ಮತದಾರರ ಮನಗೆಲ್ಲಲು ಕೊನೆಯ ಕಸರತ್ತು​..!

0
123

ಬೆಂಗಳೂರು: ರಾಜ್ಯದಲ್ಲಿ ಚಿಂಚೋಳಿ, ಕುಂದಗೋಳ ಕ್ಷೇತ್ರದಲ್ಲಿ ಉಪಚುನಾವಣೆ ನಾಳೆ ನಡೆಯಲಿದ್ದು, ಮತದಾರರ ಮನ ಗೆಲ್ಲಲು ಅಭ್ಯರ್ಥಿಗಳು ಇಂದು ಕೊನೆ ದಿನದ ಕಸರತ್ತು ನಡೆಸಲಿದ್ದಾರೆ. ನಾಯಕರು ಇಂದು ಮನೆ ಮನೆ ಪ್ರಚಾರ ನಡೆಸಿ ಮತ ಯಾಚಿಸಲಿದ್ದಾರೆ. ಘಟಾನುಘಟಿ ನಾಯಕರೆಲ್ಲ ಕ್ಷೇತ್ರ ಬಿಟ್ಟು ವಾಪಸ್ ಬಂದಿದ್ದು, ಇಂದು ಅಭ್ಯರ್ಥಿಗಳಿಗೆ ಕಾರ್ಯಕರ್ತರೇ ಆಸರೆಯಾಗಲಿದ್ದಾರೆ.

ಕುಂದಗೋಳದಲ್ಲಿ ಕುಸುಮಾ ಶಿವಳ್ಳಿ-ಚಿಕ್ಕನಗೌಡ ಫೈಟ್ ನಡೆಯಲಿದ್ದು, ಚಿಂಚೋಳಿಯಲ್ಲಿ ಸುಭಾಷ್ ರಾಥೋಡ್-ಅವಿನಾಶ್ ಜಾಧವ್ ನಡುವೆ ಪೈಪೋಟಿ ನಡೆಯಲಿದೆ. ಮೇ.19ರಂದು ಎರಡು ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಎರಡು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಮೇ.23ರಂದೇ ಪ್ರಕಟವಾಗಲಿದೆ.

LEAVE A REPLY

Please enter your comment!
Please enter your name here