Wednesday, November 30, 2022
Powertv Logo
Homeರಾಜ್ಯಎರಡು ವಾರ ಲಾಕ್​ಡೌನ್ ಮುಂದುವರಿಕೆ : ಬಿ.ಎಸ್ ಯಡಿಯೂರಪ್ಪ

ಎರಡು ವಾರ ಲಾಕ್​ಡೌನ್ ಮುಂದುವರಿಕೆ : ಬಿ.ಎಸ್ ಯಡಿಯೂರಪ್ಪ

ಬೆಂಗಳೂರು: ಕೊರೋನಾ ಹರಡುವ ಹಿನ್ನೆಲೆ ಏಪ್ರಿಲ್ 14 ರವರೆಗೆ  ಆದೇಶಿಸಲಾಗಿದ್ದ ಲಾಕ್​ಡೌನ್ ಅನ್ನು ಇನ್ನೂ 2 ವಾರಗಳ ಕಾಲ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಏಪ್ರಿಲ್ 30 ರವರೆಗೆ ಲಾಕ್​ಡೌನ್ ಮುಂದುವರೆಯಲಿದೆ. ಆದರೆ ಈ ಹಿಂದಿನ ಮೂರು ವಾರ ಮಾಡಿದ ಲಾಕ್​ಡೌನ್​ಗಿಂತ ಭಿನ್ನವಾಗಿರಲಿದೆ. ಇದರ ಬಗ್ಗೆ ಮಾರ್ಗಸೂಚಿಗಳನ್ನು ಇನ್ನೆರಡು ದಿನಗಳಲ್ಲಿ ನೀಡಲಾಗುತ್ತದೆ‘ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜೊತೆ ಲಾಕ್​ಡೌನ್ ಕುರಿತ ಚರ್ಚೆ ನಡೆಸಿದ ಯಡಿಯೂರಪ್ಪ ಮಾಹಿತಿಗಳನ್ನು ಹಂಚಿಕೊಂಡಿದ್ದು, ಮುಂದಿನ ಎರಡು ವಾರಗಳ ಕಾಲ ಲಾಕ್​ಡೌನ್ ಅನಿವಾರ್ಯ. ಜನತೆ ಇದಕ್ಕೆ ಸಹಕರಿಸಬೇಕು ಎಂದರು. ಇನ್ನು ದೇಶಾದ್ಯಂತ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಪ್ರಧಾನಮಂತ್ರಿ ಕಳವಳ ವ್ಯಕ್ತಪಡಿಸಿದ್ದು, ರಾಜ್ಯಗಳು ಕೊರೋನಾ ಹರಡುವುದನ್ನು ತೆಗೆದುಕೊಂಡಿರುವ ನಿರ್ಧಾರವನ್ನು ಅವರು ಶ್ಲಾಘಿಸುತ್ತಾರೆ. ನಾವು ಒಗ್ಗಟ್ಟಿನಿಂದ ಹೋರಾಡಿದರೆ ಮಾತ್ರ ಈ ಹೋರಾಟದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಪ್ರಧಾನಿ ಹೇಳಿದರು ಎಂದು ಯಡಿಯೂರಪ್ಪ ಹೇಳಿದರು.

RELATED ARTICLES

24 COMMENTS

  1. Wow, awesome weblog layout! How lengthy have you ever been running a blog for? you make running a blog glance easy. The whole glance of your site is excellent, as smartly as the content material!

LEAVE A REPLY

Please enter your comment!
Please enter your name here

- Advertisment -

Most Popular

Recent Comments

Micltok on
Micltok on