Home ದೇಶ-ವಿದೇಶ ‘ದೆಹಲಿಯಲ್ಲಿ ರೈತರ ಮೇಲೆ ಲಾಠಿ ಚಾರ್ಜ್’

‘ದೆಹಲಿಯಲ್ಲಿ ರೈತರ ಮೇಲೆ ಲಾಠಿ ಚಾರ್ಜ್’

ದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ರೈತರು ದೆಹಲಿಯ ಸಿಂಘು, ಟಿಕ್ರಿ ಗಡಿಯಲ್ಲಿ ಬ್ಯಾರಿಕೇಡ್ ಮುರಿದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ದೆಹಲಿಯಲ್ಲಿ ಪೊಲೀಸರು ರೈತರ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ.  

ರೈತರು ಎರಡು ಗಡಿಗಳಿಂದ ದೆಹಲಿ ಮುತ್ತಿಗೆಗೆ ಯತ್ನಿಸುತ್ತಿದ್ದಾರೆ. ದೆಹಲಿ ಟ್ಯ್ರಾಕ್ಟರ್ ರ್ಯಾಲಿಯಲ್ಲಿ ಪಂಜಾಬ್, ಹರಿಯಾಣ ಹಲವು ರಾಜ್ಯಗಳ ರೈತರು ಭಾಗವಹಿಸಿದ್ದಾರೆ.   ರೈತರು ಪೊಲೀಸರ ಜೊತೆ ಆಗಿರುವ ಒಪ್ಪಂದವನ್ನು ಮುರಿದಿದ್ದಾರೆ. ರೈತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಗಣರಾಜ್ಯೋತ್ಸವದ ಬಳಿಕ ಪ್ರೊಟೆಸ್ಟ್ ಗೆ ಅವಕಾಶ ನೀಡಲಾಗಿದೆ.

ಟಿಕ್ರಿ ಗಡಿಯಲ್ಲಿ ರೈತರು ಟ್ಯ್ರಾಕ್ಟರ್ ರ್ಯಾಲಿ ಆರಂಭಿಸಿದ್ದಾರೆ. ಟಿಕ್ರಿಗಡಿಯಿಂದ, ನಂಗ್ಲೊಯಿ, ಬಪ್ರೊಲಾ ಗ್ರಾಮ, ನಜಾಫ್ ಗಢದಲ್ಲಿ ರೈತರು ರ್ಯಾಲಿಯನ್ನು ಮುಂದುವರೆಸಿದ್ದಾರೆ. ರ್ಯಾಲಿಯಲ್ಲಿ 2 ಲಕ್ಷಕ್ಕೂ ಹೆಚ್ಚು ಟ್ಯ್ರಾಕ್ಟರ್ ಗಳು ಭಾಗವಹಿಸಿವೆ.  ರೈತರನ್ನು ಚದುರಿಸಲು ಪೊಲೀಸರು ಟಿಯರ್ ಗ್ಯಾಸ್ ಉಪಯೋಗಿಸಿದ್ದಾರೆ. ಆದರೆ ರೈತರು ಟಿಯರ್ ಗ್ಯಾಸ್ ಗೂ ಹೆದರೆದೇ ದೆಹಲಿಯಲ್ಲಿ ರೈತರು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ರ್ಯಾಲಿಯಲ್ಲಿ 500ಕ್ಕೂ ಹೆಚ್ಚು ಮಹಿಳೆಯರಿಂದ ಟ್ರ್ಯಾಕ್ಟರ್‌ ರ್ಯಾಲಿ ಆರಂಭಿಸಿದ್ದಾರೆ. ಬೃಹತ್‌ ರ್ಯಾಲಿ ಮೂಲಕ ರಾಜಧಾನಿ ದೆಹಲಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ರೈತರ ಹೋರಾಟವನ್ನು ತಡೆಯಲು ಕೇಂದ್ರ ಮೀಸಲು ಪಡೆ, ದೆಹಲಿ ಪೊಲೀಸರು ಪೊಲೀಸ್‌ ಭದ್ರತೆ ನಿಯೋಜನೆ ಮಾಡಲಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

‘ಮನೆ ಮಾಲೀಕನನ್ನು ರಕ್ಷಿಸಿ ಸಾವಿಗೆ ಶರಣಾದ ಶ್ವಾನ’

ವಿಜಯಪುರ: ಶ್ವಾನ ಮನುಷ್ಯನ ಅತಿ ನಿಯತ್ತಿನ ಪ್ರಾಣಿ, ತನ್ನನು ಸಾಕಿದ ಯಜಮಾನನ ಮಾನ ಪ್ರಾಣ ಉಳಿಸಲು ಜೀವವನ್ನೇ ಪಣಕ್ಕಿಟ್ಟಿರುವ ಸಾವಿರಾರು ಪ್ರಕರಣ ದೇಶದಲ್ಲಿ‌ನಡೆದು ಹೋಗಿವೆ. ಅಂತದೇ ಒಂದು ಪ್ರಕರಣ ವಿಜಯಪುರ ಜಿಲ್ಲೆಯಲ್ಲಿ ಬೆಳಕಿಗೆ...

‘ಅಂಗ ವೈಕಲ್ಯತೆ ಶಾಪವಲ್ಲ,ಹುಟ್ಟಿನಿಂದ ಬರಬಹುದು’ : ಶಶಿಕಲಾ ಜೊಲ್ಲೆ

ಬೆಂಗಳೂರು : ಅಂಗ ವೈಕಲ್ಯತೆ ಶಾಪವಲ್ಲ,ಹುಟ್ಟಿನಿಂದ ಅಥವಾ ಅಪಘಾತದಿಂದಲೂ ಬರಬಹುದು.ಬಂದ ಮೇಲೆ ಕುಗ್ಗದೆ ಧೈರ್ಯವಾಗಿ ಎದುರಿಸಿ ಸಾಧನೆಯ ಮೆಟ್ಟಿಲನ್ನು ಏರಬೇಕಾಗಿದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಚಿವೆ ಶಶಿಕಲಾ ಜೊಲ್ಲೆ ಎಂದು ಹೇಳಿದರು. ಬೆಂಗಳೂರು...

ಕೋರ್ಟ್ ಆವರಣದಲ್ಲೇ ವಕೀಲನ ಬರ್ಬರ ಹತ್ಯೆ !

ವಿಜಯನಗರ (ಹೊಸಪೇಟೆ) : ಕೋರ್ಟ್ ಆವರಣದಲ್ಲೇ ವಕೀಲನೋರ್ವನ ಬರ್ಬರ ಹತ್ಯೆಯಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ಕೋರ್ಟ್ ಆವರಣದಲ್ಲಿ ಘಟನೆ ನಡೆದಿದೆ. ಡಾ. ತಾರಿಹಳ್ಳಿ ವೆಂಕಟೇಶ್ ಎನ್ನುವವರನ್ನ ಮನೋಜ್ ಎಂಬ ಯುವಕ (22) ಮಚ್ಚಿನಿಂದ...

ಬಾಲಕನ ಮೇಲೆ ಪೈಶಾಚಿಕ ಕೃತ್ಯ ಮರ್ಮಾಂಗಕ್ಕೆ ಚಿತ್ರಹಿಂಸೆ ನೀಡಿ ಕಗ್ಗೊಲೆ

ಕಲಬುರಗಿ/ಜೇವರ್ಗಿ : ಅನ್ಯ ಕೋಮಿನ ಯುವತಿಯನ್ನ ಪ್ರೀತಿಸುತ್ತಿದ್ದ 14 ವರ್ಷದ ಬಾಲಕನ ಮರ್ಮಾಂಗಕ್ಕೆ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿರುವಂತಹ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದ ಮಹೇಶ್ ಎಂಬ...

Recent Comments