ಬೆಂಗಳೂರು: ಡೆಡ್ಲಿ ಕೊರೋನಾ ವೈರಸ್ ಹರಡುವ ಭೀತಿ ಹಿನ್ನೆಲೆ ರಾಜ್ಯದಾದ್ಯಂತ ಲಾಕ್ಡೌನ್ ಆದೇಶ ಜಾರಿಯಲ್ಲಿದೆ. ಇದರ ಹಿನ್ನೆಲೆ ಸಾರಿಗೆ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ. ಹಾಗಾಗಿ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಗಳು ರಸ್ತೆಗಿಲಿಯದೆ ಬಹಳ ದಿನಗಳೇ ಆಗಿವೆ. ಇದರಿಂದಾಗಿ ಕೆಎಸ್ಆರ್ಟಿಸಿಗೆ ಕೋಟಿ ಕೋಟಿ ನಷ್ಟವಾಗಿದ್ದು, ಲಾಕ್ಡೌನ್ನಿಂದ ಸಾರಿಗೆ ನಿಗಮವೇ ಹೈರಾಣಾಗಿದೆ.
ಲಾಕ್ಡೌನ್ ಆದ ಬಳಿಕ ಒಟ್ಟಾರೆಯಾಗಿ 8,139 ಬಸ್ಗಳು ರಸ್ತೆಗಿಳಿಯದೇ ಸಂಚಾರ ಸ್ಥಗಿತಗೊಳಿಸಿದೆ. ಹಾಗಾಗಿ ಮಾರ್ಚ್ 1 ರಿಂದ ಏಪ್ರಿಲ್ 28 ರವರೆಗೆ ಕೆಎಸ್ಆರ್ಟಿಸಿಗೆ ಒಟ್ಟು 403.74 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಕರ್ನಾಟಕ ರಸ್ತೆ ಸಾರಿಗೆ ನಿಗಮ ಮಾಹಿತಿ ನೀಡಿದೆ.