Tuesday, September 27, 2022
Powertv Logo
Homeರಾಜ್ಯರಾಜ್ಯದ ಗ್ರೀನ್​ ಝೋನ್​ಗಳಲ್ಲಿ ಲಾಕ್​ಡೌನ್​ನಿಂದ ರಿಲೀಫ್ : ಏನಿರುತ್ತೆ? ಏನಿರಲ್ಲ?

ರಾಜ್ಯದ ಗ್ರೀನ್​ ಝೋನ್​ಗಳಲ್ಲಿ ಲಾಕ್​ಡೌನ್​ನಿಂದ ರಿಲೀಫ್ : ಏನಿರುತ್ತೆ? ಏನಿರಲ್ಲ?

ಬೆಂಗಳೂರು: ಕರ್ನಾಟಕದ 14 ಜಿಲ್ಲೆಗಳನ್ನು ಗ್ರೀನ್ ಝೋನ್​ಗಳೆಂದು ಸರ್ಕಾರ ಆದೇಶಿಸಿದ್ದು, ಕಳೆದ 28 ದಿನಗಳಿಂದ ಯಾವುದೇ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿಲ್ಲ. ಹಾಗಾಗಿ  ಇದೀಗ ರಾಜ್ಯ ಸರ್ಕಾರ ಗ್ರೀನ್ ಝೋನ್​ಗಳಿಗೆ ರಿಲೀಫ್ ನೀಡಿದೆ. ಈ ಮೂಲಕ ಅರ್ಧಕ್ಕರ್ಧ ಕರ್ನಾಟಕವೇ ಅನ್​ಲಾಕ್​ ಆದಂತಾಗಿದೆ.

ಗ್ರೀನ್ ಝೋನ್​ನಲ್ಲಿರುವ ಯಾದಗಿರಿ, ರಾಯಚೂರು, ಕೊಪ್ಪಳ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ, ರಾಮನಗರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಸಡಿಲಿಕೆಯನ್ನು ನೀಡಲಾಗಿದೆ. ಹಾಗಾಗಿ ಗ್ರೀನ್​ ಝೋನ್​ಗಳಲ್ಲಿ ಏನಿರುತ್ತೆ? ಏನಿರಲ್ಲ?

  • ಗ್ರೀನ್‌ ಝೋನ್‌ ಜಿಲ್ಲೆಗಳಲ್ಲಿ ಕೈಗಾರಿಕೆ, ಅಂಗಡಿ, ಮುಂಗಟ್ಟು ತೆರೆಯಲು ಅನುಮತಿ
  • ಗ್ರಾಮೀಣ ಕೈಗಾರಿಕೆಗಳಿಗೆ ಗ್ರೀನ್‌ ಝೋನ್​ನಲ್ಲಿ ಅವಕಾಶ
  • ಉತ್ಪಾದನೆ, ರಫ್ತು ಮಾಡುವ ಕಾರ್ಖಾನೆಗಳಿಗೆ ಅವಕಾಶ
  • ಕೈಗಾರಿಕಾ ಪ್ರದೇಶಗಳು, SEZ ಗಳಿಗೆ ಅವಕಾಶ
  • ಸಿಂಗಲ್ ಬ್ರ್ಯಾಂಡ್, ಮಲ್ಟಿ ಬ್ರ್ಯಾಂಡ್​ ಮಾಲ್​ಗಳನ್ನು ಹೊರತುಪಡಿಸಿ ಕಾಂಪ್ಲೆಕ್ಸ್​ಗಳನ್ನು ತೆರೆಯಲು ಅವಕಾಶ
  • ಶೇ.50 ರಷ್ಟು ಉದ್ಯೋಗಿಗಳಿಗೆ ಕೆಲಸ ಮಾಡಲು ಮಾತ್ರ ಅನುಮತಿಯನ್ನು ನೀಡಲಾಗಿದೆ.
  • ಸಾರ್ವಜನಿಕ ಸಾರಿಗೆಗೆ ವಿನಾಯಿತಿ ನೀಡದ ಸರ್ಕಾರ
  • ರಾಮನಗರದಲ್ಲಿ ಕೈಗಾರಿಕೆ ತೆರೆಯಲು ಅವಕಾಶವಿಲ್ಲ
- Advertisment -

Most Popular

Recent Comments