ವಾಯುಪಡೆಗೆ ಮತ್ತಷ್ಟು ಬಲ ತುಂಬಿದ ಎಲ್​ಸಿಎ ತೇಜಸ್​..!

0
201

ಬೆಂಗಳೂರು: ಭಾರತದ ಮೊದಲ ಸೆಲ್ಫ್​ ಮೇಡ್​ ಯುದ್ಧ ವಿಮಾನ ಲೈಟ್ ಕಾಂಬೇಟ್​ ಏರ್​ಕ್ರಾಫ್ಟ್​(ಎಲ್​ಸಿಎ) ತೇಜಸ್​ ಇಂದು  ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಿದೆ. ವಾಯುಪಡೆಗೆ ಸೇರ್ಪಡೆಯಾಗುವ ಮುನ್ನ ಎಲ್ಲ ಪರೀಕ್ಷೆಗಳನ್ನೂ ಜೆಟ್​ ಮುಗಿಸಿದ್ದು, ಸಶಸ್ತ್ರ ಯುದ್ಧ ವಿಮಾನ ವಾಯುಪಡೆಗೆ ಹೊಸ ಶಕ್ತಿ ತುಂಬಲಿದೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್ ಶೋ 2019ರ ಕಾರ್ಯಕ್ರಮದಲ್ಲಿ ದೇಶದ ಮಿಲಿಟರಿ ವಾಯುಯಾನ ನಿಯಂತ್ರಕ ಮಂಡಳಿ ಜೆಟ್​ ಎಲ್ಲ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿರುವ ಸರ್ಟಿಫಿಕೇಟ್​ ಹಾಗೂ ಇತರ ದಾಖಲೆಗಳನ್ನು ವಾಯಪಡೆ ಸಿಬ್ಬಂದಿಗಳ ಮುಖ್ಯಸ್ಥ ಮಾರ್ಷಲ್​ ಬೀರೇಂದರ್​ ಸಿಂಗ್​ ಧನೋವಾ ಅವರಿಗೆ ಹಸ್ತಾಂತರಿಸಿದರು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಜಿ.ಸತೀಶ್​ ರೆಡ್ಡಿ, ಹಿಂದೂಸ್ಥಾನ್​ ಏರೋನೊಟಿಕ್ಸ್​ನ ನಿರ್ದೇಶಕ ಆರ್ ಮಾಧವನ್ ಅವರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here