ಬೆಂಗಳೂರು: ಕೆಲವೇ ಕ್ಷಣಗಳಲ್ಲಿ ಮುಷ್ಕರ ಕೈ ಬಿಡಬೇಕೋ ಅಥವಾ ಬೇಡ ಎನ್ನು ಬಗ್ಗೆ ನಿರ್ಧಾರವಾಗಲಿದೆ. ಕೊನೆಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಕೋಡಿಹಳ್ಳಿ ಚಂದ್ರಶೇಕರ್ ಕರೆ ಮಾಡಿ ಚರ್ಚೆ ನಡೆಸಿದ್ದಾರೆ. ಅರ್ಧ ಗಂಟೆ ಪೋನಿನಲ್ಲಿ ಮಾತನಾಡಿದ ಸವದಿ. ಮುಷ್ಕರ ಮುಂದುವರಿಸಿದರೆ ನೀವು ಗೆದ್ದಂತಲ್ಲ, ನಾವು ಸೋತಂತೆ ಅಲ್ಲ. ಇನ್ನೂ ಮುಷ್ಕರ ಮುಂದುವರೆಸುವುದು ಬೇಡ. ಕೂಡಲೇ ಸಾರಿಗೆ ನೌಕರರು ಮುಷ್ಕರ ಕೈ ಬಿಡಿ. ಕೋಟ್ಟಿರುವ ಭರವಸೆ ಈಡೇರಿಸುವ ಜವಾಬ್ದಾರಿ ನನ್ನದು ಎಂದು ಹೇಳಿದ್ದಾರೆ. ಮುಷ್ಕರ ಕೈ ಬಿಡುವ ವಿಚಾರವಾಗಿ ಪ್ರಮುಖ ನಾಯಕರ ಜೊತೆ ಚರ್ಚೆ ನಡೆಸಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ. ಸರಕಾರದ ಜೊತೆ ಕೋಡಿಹಳ್ಳಿ ಚಂದ್ರಶೇಖರ್ ಮಾತುಕತೆ ಸಕ್ಸ್ ಸ್ ಆಗುತ್ತಾ ಕಾದು ನೋಡಬೇಕಿದೆ.