‘ಲವ್ವಾಗಿಲ್ಲೆನಾ ಪೋರಿ ನಿನಗಾ’ ಅಂತ ಕೇಳ್ತಿದ್ದಾರೆ ಹನುಮಂತ..!

0
160

ಸ್ಯಾಂಡಲ್​ವುಡ್​ನಲ್ಲಿ ಹೊಸಬರ ಹಾವಳಿ ಸಿಕ್ಕಾಪಟ್ಟೆ ಜೋರಾಗಿದೆ. ರಿಯಾಲಿಟಿ ಶೋಗಳಲ್ಲಿ ಮಿಂಚಿದವರು ಬೆಳ್ಳಿಪರದೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸೋದು ಕೂಡ ಕಾಮನ್. ಹಾಗೆಯೇ ಖಾಸಗಿವಾಹಿನಿಯ ಸಂಗೀತ ರಿಯಾಲಿಟಿ ಶೋನಲ್ಲಿ ಮಿಂಚಿದ್ದ ಒಬ್ಬರು ನಾಯಕ ನಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿಕೊಡ್ತಿದ್ದಾರೆ…ಇನ್ನೊಬ್ರು ಗಾಯಕನಾಗಿ ಚಂದನವನ ಪ್ರವೇಶಿಸ್ತಿದ್ದಾರೆ.

ಯೆಸ್​, ಖಾಸಗಿವಾಹಿನಿಯ ಸಂಗೀತ ರಿಯಾಲಿಟಿ ಶೋನ ವಿನ್ನರ್ ಚನ್ನಪ್ಪ ಹುದ್ದಾರ ಹಾಗೂ ಕನ್ನಡಿಗರ ಮನಗೆದ್ದ ಹಾವೇರಿ ಯುವಕ ಹನುಮಂತ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ…. ವಿಶೇಷವೆಂದ್ರೆ ಇಬ್ಬರಿಗೂ ಒಟ್ಟಿಗೇ ‘ಲೈಟಾಗಿ ಲವ್ವಾಗಿದೆ’..! ಚೆನ್ನಪ್ಪ ಲೈಟಾಗಿ ಲವ್ವಾಗಿದೆ ಅನ್ನೋ ಸಿನಿಮಾ ಮೂಲಕ ನಾಯಕ ನಟನಾಗಿ ಹೊಸ ಇನ್ನಿಂಗ್ಸ್​ ಆರಂಭಿಸ್ತಿದ್ದಾರೆ. ಹನುಮಂತ ಗಾಯಕರಾಗಿ ಸ್ಯಾಂಡಲ್​ವುಡ್​ಗೆ ಪರಿಚವಾಗ್ತಿದ್ದಾರೆ.

ಗುರುರಾಜ ಗದಾಡಿ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿರೋ ಲೈಟಾಗಿ ಲವ್ವಾಗಿದೆ ಸಿನಿಮಾದ ಹಾಡುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿವೆ. ಚನ್ನಪ್ಪ ಹುದ್ದಾರ ನಾಯಕ ನಟನಾಗಿ ಸಿನಿರಂಗ ಪ್ರವೇಶಿಸುತ್ತಿರುವ ಈ ಸಿನಿಮಾ ನಾಯಕಿ ದಿವ್ಯಾ ವಾಗ್ಕರ್ . ಇನ್ನು ಈ ಸಿನಿಮಾಕ್ಕೆ ಎನ್​.ಆರ್ ರಜಪೂತ, ಕಿಶೋರ್ ಭಟ್, ಶಫೀಕ್ ಸನದಿ ಬಂಡವಾಳ ಹಾಕಿದ್ದಾರೆ. ಶಿವಪುತ್ರ, ವಿನೋದ್​​ ಕ್ಯಾಮರಾ ಕೈಚಳಕ ತೋರಿಸಿದ್ದಾರೆ. ಆಯುರ್ ಸ್ವಾಮಿ ಸಂಭಾಷಣೆ ಬರೆದಿದ್ದಾರೆ.

ಇನ್ನು ಈಗ ಸಿನಿಮಾದ ಹಾಡುಗಳು ರಿಲೀಸ್ ಆಗಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಆಕಾಶ್ ಪರ್ವ ಸಂಗೀತ ನಿರ್ದೇಶನ ಮಾಡಿದ್ದಾರೆ. ಗಾಯಕ ಹನುಮಂತ ಅವರು, ‘ಲೈಟಾಗಿ ಲವ್ವಾಯ್ತು ನನಗಾ, ಲವ್ವಾಗಿಲ್ಲೆನಾ ಪೋರಿ ನಿನಗಾ…’ ಎಂಬ ಹಾಡಿಗೆ ಧ್ವನಿಯಾಗಿದ್ದಾರೆ. ಈ ಲಿರಿಕಲ್ ವಿಡಿಯೋ ಸಾಂಗ್ ಅಂತೂ ಯೂಟ್ಯೂಬ್​ನಲ್ಲಿ ಸಖತ್ ಸದ್ದು ಮಾಡ್ತಿದೆ.

ಒಟ್ನಲ್ಲಿ ಉತ್ತರ ಕರ್ನಾಟಕ ಕಲಾ ಮಂದಿ ಒಡಗೂಡಿ ನಿರ್ಮಿಸಿರೋ ಲೈಟಾಗಿ ಲವ್ವಾಗಿದೆ ಸಿನಿಮಾ ಮೇಲ ನಿರೀಕ್ಷೆ ಕೂಡ ಬರೋಬ್ಬರಿ ಇದ್ದು… ಶೀಘ್ರದಲ್ಲೇ ಸಿನಿಮಾ ತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ. ಲೈಟಾಗಿ ಲವ್ವಾಗಿದೆ ಸಿನಿಮಾ ತಂಡಕ್ಕೆ ನಮ್ ಕಡೆಯಿಂದಲೂ ಶುಭಹಾರೈಕೆ.

LEAVE A REPLY

Please enter your comment!
Please enter your name here