ನವದೆಹಲಿ: ಕೊರೋನಾ ಹರಡುವ ಭೀತಿಯಿಂದ ದೇಶಾದಾದ್ಯಂತ ಲಾಕ್ಡೌನ್ ಆದೇಶ ಘೋಷಣೆಯಾಗಿದ್ದು, ಮೇ 17 ರವರೆಗೆ ಲಾಕ್ಡೌನ್ ಮುಂದುವರಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಆದೇಶ ನೀಡಿದೆ. ಈ ಮೂಲಕ ಮೂರನೇ ಲಾಕ್ಡೌನ್ನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ರೆಡ್, ಆರೆಂಜ್ ಹಾಗೂ ಗ್ರೀನ್ ಝೋನ್ಗಳಲ್ಲಿ ಪ್ರತ್ಯೇಕ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮೂರನೇ ಲಾಕ್ಡೌನ್ನಲ್ಲಿ ಸಾರ್ವಜನಿಕರಿಗೆ ಯಾವೆಲ್ಲಾ ಸೌಲಭ್ಯಗಳು ಸಿಗುತ್ತವೆ.
ಮೂರನೇ ಲಾಕ್ಡೌನ್ನಲ್ಲಿ ಏನಿರುತ್ತೆ?
- ಅಗತ್ಯ ವಸ್ತುಗಳಾದ ದಿನಸಿ, ಹಣ್ಣು, ತರಕಾರಿ, ಹಾಲು, ಔಷಧಿ
- ಹೊಟೇಲ್, ಬೇಕರಿಗಳಲ್ಲಿ ಪಾರ್ಸೆಲ್ ಮಾತ್ರ
- ಆರೋಗ್ಯ ಸೇತು ಆ್ಯಪ್ ಅಳವಡಿಕೆ ಕಡ್ಡಾಯ
- ಗ್ರೀನ್ ಝೋನ್ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ
- ಷರತ್ತು ಬದ್ಧ ಸಂಚಾರಕ್ಕೆ ಅನುಮತಿ
ಮೂರನೇ ಲಾಕ್ಡೌನ್ನಲ್ಲಿ ಏನಿರಲ್ಲ?
- ಥಿಯೇಟರ್, ಮಾಲ್, ಕ್ಲಬ್, ಪಬ್ ಬಂದ್
- ರೈಲು, ಬಸ್, ವಿಮಾನ ಸಾರಿಗೆ ಸಂಚಾರ ಇಲ್ಲ
- ಅಂತರ್ರಾಜ್ಯ ವಾಹನ ಸಂಚಾರಕ್ಕೂ ಬ್ರೇಕ್
- ಶಾಲೆ, ಕಾಲೇಜು, ಕೋಚಿಂಗ್ ಸೆಂಟರ್ ಬಂದ್
- ಸಾರ್ವಜನಿಕ ಸಮಾರಂಭ, ಧಾರ್ಮಿಕ ಸಮಾರಂಭವೂ ಇಲ್ಲ
ಇನ್ನು ರೆಡ್, ಆರೆಂಜ್ ಹಾಗೂ ಗ್ರೀನ್ ಝೋನ್ಗಳಲ್ಲಿ ಪ್ರತ್ಯೇಕ ನಿಯಮಗಳಿದ್ದು, ಮೂರು ಝೋನ್ಗಳಲ್ಲೂ ಅಗತ್ಯ ವಸ್ತುಗಳ ಮೇಲೆ ಸಡಿಲಿಕೆ ಮಾಡಿದ್ದಾರೆ. ರೆಡ್ ಝೋನ್ಗಳಲ್ಲಿ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಮಾತ್ರ ಅವಕಾಶ ನೀಡಲಾಗಿದೆ. ಇನ್ನು ಆರೆಂಜ್ ಝೋನ್ ಹಾಗೂ ಗ್ರೀನ್ ಝೋನ್ಗಳಲ್ಲಿ ಮತ್ತಷ್ಟು ಸಡಿಲಿಕೆಯನ್ನು ಮಾಡಲಾಗಿದೆ. ಹಾಗಾಗಿ ಈ ಮೂರು ಝೋನ್ಗಳಲ್ಲಿ ಸಡಿಲಿಕೆ ಯಾವ ರೀತಿ ಇರಲಿದೆ ಎಂಬುದನ್ನು ನೋಡೋದಾದರೆ….
ರೆಡ್ ಝೋನಲ್ಲಿ ಏನಿರುತ್ತೆ?
- ಅಗತ್ಯ ಸೇವೆಗಳಿಗೆ ಜನ, ವಾಹನ ಸಂಚಾರಕ್ಕೆ ಅನುಮತಿ
- ದ್ವಿಚಕ್ರವಾಹನಗಳಲ್ಲಿ ಹಿಂಬದಿ ಸವಾರಿಗೆ ಅವಕಾಶವಿಲ್ಲ
- ಒಬ್ಬ ಪ್ಯಾಸೆಂಜರ್, ಒಬ್ಬ ಡ್ರೈವರ್ ಇದ್ದರೆ ಕ್ಯಾಬ್ಗೆ ಅನುಮತಿ
- ಕಾರ್ಖಾನೆ, SEZ ಗಳಲ್ಲಿ ಷರತ್ತುಬದ್ಧ ಅವಕಾಶ
- ಉತ್ಪಾದನಾ ಕಾರ್ಖಾನೆಗಳಿಗೆ, ಐಟಿ, ಹಾರ್ಡ್ವೇರ್ ವಲಯಕ್ಕೆ ಅನುಮತಿ
- ಸ್ಥಳೀಯವಾಗಿ ಕೆಲಸಗಾರರು ಲಭ್ಯವಿದ್ದರೆ ಕಟ್ಟಡ ಕಾಮಗಾರಿಗೆ ಅವಕಾಶ
- ಶೇ.33 ಉದ್ಯೋಗಿಗಳೊಂದಿಗೆ ಖಾಸಗಿ ಸಂಸ್ಥೆಗಳು ಕಾರ್ಯಕ್ಕೆ ಅಸ್ತು
- ಉಳಿದ ಉದ್ಯೋಗಿಗಳು ವರ್ಕ್ ಫ್ರಂ ಹೋಮ್ ಮಾಡಬೇಕು
- ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆ, ಆಹಾರ ಸಾಮಗ್ರಿ ತಯಾರಿಕೆಗೆ ಅವಕಾಶ
- ಗ್ರಾಮೀಣ ಪ್ರದೇಶಗಳಲ್ಲಿ ಅಂಗಡಿಗಳನ್ನು ತೆರೆಯಲು ಅವಕಾಶ
- ಕೃಷಿ ಚಟುವಟಿಕೆಗಳಿಗೆ ಅವಕಾಶ
- ಆರೋಗ್ಯ ಸೇವೆಗಳಿಗೆ ಅವಕಾಶ
ರೆಡ್ ಝೋನ್ನಲ್ಲಿ ಏನಿರಲ್ಲ?
- 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು, ಅಸ್ವಸ್ಥರು ಮನೆಯಲ್ಲೇ ಇರಬೇಕು
- ಗರ್ಭಿಣಿಯರು, 10ವರ್ಷಕ್ಕಿಂತ ಚಿಕ್ಕ ಮಕ್ಕಳು ಹೊರಬರುವಂತಿಲ್ಲ
- ಸಾರ್ವಜನಿಕ ಬಸ್, ರೈಲು ಸಂಚಾರಕ್ಕೆ ಅನುಮತಿ ಇಲ್ಲ
- ಅಂತರ್ರಾಜ್ಯ ಮತ್ತು ಅಂತರ್ಜಿಲ್ಲೆ ಸಂಚಾರಕ್ಕೆ ನಿರ್ಬಂಧ
ಆರೆಂಜ್ ಝೋನ್ನಲ್ಲಿ ಏನಿರುತ್ತೆ?
- ಒಬ್ಬ ಡ್ರೈವರ್, ಒಬ್ಬ ಪ್ಯಾಸೆಂಜರ್ ಟ್ಯಾಕ್ಸಿಗೆ ಅನುಮತಿ
- ಅನುಮತಿ ಪಡೆದು ಅಂತರ್ ಜಿಲ್ಲೆ ಸಂಚಾರ ಮಾಡಬಹುದು
- 4 ಚಕ್ರದ ವಾಹನಗಳ ಸಂಚಾರಕ್ಕೂ ಷರತ್ತುಬದ್ಧ ಅನುಮತಿ
- ಡ್ರೈವರ್ ಹೊರತುಪಡಿಸಿ ಇಬ್ಬರು ಸಂಚರಿಸಬಹುದು
- ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರೊಂದಿಗೆ ಸಂಚರಿಸಬಹುದು
ಆರೆಂಜ್ ಝೋನ್ನಲ್ಲಿ ಏನಿರಲ್ಲ?
- ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ
- ಅನಾವಶ್ಯಕ ಸಂಚಾರಕ್ಕೆ ಅನುಮತಿ ನೀಡಲಾಗುವುದಿಲ್ಲ
- ಗ್ರೀನ್ಝೋನ್ನಲ್ಲಿ ಏನಿರುತ್ತೆ?
- ಅಗತ್ಯ ಸೇವೆಗಳ ಸರಕು ಸಾಗಣೆಗೆ ಅವಕಾಶ
- ಗೃಹ ಇಲಾಖೆ ಅನುಮತಿ ಇರುವ ಸಾರಿಗೆಗೆ ಮಾತ್ರ ಅವಕಾಶ
- ಆರೋಗ್ಯ ಸೇವೆ, ಔಷಧಿ ಮಳಿಗೆಗಳನ್ನು ತೆರೆಯಲು ಅನುಮತಿ
- ಬಹುತೇಕ ಎಲ್ಲ ಸೇವೆಗಳೂ ಹಸಿರು ವಲಯದಲ್ಲಿ ಲಭ್ಯ
- ಶೇ.50ರಷ್ಟು ಮಾತ್ರ ಪ್ರಯಾಣಿಕರ ಜೊತೆ ಬಸ್ ಸಂಚಾರಕ್ಕೆ ಅನುಮತಿ
- ಬಸ್ ಡಿಪೋಗಳೂ ಸಹ ಶೇ.50ರಷ್ಟು ಬಸ್ಗಳನ್ನ ರಸ್ತೆಗೆ ಇಳಿಸಬಹುದು
- ಎಲ್ಲ ರೀತಿಯ ಸರಕು ಸಾಗಣೆಗೂ ಅವಕಾಶ, ಇದನ್ನ ತಡೆಯುವಂತಿಲ್ಲ
- ಅಂತಾರಾಜ್ಯ ಸಾಗಣೆಗೆ ಪ್ರತ್ಯೇಕ ಪಾಸ್ನ ಅವಶ್ಯಕತೆ ಇರುವುದಿಲ್ಲ
- ಅನುಮತಿ ನೀಡಿರುವ ಸೇವೆಗಳಿಗೆ ಮತ್ತೆ ಅನುಮತಿ ಬೇಕಿಲ್ಲ
ಗ್ರೀನ್ ಝೋನ್ನಲ್ಲಿ ಏನಿರಲ್ಲ?
- ವಾಯುಯಾನ, ರೈಲು, ಮೆಟ್ರೋ ಸೇವೆ, ಅಂತರಾಜ್ಯ ಸಾರಿಗೆ
- ಶಾಲಾ, ಕಾಲೇಜು, ಇತರೆ ಯಾವುದೇ ಶಿಕ್ಷಣ ಸಂಸ್ಥೆಗಳು ಇರಲ್ಲ
- ಲಾಡ್ಜಿಂಗ್, ಹೋಟೆಲ್, ರೆಸ್ಟೋರೆಂಟ್, ಸಾರ್ವಜನಿಕ ಕಾರ್ಯಕ್ರಮ
- ಸಿನಿಮಾ ಹಾಲ್ಗಳು, ಮಾಲ್, ಜಿಮ್, ಕ್ರೀಡಾ ಸಂಕೀರ್ಣಗಳು