವಕಾಶ ವಿಸ್ತರಣೆ
 • ಗ್ರಾಮೀಣ ಭಾಗದ ಸಣ್ಣ ಕೈಗಾರಿಕೆಗಳ ಆರಂಭಕ್ಕೆ ಅಸ್ತು
 • ಎಲ್‌ಪಿಜಿ, ಕೊರಿಯರ್, ಪೋಸ್ಟಲ್‌ ಸೌಲಭ್ಯಕ್ಕೂ ಅವಕಾಶ
 • ಲಾರಿ ಸರ್ವೀಸ್‌ ಸೆಂಟರ್‌ ಕಾರ್ಯಾರಂಭ ಮಾಡಬಹುದು
 • ಕೃಷಿ ಮತ್ತು ಮೀನುಗಾರಿಕೆಗೆ ಸಂಪೂರ್ಣ ಅವಕಾಶ
 • ಎಪಿಎಂಸಿ ಮಾರ್ಕೆಟ್​ಗಳಲ್ಲಿ ತರಕಾರಿ ಮಾರಾಟಕ್ಕೆ ಗ್ರೀನ್ ಸಿಗ್ನಲ್
 • ಬ್ಯಾಂಕ್​ಗಳು, ಎಟಿಎಂಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ
 • ಕಿರಾಣಿ ಅಂಗಡಿ, ಮಾಂಸದ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯ
 • ಅಮೆಜಾನ್, ಫ್ಲಿಪ್​ಕಾರ್ಟ್​ಗಳ ಆನ್​ಲೈನ್​ ಖರೀದಿ ಸೇವೆ ಲಭ್ಯ
 • ವಿಮಾನ ನಿಲ್ದಾಣ, ರೇಲ್ವೆ ಸ್ಟೇಷನ್, ಕಂಟೇನರ್ ಡಿಪೋಗಳಲ್ಲಿ ಸಂಸ್ಕರಣಾ ಘಟಕ ಸೇವೆ
 • ಲಾಕ್​ಡೌನ್​ನಿಂದ ಸಿಲುಕಿಕೊಂಡಿರುವ ಪ್ರವಾಸಿಗರಿಗೆ ವಸತಿ ಕಲ್ಪಿಸಿರುವ ಹೋಟೆಲ್, ಹೋಮ್ ​​ಸ್ಟೇ, ಲಾಡ್ಜ್​ಗಳಿಗೆ ಅನುಮತಿ
 • ರಸ್ತೆ, ನೀರಾವರಿ ಯೋಜನೆ, ಕಟ್ಟಡ ನಿರ್ಮಾಣಕ್ಕೆ ಅನುಮತಿ
 • ಅಗತ್ಯ ವಸ್ತುಗಳ ಉತ್ಪಾದನೆ, ಔಷಧಿ ಉತ್ಪಾದನಾ, ಪ್ಯಾರಾಮೆಡಿಕಲ್ ಉಪಕರಣಗಳ ಉತ್ಪಾದನಾ ಕೈಗಾರಿಕೆಗಳಿಗೆ ನಿರ್ಬಂಧವಿಲ್ಲ
 • ಮೆಟ್ರೋ ರೈಲು ಯೋಜನೆ ಕಾಮಗಾರಿಗೆ ಅನುಮತಿ
 • ಐಟಿಬಿಟಿ ಕಂಪನಿಗಳಿಗೆ ಅನುಮತಿ ನೀಡಿದ ರಾಜ್ಯ ಸರ್ಕಾರ
 • ಶೇ.33ರಷ್ಟು ಸಿಬ್ಬಂದಿ ಕೆಲಸ ಮಾಡಲು ಅನುಮತಿ ನೀಡಿದ್ದು, ಉಳಿದ ನೌಕರರು ವರ್ಕ್​ ಫ್ರಮ್​ ಹೋಮ್​ಗೆ ಸೂಚನೆ
 • ವಾಹನಗಳಲ್ಲೂ ಸಾಮಾಜಿಕ ಅಂತರ, ಮಾಸ್ಕ್​ ಕಡ್ಡಾಯ

ಏನಿರಲ್ಲ?

 • ಶಾಲಾ, ಕಾಲೇಜು, ಕೋಚಿಂಗ್‌ ಸೆಂಟರ್‌ ನಡೆಸುವಂತಿಲ್ಲ
 • ವಿಮಾನ, ರೈಲು, ಸಾರಿಗೆ ಸೌಲಭ್ಯ ಸಂಪೂರ್ಣ ರದ್ದು
 • ಎಲ್ಲಾ ಅಂತಾರಾಷ್ಟ್ರೀಯ, ದೇಶೀಯ ವಿಮಾನ ರದ್ದು
 • ರೈಲು, ಬಸ್ ಸಾರಿಗೆ, ಮೆಟ್ರೋ ಸಂಚಾರಕ್ಕೆ ಅವಕಾಶವಿಲ್ಲ
 • ರಾಜ್ಯದಲ್ಲಿ ಯಾವುದೇ ಟ್ಯಾಕ್ಸಿ ಸೇವೆಯೂ ಇರಲ್ಲ
 • ರೆಸ್ಟೋರೆಂಟ್, ಹೊಟೇಲ್​ಗಳು ತೆರೆಯುವಂತಿಲ್ಲ
 • ಧಾರ್ಮಿಕ ಸಭೆ, ಸಮಾರಂಭ ನಡೆಸುವಂತಿಲ್ಲ
 • ಚಿತ್ರಮಂದಿರ, ಮಾಲ್‌ಗಳು ತೆರೆಯುವಂತಿಲ್ಲ
 • ಮೇ 3 ರವರೆಗೂ ಮದ್ಯ ಮಾರಾಟ ಮಾಡುವಂತಿಲ್ಲ
 • ಸಾರ್ವಜನಿಕ ವಲಯಗಳಲ್ಲಿ ಕಾಫಿ, ಟೀ ಮಾರುವಂತಿಲ್ಲ
 • ಹಾಟ್​ಸ್ಪಾಟ್​ ಝೋನ್​ಗಳಿಗೆ ಪರೀಕ್ಷೆ ಇಲ್ಲದೇ ಪ್ರವೇಶ ಇಲ್ಲ
 • ಕ್ವಾರಂಟೈನ್ ನಿಯಮ ಉಲ್ಲಂಘಿಸಿದರೆ ಅವರ ಮೇಲೆ IPC ಸೆಕ್ಷನ್ 188ರಡಿ ಕೇಸ್
 • ಯಾರಾದರೂ ಮೃತಪಟ್ಟರೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು 20 ಜನರಿಗಷ್ಟೇ ಅವಕಾಶ
 • ವೈದ್ಯಕೀಯ ತುರ್ತು ಹೊರತುಪಡಿಸಿ ಅಂತರಾಜ್ಯ ಹಾಗೂ ಅಂತರ್​ಜಿಲ್ಲೆ ಓಡಾಟಕ್ಕಿಲ್ಲ ಅವಕಾಶ

 

15 COMMENTS

 1. My wife and i got so comfortable when Jordan managed to complete his survey while using the precious recommendations he obtained out of the site. It’s not at all simplistic to simply possibly be giving away guides that people have been trying to sell. So we recognize we have you to be grateful to for this. Those illustrations you have made, the easy web site menu, the friendships your site make it possible to foster – it’s got most awesome, and it is helping our son and the family imagine that that idea is awesome, which is certainly seriously essential. Thanks for all the pieces!

LEAVE A REPLY

Please enter your comment!
Please enter your name here

- Advertisment -

Most Popular

Recent Comments