Home uncategorized ಕೊರೋನಾ ಹೊಡಿತಕ್ಕೆ ಲಿಂಬೆ ಬೆಳೆಗಾರ ಕಂಗಾಲು

ಕೊರೋನಾ ಹೊಡಿತಕ್ಕೆ ಲಿಂಬೆ ಬೆಳೆಗಾರ ಕಂಗಾಲು

ಬಾಗಲಕೋಟೆ : ಲಿಂಬೆ ಬೆಳೆದು ನಷ್ಟಕ್ಕೆ ಸಿಲುಕಿದ್ದಾನೆ ಬಾಗಲಕೋಟೆ ತಾಲ್ಲೂಕಿನ ತುಳಸಿಗೇರಿ ಗ್ರಾಮದ ರೈತ ವೆಂಕಣ್ಣ ಬಾಲರೆಡ್ಡಿ. ತಮ್ಮ ಎರಡು ಎಕರೆ ಜಮೀನಿನಲ್ಲಿ ಲಿಂಬೆ ಹಚ್ಚಿದ ರೈತನಿಗೆ ಕಳೆದ ವರ್ಷ ಲಿಂಬೆ ಲಾಭ ತಂದುಕೊಟ್ಟಿತ್ತು.ಆದ್ರೆ ಈ ವರ್ಷ ಕೊರೋನಾ ಹೊಡೆತದಿಂದ ಲಿಂಬೆಗೆ ಬೆಲೆ ಸಿಗದೆ ನಷ್ಟಕ್ಕೆ ಸಿಲುಕುವಂತೆ ಮಾಡಿದೆ.ಲಿಂಬೆ ಹರಿಯಲು ಹಚ್ಚಿದ ಆಳುಗಳ ಪಗಾರು ಕೂಡ ಬರಿಸುತ್ತಿಲ್ಲ ಲಿಂಬೆ ಮಾರಿದ ಹಣ. ಸಾವೀರ ಲಿಂಬೆಗೆ ಇನ್ನೂರು-ಮುನ್ನೂರು ರೂಪಾತಿಗೆ ಮಾರಾಟ ವಾಗ್ತಿದೆ.

ಇನ್ನು ಕಳೆದ ವರ್ಷ ಶ್ರಾವಣ ಮಾಸ ಆರಂಭದಲ್ಲಿ ಲಿಂಬೆ ಭಾರೀ ಲಾಭ ತಂದಿತ್ತು.ಸಾವಿರ ಲಿಂಬೆಗೆ ೪-೫ ಸಾವಿರ ರೂ ಗಳಿಗೆ ಮಾರಾಟವಾಗಿತ್ತು.ಈ ಭಾರೀ ಸಾವಿರ ಲಿಂಬೆಗೆ ೨ -೩ ನೂರಕ್ಕೂ ಕೆಳ್ತಿಲ್ಲ.ಲಿಂಬೆ ಪಡದಲ್ಲಿ ಲಿಂಬೆ ಹರಿಯಲು ಹಚ್ಚಿದ ಆಳುಗಳ ಪಗಾರು ಕೂಡಾ ಲಿಂಬೆ ಬರಿಸುತ್ತಿಲ್ಲ.ಸ್ವಲ್ಪ ಮನೆಯವರೆ ಹರಿದು ಮಾರಾಟ ಮಾಡ್ತಿದ್ದಾರೆ.ಒಂದಿಷ್ಟು ಹರಿಯಲಿಕ್ಕೆ ಆಗದೆ ಹಾಗೆ ಬಿಟ್ಟಿದ್ದಾರೆ.ಅವು ನೆಲಕ್ಕೆ ಬಿದ್ದು ಕೆಟ್ಟು ಹೊಗ್ತಿವೆ.ಎರಡು ಎಕರೆ ಲಿಂಬೆ ನಂಬಿದ ರೈತ ಕುಟುಂಬ ನಷ್ಟಕ್ಕೆ ಸಿಲುಕಿದೆ.ಕೊರೋನಾ ಮಹಾಮಾರಿಯ ಹೊಡೆತದಿಂದ ಲಿಂಬೆ ಬೆಳೆಗಾರರಿಗೆ ನಷ್ಟ ಉಂಟಾಗಿದ್ದು,ಶ್ರಾವಣ ಮಾಸದಲ್ಲಾದ್ರೂ ಲಿಂಬೆ ಹಣ್ಣಿಗೆ ಬೆಲೆ ಸಿಗುತ್ತಾ ಎಂಬ ಆಶಾವಾದ ದಲ್ಲಿದ್ದಾನೆ ಲಿಂಬೆ ಬೆಳೆದ ರೈತ..

LEAVE A REPLY

Please enter your comment!
Please enter your name here

- Advertisment -

Most Popular

‘ಡಿಸಿ ಕಚೇರಿ ಬಳಿ ಪ್ರತಿಭಟನೆ ಮಾಡುತ್ತಿದ್ದ ರೈತರ ಬಂಧನ‘

ಬೆಳಗಾವಿ: ಬೆಳಗಾವಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ಮಾಡುತ್ತಿದ್ದ 20ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂದಿಸಿದ್ದಾರೆ.   ಇಂದು ಬೆಳಗಾವಿಯಲ್ಲಿ ಬಿಜೆಪಿ ಸಮಾವೇಶ ವಿರೋಧಿಸಿ...

 RAF ಘಟಕ ಶಂಕುಸ್ಥಾಪನೆ ವೇಳೆ ಕನ್ನಡಕ್ಕೆ ಒತ್ತು ನೀಡಿಲ್ಲ: ಹೆಚ್.ಡಿ.ಕೆ.

ಶಿವಮೊಗ್ಗ: ಶಿವಮೊಗ್ಗದ ಭದ್ರಾವತಿಯಲ್ಲಿ ಆರ್.ಎ.ಎಫ್. ಘಟಕ ಶಂಕುಸ್ಥಾಪನೆ ವಿಚಾರಕ್ಕೆ ಹೆಚ್.ಡಿ.ಕೆ. ಆಕ್ರೋಶ ವ್ಯಕಪಡಿಸಿದ್ದಾರೆ. ಶಂಕುಸ್ಥಾಪನೆ ವೇಳೆ ಫಲಕಗಳನ್ನು ಕನ್ನಡದಲ್ಲಿ ಹಾಕಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಹೆಚ್.ಡಿ.ಕೆ.,...

‘ಕೇಂದ್ರ ಗೃಹ ಸಚಿವರ ಆಗಮನಕ್ಕೆ ರೈತರ ವಿರೋಧ’

ಬೆಳಗಾವಿ: ಇಂದು ಬೆಳಗಾವಿಯಲ್ಲಿ ಬಿಜೆಪಿ ಸಮಾವೇಶಕ್ಕೆ ಅಮಿತ್ ಶಾ ಆಗಮನ ಹಿನ್ನಲೆಯಲ್ಲಿ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ಮುಖಂಡ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಪ್ರತಿಭಟನೆ. ಕೇಂದ್ರದ ಹೊಸ ಕೃಷಿ ಕಾಯ್ದೆಗೆ...

ಕರೋನಾ ಲಸಿಕೆ ಬಂದಿರುವುದು ಸಂತೋಷ : ಯು.ಟಿ.ಖಾದರ್

ಬೆಂಗಳೂರು: ಕೊರೋನಾ ಲಸಿಕೆ ವಿತರಣಾ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಖಾರವಾಗಿ ಟ್ವೀಟ್ ಮಾಡಿದ್ದಾರೆ. ಕೊರೊನಾ ಲಸಿಕೆ ಬಂದಿರುವುದು ಸಂತೋಷ. ಆದರೆ ಮೊದಲು ಗ್ರೂಪ್ ಡಿ ನೌಕರರ ಮೇಲೆ ಯಾಕೆ ಪ್ರಯೋಗ ಮಾಡಬೇಕು....

Recent Comments