Home ರಾಜ್ಯ ಇತರೆ ತಿರುಪತಿಯಿಂದ ಹರಿಹರಪುರಕ್ಕೆ ಕಲ್ಲಿನ ಸಿಂಹ

ತಿರುಪತಿಯಿಂದ ಹರಿಹರಪುರಕ್ಕೆ ಕಲ್ಲಿನ ಸಿಂಹ

ಭಾರೀ ಗಾತ್ರದ ಸಿಂಹವೊಂದು, ತಿರುಪತಿಯಿಂದ ಶಿವಮೊಗ್ಗಕ್ಕೆ ಆಗಮಿಸಿದೆ. ಇದನ್ನು ಇಲ್ಲಿನ ಜನರು ಕೂತೂಹಲದಿಂದ ವೀಕ್ಷಿಸುತ್ತಿದ್ದಾರೆ. ಇದೇನಪ್ಪ ತಿರುಪತಿಯಿಂದ ಸಿಂಹ ಶಿವಮೊಗ್ಗಕ್ಕೆ ಬಂದಿದೆಯಾ ಅಂತಾ ಆಶ್ಚರ್ಯ ಪಡ್ತಾ ಇದಿರಾ..? ಹೌದು, ನೀವು ನಂಬಿದ್ರೆ ನಂಬಿ ಬಿಟ್ರೆ ಬಿಡಿ. ತಿರುಪತಿಯಿಂದ, ಶಿವಮೊಗ್ಗಕ್ಕೆ ಸಿಂಹ ಬಂದಿರೋದು ಹೌದು, ಆದ್ರೇ, ನಿಜವಾದ ಸಿಂಹ ಅಲ್ಲಾ. ಇದು ಕಲ್ಲಿನ ಸಿಂಹ.

11×19 ಅಡಿಯ ಬೃಹತ್ ಗಾತ್ರದ ಕಲ್ಲಿನ ಸಿಂಹವೊಂದು ತಿರುಪತಿಯಿಂದ ಶಿವಮೊಗ್ಗಕ್ಕೆ ಆಗಮಿಸಿದೆ. ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಹರಿಹರಪುರಕ್ಕೆ ದೊಡ್ಡದಾದ ಕಂಟೈನರ್ ಲಾರಿಯಲ್ಲಿ ಬೃಹತ್ ಗಾತ್ರದ ಸಿಂಹ ತರಲಾಗಿದೆ. ಇಲ್ಲಿನ ಹರಿಹರಪುರದ ಆದಿ ಶಂಕರಾಚಾರ್ಯರ ಶಾರದ ಲಕ್ಷ್ಮಿನರಸಿಂಹ ಮಠದಲ್ಲಿ ಪ್ರತಿಷ್ಠಾಪಿಸಲು ಕಲ್ಲಿನ ಸಿಂಹ ತರಲಾಗಿದೆ. ಇನ್ನು ಬೃಹದಾಕಾರದ ಸಿಂಹ ಲಾರಿಯಲ್ಲಿ ತೀರ್ಥಹಳ್ಳಿ ಮಾರ್ಗದ ಮೂಲಕ ರವಾನೆ ಮಾಡಲಾಯಿತು. ಇನ್ನೂ ಪೂರ್ಣ ಪ್ರಮಾಣದಲ್ಲಿ ಸಿಂಹದ ಆಕಾರದ ಕೆತ್ತನೆ ಕೆಲಸ ಬಾಕಿ ಇದ್ದು, ಮೊದಲ ಹಂತದ ಕೆತ್ತನೆ ಬಳಿಕ, ತಿರುಪತಿಯಿಂದ ಶಿವಮೊಗ್ಗಕ್ಕೆ ರವಾನೆ ಮಾಡಲಾಗಿದೆ. ಅದರಂತೆ, ಲಾರಿಯಲ್ಲಿ ಸಾಗಿಸುತ್ತಿದ್ದ ಬೃಹತ್ ಸಿಂಹದ ಪ್ರತಿಮೆ ನೋಡಲು ತೀರ್ಥಹಳ್ಳಿಯಲ್ಲಿ ಭಾರೀ ಜನಸ್ತೋಮ ಸೇರಿದ್ರು. ಲಾರಿಯಲ್ಲಿದ್ದ ಸಿಂಹ ನೋಡಲು ಜನರು ಮುಗಿಬಿದ್ದಿದ್ರು.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments