Friday, September 30, 2022
Powertv Logo
Homeರಾಜ್ಯಲಾಕ್​ಡೌನ್ ಎಫೆಕ್ಟ್ : ಕೆಎಸ್​ಆರ್​ಟಿಸಿಗೆ 182 ಕೋಟಿ ರೂ ನಷ್ಟ

ಲಾಕ್​ಡೌನ್ ಎಫೆಕ್ಟ್ : ಕೆಎಸ್​ಆರ್​ಟಿಸಿಗೆ 182 ಕೋಟಿ ರೂ ನಷ್ಟ

ಬೆಂಗಳೂರು: ಮಹಾಮಾರಿ ವೈರಸ್ ಹರಡದಂತೆ ಲಾಕ್​ಡೌನ್ ಆದೇಶದ ಹಿನ್ನೆಲೆ ಎಲ್ಲಾ ಸಾರಿಗೆ ವ್ಯವಸ್ಥೆಗಳನ್ನು ಸ್ಥಗಿತಗೊಳಿಸಲಾಗಿದೆ. ಹಾಗಾಗಿ ಕೆಎಸ್​ಆರ್​ಟಿಸಿ, ಬಿಎಂಟಿಸಿ ಹಾಗೂ ಮೆಟ್ರೋ ನಿಗಮಕ್ಕೆ ಸಾವಿರಾರು ಕೋಟಿ ನಷ್ಟವಾಗಿದೆ.  

ರಾಜ್ಯದೆಲ್ಲೆಡೆ ಲಾಕ್​ಡೌನ್ ಇರುವುದರಿಂದ ಕೆಎಸ್ಆರ್​ಟಿಸಿಗೆ ಕಳೆದ ಮಾರ್ಚ್ 1 ರಿಂದ ಏಪ್ರಿಲ್ 7 ನೇ ತಾರೀಖಿನವರೆಗೆ 182 ಕೋಟಿ ರೂ ನಷ್ಟವಾಗಿದೆ. ಕೆಎಸ್​ಆರ್​ಟಿಸಿ ಪ್ರತಿದಿನದ ಆದಾಯ 9 ಕೋಟಿ ರೂಪಾಯಿ, ಮೆಟ್ರೋ ಪ್ರತಿದಿನದ ಆದಾಯ ಒಂದು ರೂಪಾಯಿಯಾಗಿದ್ದು, 21 ದಿನದ ಲಾಕ್​ಡೌನ್ ಹಿನ್ನೆಲೆಯಲ್ಲಿ ಮೆಟ್ರೋಗೆ 21 ಕೋಟಿ ರೂ ನಷ್ಟವಾಗಿದೆ. ಬಿಎಂಟಿಸಿ ಆದಾಯ ನಾಲ್ಕು ಕೋಟಿ ರೂಪಾಯಿ ಆಗಿದ್ದು, ಈವರೆಗೆ ಒಟ್ಟು ಲಾಕ್​ಡೌನ್​ನಿಂದ 84 ಕೋಟಿ ರೂ ನಷ್ಟವಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments