ಬೆಂಗಳೂರು: ಬಿಬಿಎಂಪಿಯಲ್ಲಿ 169 ಶಾಲೆಗಳಿವೆ, ಸರ್ಕಾರದ ನಿರ್ಧಾರದಂದೆ ಶಾಲಾ-ಕಾಲೇಜುಗಳನ್ನು ಆರಂಭ ಮಾಡುತ್ತೇವೆ ಎಂದು ಬಿಬಿಎಂಪಿ ವಿಷೇಶ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಜನವರಿ 1 ರಂದು ಶಾಲೆಗಳನ್ನು ಸ್ಯಾನಿಟೈಸ್ ಮಾಡಲಾಗುತ್ತದೆ. ಬಿಬಿಎಂಪಿ ಶಾಲೆಗಳಲ್ಲಿ ಒಟ್ಟು 2212 ವಿದ್ಯಾರ್ಥಿಗಳು ಇದ್ದಾರೆ. ಸೋಪ್, ಸ್ಯಾನಿಟೈಸ್, ಶೌಚಾಲಯ ಸ್ವಚ್ಚತೆಗೆ ಕ್ರಮ ಕೈಗೊಳ್ಳಲಾಗಿದೆ. ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ತಪಾಸಣೆ ಮಾಡಲಾಗುವುದು. ಕೊರೋನಾ ಸೋಂಕಿನ ಲಕ್ಷಣ ಇರುವವರಿಗೆ ಪ್ರವೇಶ ಇರೋದಿಲ್ಲ. ವಿದ್ಯಾರ್ಥಿಗಳು ಕುಡಿಯುವ ನೀರನ್ನು ಮನೆಯಿಂದಲೇ ತರಬೇಕು ಎಂದು ಹೇಳಿದ್ದಾರೆ.
60 ಶಾಲೆಗಳ ಪ್ರಾಂಶುಪಾಲರಿಗೆ ಸಭೆ ಕರೆಯಲಾಗಿದೆ. ಪಿಯುಸಿ ಮಕ್ಕಳಿಗೆ ಟ್ಯಾಬ್ಗಳನ್ನು ಕೊಡಲಾಗಿತ್ತು. ವಿದ್ಯಾರ್ಥಿಗಳಿಗೆ ಯುಟಿಯು ಮೂಲಕ ತರಗತಿ ನಡೆಯುತ್ತಿದೆ. SSLC ಮಕ್ಕಳು ಶಾಲೆಗೆ ಬಂದು ಅಧ್ಯಯನ ಮಾಡಲು ಅವಕಾಶ ಮಾಡಲಾಗಿದೆ. ಶಾಲೆಗೆ ಬರುವ ಮಕ್ಕಳಿಗೆ ಪೋಷಕರ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ವಿದ್ಯಾಗಮ ಯೋಜನೆ ಮುಂದೆಯೂ ಚನ್ನಾಗಿ ನಡೆಯಲಿದೆ ಬೆಂಗಳೂರಿನಲ್ಲಿ ಬಿಬಿಎಂಪಿ ವಿಶೇಷ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.