Home ರಾಜ್ಯ ‘ತಿಪ್ಪಾರೆಡ್ಡಿಗೆ ಬೆದರಿಕೆ ಹಾಕಿಸಲು ಯತ್ನಿಸಿದ ಗುತ್ತಿಗೆದಾರನಿಗೆ ಶಾಸಕರಿಂದ ತರಾಟೆ’

‘ತಿಪ್ಪಾರೆಡ್ಡಿಗೆ ಬೆದರಿಕೆ ಹಾಕಿಸಲು ಯತ್ನಿಸಿದ ಗುತ್ತಿಗೆದಾರನಿಗೆ ಶಾಸಕರಿಂದ ತರಾಟೆ’

ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿಗೆ ಮಣ್ಣು ಹೊಡೆಯಲು ರಸ್ತೆಯನ್ನು ಹಾಳು ಮಾಡಿದ್ದನ್ನು ಪ್ರಶ್ನಿಸಿದ ಶಾಸಕ ತಿಪ್ಪಾರೆಡ್ಡಿಗೆ ಧಮ್ಕಿ ಹಾಕಿಸಲು ಬೌನ್ಸರ್ ಗಳನ್ನು ಕರೆ ತಂದಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಇಂಗಳದಾಳ್ ಗ್ರಾಮದಲ್ಲಿ ನಡದಿದೆ.

ಚಿತ್ರದುರ್ಗ ಹೊರ ವಲಯದಲ್ಲಿ ನಡೆಯುತ್ತಿರುವ 1,400  ಕೋಟಿ ಅನುದಾನದ  ರಾಷ್ಟ್ರೀಯ ಹೆದ್ದಾರಿಗೆ ಕೆಡಿಆರ್ ಇನ್ಫ್ರಾಟೆಕ್ ಎಂಬ ಕಂಪನಿಯ ಗುತ್ತಿಗೆದಾರ ಮಣ್ಣನ್ನು ಸಾಗಿಸುತ್ತಿದ್ದಾನೆ. ಇದಕ್ಕೆ ಮೈನ್ಸ್ ಅಂಡ ಜೂವಾಲಜಿ, ಅರಣ್ಯ, ಇಲಾಖೆ  ಅನುಮತಿಯನ್ನು ಪಡೆದಿಲ್ಲ.  10ಟನ್ ಭಾರದ ವಾಹನಗಳು ಓಡಾಡುವ ಜಾಗದಲ್ಲಿ 40 ಟನ್ ಭಾರದ ವಾಹನಗಳನ್ನು ಓಡಾಡಿಸಿದ್ದು, ಇದರಿಂದ ಸುಮಾರು ಐದು ಕೋಟಿ ರೂಪಾಯಿ  ವೆಚ್ಚ ಮಾಡಿ ನಿರ್ಮಾಣ ಮಾಡಿದ್ದ ರಸ್ತೆ ಸಂಪೂರ್ಣ ಹಾಳಾಗಿದೆ. ಇದ‌ನ್ನು ಕಳೆದ ನಾಲ್ಕು ದಿನಗಳ ಹಿಂದೆ ಪರಿಶೀಲಿಸಿದ್ದ ಶಾಸಕರು  ಇಂದು ಮತ್ತೆ ಪರಿಶೀಲನೆ ನಡೆಸಲು ಹೋಗಿದ್ದಾರೆ.

ಈ ಸಮಯದಲ್ಲಿ ಗುತ್ತಿಗೆದಾರ ಖಾಸಗಿ ಭೌನ್ಸರ್ ಗಳನ್ನು  ಧಮ್ಕಿ ಹಾಕಿಸಲು ಬೆದರಿಸಲು ಕರೆ ತಂದಿದ್ದಾನೆ. ಇದನ್ನು ಪ್ರಶ್ನೇ ಮಾಡಿದರೆ ನಿಮಗೆ ಯಾವ ಸಚಿವ ಹಾಗೂ  ಸಚಿವರ ಮಕ್ಕಳು, ಯಾವ ಶಾಸಕರಿಂದ ಹೇಳಿಸಲಿ ಎಂದು  ಹೇಳುತ್ತಾನೆ .  ರಸ್ತೆ ಕೆಡಿಸಿಕೊಂಡು ಇವರನ್ನು ಸುಮ್ಮನೆ ಬಿಡಬೇಕಾ? ಬೌನ್ಸರ್ (ರೌಡಿಗಳನ್ನು) ಗಳನ್ನು ಕರೆಸಿಕೊಂಡ ಈ ಗುತ್ತಿಗೆದಾರನಿಗೆ ಸುಮ್ಮನೆ ಬಿಡಬಾರದು ಕಾನೂನಿನ ರೀತಿಯಲ್ಲಿ ಕ್ರಮ ಜರುಗಿಸಬೇಕು ಎಂದು ಶಾಸಕ ತಿಪ್ಪಾರೆಡ್ಡಿ  ಆಕ್ರೋಶ ವ್ಯಕ್ತ ಪಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

‘ಘಟನೆಯ ಹೊಣೆ ಹೊತ್ತು ಈಶ್ವರಪ್ಪ ರಾಜೀನಾಮೆ ನೀಡಲಿ ಪ್ರಸನ್ನ್ ಕುಮಾರ್ ಆಗ್ರಹ’

ಶಿವಮೊಗ್ಗ: ಶಿವಮೊಗ್ಗದಲ್ಲಿ ಕಲ್ಲು ಗಣಿಗಾರಿಕೆ ಸ್ಫೋಟಕದ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಶಿವಮೊಗ್ಗದ ಮಾಜಿ ಶಾಸಕ ಪ್ರಸನ್ನ ಕುಮಾರ್ ಆಗ್ರಹಿಸಿದ್ದಾರೆ. ಒಂದು ಲೋಡ್ ಸ್ಪೋಟಕ ವಸ್ತುಗಳು ನಗರಕ್ಕೆ ಬಂದಿದ್ದು ಹೇಗೆ. ನಗರಕ್ಕೆ ಬರುವ...

ಉಸಿರು ಕಟ್ಟಿಸುವ ವಾತಾವರಣವೇ ಪಕ್ಷ ಬಿಡಲು ಕಾರಣ: ರಾಜಣ್ಣ ಕೊರವಿ

ಹುಬ್ಬಳ್ಳಿ: ಜೆಡಿಎಸ್ ಪಕ್ಷದಲ್ಲಿನ ಉಸಿರು ‌ಕಟ್ಟಿಸಿವ ವಾತಾವರಣದಿಂದ ಬೆಸತ್ತು ನಾನು ಹಾಗೂ ನನ್ನ ಬೆಂಬಲಿಗರು ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದೇವೆ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ‌ ರಾಜಣ್ಣ ಕೊರವಿ ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ...

‘ಉದ್ದವ್ ಠಾಕ್ರೆ ವಿರುದ್ಧ ಸಿಡಿದೆದ್ದ ಕರವೇ‌ ಕಾರ್ಯಕರ್ತರು’

ಹುಬ್ಬಳ್ಳಿ: ಶಿವಸೇನೆ ಮುಖ್ಯಸ್ಥ ಹಾಗೂ ಮಹಾರಾಷ್ಟ್ರ ಸಿಎಂ ಉದ್ದವ ಠಾಕ್ರೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಪರ ಸಂಘಟನೆಗಳಲ್ಲಿ ಆಕ್ರೋಶ ಭುಗಿಲೆದ್ದಿದೆ. ಶಿವಸೇನಾ ವಿರುದ್ದ ಸಿಡಿದೆದ್ದ ಕರವೇ ಯುವಸೇನಾ ಕಾರ್ಯಕರ್ತರು ಕರವೇ...

‘ಮೃತ ಕುಟುಂಬಗಳಿಗೆ ರಾಷ್ಟ್ರಪತಿ ಸಾಂತ್ವನ’

ಶಿವಮೊಗ್ಗ: ಕಲ್ಲು ಕ್ವಾರಿ ದುರಂತಕ್ಕೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಧಿಗ್ಬ್ರಮೆಗೊಂಡಿದ್ದಾರೆ. ಸ್ಪೋಟದಿಂದ ಜೀವ ಹಾನಿಯಾಗಿರೋದು ನೋವಿನ ಸಂಗತಿ. ಇಂತಹದೊಂದು ದುರಾದೃಷ್ಟಕರ ಘಟನೆ ನೆಡೆಯಬಾರದಿತ್ತು. ಮೃತರ ಕುಟುಂಬಗಳಿಗೆ ರಾಷ್ಟ್ರಪತಿ ಸಾಂತ್ವನ. ಘಟನೆಯಲ್ಲಿ ಗಾಯಗೊಂಡವರು ಶೀಘ್ರವೇ...

Recent Comments