ಬೆಂಗಳೂರು: ರಾಜ್ಯದಲ್ಲಿ 3.O ಲಾಕ್ಡೌನ್ ಅಂತ್ಯಗೊಂಡಿದ್ದು, 4.O ಲಾಕ್ಡೌನ್ ಪ್ರಾರಂಭವಾಗಿದೆ. ಈ ಬಾರಿ ಲಾಕ್ಡೌನ್ನಲ್ಲಿ ಯಾವೆಲ್ಲಾ ಸೇವೆಗಳಿಗೆ ಸಡಿಲಿಕೆ ಎಂಬುದರ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಸಭೆ ನಡೆಸಿ ಚರ್ಚೆ ನಡೆಸಿದ್ದು, ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದಾರೆ. ಇದೀಗ ಬಂದಿರುವ ಮಾರ್ಗಸೂಚಿ ಪ್ರಕಾರ ರಾಜ್ಯದಲ್ಲಿ ಲಭ್ಯವಿರುವ ಸೇವೆಗಳ ಬಗ್ಗೆ ಮಾಹಿತಿ ಈ ಕೆಳಗಿನಂತಿವೆ.
ಏನಿರುತ್ತೆ…
- ರಾಜ್ಯದಲ್ಲಿ ಸೋಮವಾರದಿಂದ ಶನಿವಾರದವರೆಗೂ ಲಾಕ್ಡೌನ್ ಸಡಿಲಿಕೆ
- ಮಾಲ್, ಥಿಯೇಟರ್, ಹೋಟೆಲ್ ಬಿಟ್ಟು ಎಲ್ಲ ಅಂಗಡಿ ಓಪನ್
- ಕೆಎಸ್ಆರ್ಟಿಸಿ, ಬಿಎಂಟಿಸಿ, ಖಾಸಗಿ ಬಸ್ಗಳ ಷರತ್ತುಬದ್ಧ ಸಂಚಾರಕ್ಕೆ ಅನುಮತಿ
- ಬಸ್ನಲ್ಲಿ 30 ಮಂದಿ ಪ್ರಯಾಣಿಕರ ಸಂಚಾರಕ್ಕೆ ಮಾತ್ರ ಅನುಮತಿ
- ಬಸ್ನಲ್ಲಿ ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಕಡ್ಡಾಯ
- ಆಟೋ, ಕ್ಯಾಬ್, ಟ್ಯಾಕ್ಸಿ ಸಂಚಾರಕ್ಕೆ ಅವಕಾಶ ಆದರೆ ಚಾಲಕ ಹೊರತು ಪಡಿಸಿ ಇಬ್ಬರಿಗೆ ಮಾತ್ರ ಅವಕಾಶ
- ಮ್ಯಾಕ್ಸಿಕ್ಯಾಬ್ನಲ್ಲಿ ಚಾಲಕ ಬಿಟ್ಟು ಮೂವರಿಗೆ ಅವಕಾಶ
- ಬೀದಿ ಬದಿ ವ್ಯಾಪಾರಕ್ಕೂ ಗ್ರೀನ್ ಸಿಗ್ನಲ್
- ಪಾನ್, ಪಾನಿಪುರಿ ಅಂಗಡಿಗಳನ್ನು ತೆರೆಯಲು ಅವಕಾಶ
- ನಾಳೆಯಿಂದ ರಾಜ್ಯಾದ್ಯಂತ ಸಂಚರಿಸಲಿರುವ ರೈಲುಗಳು
- ರೈಲಿನಲ್ಲಿ ಅಂತರ್ ಜಿಲ್ಲೆ ಪ್ರಯಾಣಕ್ಕೆ ರಾಜ್ಯ ಸರ್ಕಾರ ಅಸ್ತು
- ಸಲೂನ್, ಕ್ಷೌರಿಕ ಅಂಗಡಿಗಳು ಓಪನ್
- ಬೆಳಗ್ಗೆ 7-9, ಸಂಜೆ 5-7ರವರೆಗೆ ಎಲ್ಲಾ ಪಾರ್ಕ್ಗಳನ್ನು ತೆರೆಯಲು ಅವಕಾಶ
ಏನಿರಲ್ಲ…
- ಭಾನುವಾರ ರಾಜ್ಯಾದ್ಯಂತ ಫುಲ್ ಲಾಕ್ಡೌನ್
- ಭಾನುವಾರ ಬಸ್, ಟ್ಯಾಕ್ಸಿ, ಹೋಟೆಲ್ ಏನು ಇರಲ್ಲ
- ಸಂಜೆ 7 ರಿಂದ ಬೆಳಗ್ಗೆ 7 ಗಂಟೆವರೆಗೂ ಕರ್ಫ್ಯೂ ಜಾರಿ
- ತುರ್ತು ಸಂದರ್ಭ ಹೊರತುಪಡಿಸಿ ಅಂತಾರಾಜ್ಯ ಬಸ್ ಸಂಚಾರಕ್ಕೆ ಅನುಮತಿ ಇಲ್ಲ
- ಮೆಟ್ರೋ ಸಂಚಾರಕ್ಕೆ ಅನುಮತಿ ನೀಡದ ಸರ್ಕಾರ
- ಮಾಲ್, ಥಿಯೇಟರ್, ಹೋಟೆಲ್ಗಳು ಓಪನ್ ಇಲ್ಲ
- ನಾಳೆಯಿಂದ ಕಂಟೈನ್ಮೆಂಟ್ ಝೋನ್ಗಳು ಮತ್ತಷ್ಟು ಕಠಿಣ
- ಕಂಟೈನ್ಮೆಂಟ್ ಝೋನ್ಗಳಲ್ಲಿ ಅಗತ್ಯ ಸೇವೆ ಬಿಟ್ರೆ ಬೇರೇನು ಇರಲ್ಲ
- ಕಂಟೈನ್ಮೆಂಟ್ ಝೋನ್ಗಳಲ್ಲಿ ಬಸ್ ಸಂಚಾರ ನಿಷೇಧ
- ಕಂಟೈನ್ಮೆಂಟ್ ಝೋನ್ಗಳಲ್ಲಿ ಟ್ಯಾಕ್ಸಿ, ಆಟೋ ಸಂಚಾರ ಇರಲ್ಲ
1phosphate