Home ರಾಜ್ಯ ಇಂದಿನಿಂದ ಲಾಕ್​ಡೌನ್ 5.O ಆರಂಭ : ರಾಜ್ಯದಲ್ಲಿ ಏನಿರುತ್ತೆ ? ಏನಿರಲ್ಲ ?

ಇಂದಿನಿಂದ ಲಾಕ್​ಡೌನ್ 5.O ಆರಂಭ : ರಾಜ್ಯದಲ್ಲಿ ಏನಿರುತ್ತೆ ? ಏನಿರಲ್ಲ ?

ಬೆಂಗಳೂರು: ರಾಜ್ಯದಲ್ಲಿ 4.O ಲಾಕ್​ಡೌನ್ ಅಂತ್ಯಗೊಂಡಿದ್ದು, ಇಂದಿನಿಂದ 5.O ಲಾಕ್​ಡೌನ್ ಪ್ರಾರಂಭವಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದು, ಜೂನ್ 30 ರವರೆಗೆ ಲಾಕ್​ಡೌನ್ ಮುಂದುವರಿಯಲಿದೆ. ಇನ್ನು ಈ ಬಾರಿಯ ಲಾಕ್​ಡೌನ್​ನಲ್ಲಿ  ಯಾವೆಲ್ಲಾ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ ಎಂಬ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದಾರೆ. ಜೂನ್ 8 ರಿಂದ ದೇವಸ್ಥಾನಗಳು, ಮಾಲ್​, ಹೋಟೆಲ್ ಹಾಗೂ ರೆಸ್ಟೊರೆಂಟ್​ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಇದೀಗ ಬಂದಿರುವ ಮಾರ್ಗಸೂಚಿ ಪ್ರಕಾರ ರಾಜ್ಯದಲ್ಲಿ ಲಭ್ಯವಿರುವ ಸೇವೆಗಳ ಬಗ್ಗೆ ಮಾಹಿತಿ ಈ ಕೆಳಗಿನಂತಿವೆ.

 • ಎಲ್ಲಾ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ
 • ಎಲ್ಲಾ ರೀತಿಯ ಕೈಗಾರಿಕಾ, ಉತ್ಪಾದನಾ ಚಟುವಟಿಕೆಗೆ ಅವಕಾಶ
 • ಎಲ್ಲಾ ರೀತಿಯ ಕಚೇರಿಗಳೂ ಕೆಲಸ ಆರಂಭಿಸಬಹುದು. ಆದರೆ ವರ್ಕ್ ಫ್ರಂ ಹೋಂ ಅವಕಾಶ ಇದ್ದರೆ ಅದನ್ನೇ ಮಾಡಬೇಕು
 • ಮದ್ಯದ ಅಂಗಡಿ ತೆರೆಯುವುದುಕ್ಕೂ ಅವಕಾಶ
 • ಸಲೂನ್, ಕ್ಷೌರಿಕ ಅಂಗಡಿಗಳು ಓಪನ್
 • ಹೋಟೆಲ್, ರೆಸ್ಟೋರೆಂಟ್, ಮಾಲ್ ತೆರೆಯಲು ಅವಕಾಶ ಸಿಗುವ ಸಾಧ್ಯತೆ
 • ಮಾಲ್​ಗಳಲ್ಲಿ ಲಿಫ್ಟ್, ಎಲಿವೇಟರ್​ಗಗಳನ್ನು ಕಡಿಮೆ ಬಳಸಬೇಕು
 • ಬಸ್, ಆಟೋ, ಟ್ಯಾಕ್ಸಿ, ಸೈಕಲ್ ರಿಕ್ಷಾಗಳಿಗೆ ಅವಕಾಶ
 • ದೇವಸ್ಥಾನ, ಮಸೀದಿ, ಚರ್ಚ್ ತೆರೆಯುವುದಕ್ಕೂ ಅವಕಾಶ
 • ಮದುವೆ ಮಾಡಲು ಅನುಮತಿ ಪಡೆಯುವುದು ಕಡ್ಡಾಯವಾಗಿರಲಿದೆ. 
 • ವಾಕಿಂಗ್ ಮತ್ತು ಜಾಗಿಂಗ್​ಗಾಗಿ ಉದ್ಯಾನವನಗಳನ್ನು ತೆರೆಯಬಹುದು
 • ಶಾಲಾ-ಕಾಲೇಜುಗಳು ಸದ್ಯಕ್ಕಿಲ್ಲ ಓಪನ್
 • ಕಂಟೈನ್ಮೆಂಟ್​ ಝೋನ್​ಗಳಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್
 • ಮೆಟ್ರೋ, ರೈಲು, ವಿಮಾನಗಳು ಸ್ಥಗಿತ
 • ಮಾಲ್, ಜಿಮ್ ಹಾಗೂ ಸ್ವಿಮ್ಮಿಂಗ್ ಪೂಲ್​ಗಳನ್ನು ಎಂದಿನಂತೆ ಬಂದ್
 • ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ
 • ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು, ಗುಟ್ಕಾ, ಮದ್ಯ ಸೇವನೆ ನಿರ್ಬಂಧ
 • 10 ವರ್ಷದ ಒಳಗಿನ ಮಕ್ಕಳು, ಗರ್ಭಿಣಿಯರ ಸಂಚಾರಕ್ಕೆ ನಿರ್ಬಂಧ
 • 60 ವರ್ಷ ಮೇಲ್ಪಟ್ಟವರು ಕೂಡಾ ಹೊರಗಡೆ ಓಡಾಡುವಂತಿಲ್ಲ

LEAVE A REPLY

Please enter your comment!
Please enter your name here

- Advertisment -

Most Popular

ಸೋಂಕಿತನ ಅಂತ್ಯಕ್ರಿಯೇ ನೆರವೇರಿಸಿದ ಮುಸಲ್ಮಾನ್ ಯುವಕರು..!  

ಶಿವಮೊಗ್ಗ : ಕೊರೋನಾದಿಂದ ಸಾವನಪ್ಪಿದವನಿಗೆ, ಕುಟುಂಬಸ್ಥರು, ಮತ್ತು ನೆರೆಹೊರೆಯವರು, ಅಂತ್ಯಕ್ರಿಯೇ ಮಾಡಲು ಹಿಂಜರಿದ ಹಿನ್ನೆಲೆಯಲ್ಲಿ, ಮುಸಲ್ಮಾನ್ ಯುವಕರೇ ನಿಂತು ಅಂತ್ಯಕ್ರಿಯೇ ನಡೆಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.  ಶಿವಮೊಗ್ಗದ  ಶಿರಾಳಕೊಪ್ಪದಲ್ಲಿಯೇ ಈ ಘಟನೆ ನಡೆದಿದ್ದು, ಇಲ್ಲಿನ...

ಲಾಕ್ ಡೌನ್ ವೇಳೆಯೇ ಅರಣ್ಯ ಲೂಟಿಗೆ ಯತ್ನಿಸಿದ ಖದೀಮರು..!

ಶಿವಮೊಗ್ಗ : ಇತ್ತ ರಾಜ್ಯದೆಲ್ಲೆಡೆ ಲಾಕ್ ಡೌನ್ ಘೋಷಣೆಯಾಗಿದೆ. ಅದೆಷ್ಟೊ ಜನರು ಮನೆ ಸೇರಿಕೊಂಡಿದ್ದರೆ, ಮತ್ತೆ ಕೆಲವರು ಆಸ್ಪತ್ರೆಗಳಿಗೆ ಅಲೆಯುತ್ತಿದ್ದಾರೆ.  ಇನ್ನೂ ಕೆಲವರು ಹೇಗಪ್ಪಾ ಲಸಿಕೆ ಪಡೆದುಕೊಳ್ಳೋದು ಎಂಬ ಯೋಚನೆಯಲ್ಲಿದ್ದಾರೆ. ಆದ್ರೆ ಇಲ್ಲಿನ...

‘ನನ್ನಿಂದ ಮನೆಯವರೆಗೂ ಸೋಂಕು ತಗುಲಿದೆ ಎಂದು ತಹಶೀಲ್ದಾರ್ ಸೂಸೈಡ್’

ಚಿಕ್ಕಮಗಳೂರು: ನನ್ನಿಂದಲೇ ನನ್ನ ಮಕ್ಕಳು, ಮೊಮ್ಮಕ್ಕಳಿಗೆ ಕೊರೋನ ಬಂತು. ನನಗೆ ವಯಸ್ಸಾಗಿದ್ದು, ಬದುಕುವ ಭರವಸೆ ಕಡಿಮೆ ಇದೆ. ಆದರೆ, ನನ್ನ ಮಕ್ಕಳು, ಮೊಮ್ಮಕ್ಕಳಿಗೆ ನನ್ನ ಕಣ್ಣೆದುರೇ ಏನಾದರೂ ಆದರೆ ಅದನ್ನ ನನ್ನಿಂದ ಸಹಿಸಿಕೊಳ್ಳಲು...

ಮನೆ, ಮನೆಗೆ ಹಾಲು ವಿತರಣೆಗೆ ಪೊಲೀಸರ ಅಡ್ಡಿ..!  

ಶಿವಮೊಗ್ಗ: ನಗರ ಪ್ರದೇಶದ ಮನೆಮನೆಗಳಿಗೆ ಹಾಲು ಮಾರಾಟ ಮಾಡುವ ರೈತರಿಗೂ ಬಿಡದೇ ಪೊಲೀಸರು, ದರ್ಪ ಮೆರೆದಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.  ಹಾಲು, ತರಕಾರಿ ಮನೆಮನೆಗೆ ತೆರಳಿ ಮಾರಾಟ ಮಾಡಬಹುದು ಎಂದು ಜಿಲ್ಲಾಡಳಿತ ಸೂಚನೆ...

Recent Comments