Home ರಾಜ್ಯ ಮದ್ಯಪಾನದಿಂದ ಹಾರಿಹೋಯಿತಾ ಲಕ್ಷ್ಮೀ ಪ್ರಾಣ..!

ಮದ್ಯಪಾನದಿಂದ ಹಾರಿಹೋಯಿತಾ ಲಕ್ಷ್ಮೀ ಪ್ರಾಣ..!

ಬೆಂಗಳೂರು: ಡಿವೈಎಸ್ ಪಿ ಲಕ್ಷ್ಮೀ ಆತ್ಮಹತ್ಯೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಲಕ್ಷ್ಮೀ ದಿಟ್ಟ ಮಹಿಳೆ. ಯಾವುದಕ್ಕೂ ಹೆದರುತ್ತಿರಲಿಲ್ಲ. ಅವಳು ಅಂತವಳು ಅಲ್ಲ ಎಂದು ಲಕ್ಷ್ಮೀ ತಂದೆ ಹೇಳಿದ್ದಾರೆ. ಲಕ್ಷ್ಮೀ ನಿನ್ನೆ ರಾತ್ರಿ ಗೆಳೆಯರೊಂದಿಗೆ ಪಾರ್ಟಿ ಮಾಡಿ, ಆದಾದ ಬಳಿಕ 10 ನಿಮಿಷದಲ್ಲಿ ನೇಣುಬಿಗಿದ ಪರಿಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಆದರೆ ಇದು ಆತ್ಮಹತ್ಯೆ ಅಂತ ಒಪ್ಪಿಕೊಳ್ಳೋಕ್ಕೆ ಯಾರೂ ಕೂಡ ಸಿದ್ಧರಿಲ್ಲ. ಎಲ್ಲರೂ ನಮ್ಮ ಮಗಳು ಹಾಗೆ ಮಾಡಿಕೊಳ್ಳುವ ಹುಡುಗಿ ಅಲ್ಲ ಅಂತ ಹೇಳುತ್ತಿದ್ದಾರೆ. ಇದೇ ಕಾರಣಕ್ಕೆ ಲಕ್ಷ್ಮೀ ತಂದೆ ವೆಂಕಟೇಶ್ ಪಾರ್ಟಿಯಲ್ಲಿದ್ದ ಮನು ಹಾಗೂ ಪ್ರಜ್ವಲ್ ಅನ್ನುವ ಇಬ್ಬರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಕಿಟಕಿಯ ಸರಳಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಲಕ್ಷ್ಮೀ ತಂದೆ ವೆಂಕಟೇಶ್ ಅವರದ್ದು. ಇದೇ ಕಾರಣಕ್ಕೆ ನನಗೆ ಮನೋಹರ್ ಹಾಗೂ ಪ್ರಜ್ವಲ್ ಮೇಲೆ ಬಲವಾದ ಶಂಕೆ ಇದೆ ಎಂದು ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ. ಇವರ ಹೇಳಿಕೆ ಆಧರಿಸಿ ಪೊಲೀಸರು ಮನೋಹರ್ ಹಾಗೂ ಪ್ರಜ್ವಲ್ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಸುದ್ದಿ ತಿಳಿಯುತ್ತಿದಂತೆ ಲಕ್ಷ್ಮೀ ಸಂಬಂಧಿಕರು ವಿಕ್ಟೋರಿಯಾ ಆಸ್ಪತ್ರೆಗೆ ಧಾವಿಸಿದ್ದಾರೆ. ಹಾಗೂ ಪತಿ ನವೀನ್ ಇಬ್ಬರ ಸಂಬಂಧ ಸರಿಯಾಗಿ ಇರಲಿಲ್ಲ. ಸಿಕ್ಕಾ ಪಟ್ಟೆ ಹಿಂಸೆ ಕೊಡುತ್ತಿದ್ದ. ಆದರೆ ಅವನೇ ಬೇಕು ಎಂದು ಹಠಹಿಡಿಯುತ್ತಿದ್ದಳು ಎಂದು ಕಣ್ಣಿರು ಹಾಕಿದರು. ಈಗ ನೋಡಿದರೆ ಈ ರೀತಿ ಆಗಿದೆ ನಮಗೆ ನ್ಯಾಯ ಸಿಗಬೇಕು ಅಂತ ಕಣ್ಣೀರು ಹಾಕಿದ್ದರು. ನಮ್ಮ ಮಗಳು ಹಾಗೆ ಮಾಡಿಕೊಳ್ಳುವ ಹುಡುಗಿ ಅಲ್ಲ ಎಂದು ಲಕ್ಷ್ಮೀ ಚಿಕ್ಕಮ್ಮ ನಾಗ ಲಕ್ಷ್ಮೀ ಹೇಳಿದ್ದಾರೆ.

ಪತಿ ನವೀನ್ ಒಪ್ಪಿಗೆ ಮೇರೆಗೆ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು. ಸಂಜೆ ಹೊತ್ತಿಗೆ ಪರಣೋತ್ತರ ಪರೀಕ್ಷೆ ಮುಗಿಸಿ ಕುಟುಂಬಸ್ಥರಿಗೆ ನೀಡಲಾಯಿತು. ಆ ಬಳಿಕ ಮೃತದೇಹವನ್ನು ಕುಟುಂಸ್ಥರು ಲಕ್ಷ್ಮೀ ತಂದೆ ಹುಟ್ಟೂರು ಮಾಲೂರಿಗೆ ತೆಗೆದುಕೊಂಡು ಹೋದರು.

ಆದರೆ ಸಿಐಡಿ, ಡಿವೈಎಸ್ ಪಿ ಲಕ್ಷ್ಮೀ ಸಾವಿನ ಸುತ್ತ ಹಲವು ಅನುಮಾನದ ಹುತ್ತ ತೆರೆದುಕೊಂಡಿದೆ. ಈ ಬಗ್ಗೆ ಪೋಲಿಸರು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಹಾಗೂ ಎಫ್ ಎಸ್ ಎಲ್ ವರದಿ ಬಳಿಕ ಈ ಸಾವಿನ ನಿಗೂಢ ರಹಸ್ಯ ಬಯಲಾಗಲಿದೆ ಎಂದರು.

LEAVE A REPLY

Please enter your comment!
Please enter your name here

- Advertisment -

Most Popular

ಪರೀಕ್ಷೆ ಬೇಡ ಅಂತ ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆ

ಬೆಂಗಳೂರು : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಹಿಂದಿನ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಭೌತಿಕ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ, ಇದನ್ನು ಖಂಡಿಸಿ ನಗರದ ಮೌರ್ಯ ಸರ್ಕಲ್​ನಲ್ಲಿ  ಎನ್​​​ಎಸ್​​ಯುಐ ಸಂಘಟನೆ ಪ್ರತಿಭಟನೆ ನಡೆಸಿತು. ರಾಜ್ಯ...

ಸಚಿವ ಶಾಸಕರುಗಳ ಗುಪ್ತ ಗುಪ್ತ ಸಭೆ

ಚಿಕ್ಕಮಗಳೂರು : ಸಂಪುಟ ವಿಸ್ತರಣೆ ಖಾತೆ ಹಂಚಿಕೆ ಅಸಮಾಧಾನದ ಬೇಗುದಿ ಮಧ್ಯೆ ಬಿಜೆಪಿಯೊಳಗೆ ಹೊಸ ಬಂಡಾಯ ಬೂದಿ ಮುಚ್ಚಿದಂತೆ ಇದೆ ಪಕ್ಷದೊಳಗೆ ಒಂದೆರಡಲ್ಲ, ಹಲವು ಬಣಗಳು ರೂಪುಗೊಂಡಂತೆ ತೋರುತ್ತಿವೆ. ಸಚಿವ ಸ್ಥಾನ ಸಿಗದವರದ್ದು...

ಮಗಳಿಂದ ತಂದೆಯ ಅಂತ್ಯ ಸಂಸ್ಕಾರ

ಕಾರವಾರ : ಹೃದಯಾಘಾತದಿಂದ ಮೃತಪಟ್ಟಿದ್ದ ತಂದೆಯ ಅಂತ್ಯ ಸಂಸ್ಕಾರವನ್ನು ಮಗಳೇ ನೆರವೇರಿಸಿದ ಘಟನೆ ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ನಿಪೇಟೆಯಲ್ಲಿ ನಡೆದಿದೆ.ಕುರ್ನಿಪೇಟೆಯ ಚಂದ್ರಕಾಂತ ಬುದೊ ಪಾಗಿ (56) ಹೃದಯಾಘಾತದಿಂದ ಮೃತಪಟ್ಟಿದ್ದರು. 9...

ಉದ್ಧವ್ ಠಾಕ್ರೆ ಹೇಳಿಕೆಗೆ ಸಿಲಿಕಾನ್ ಸಿಟಿ ಮರಾಠಿಗರಿಂದ ವಿರೋಧ

ಬೆಂಗಳೂರು : ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಗೆ ದಿನ ದಿನಕ್ಕೆ ಪ್ರತಿಭಟನೆಗಳು ಜಾಸ್ತಿಯಾಗುತ್ತಿವೆ. ಇವತ್ತು ನಗರದ ಮೌರ್ಯ ಸರ್ಕಲ್​ನಲ್ಲಿ ಸಿಲಿಕಾನ್ ಸಿಟಿಯ ಮರಾಠಿಗರೆಲ್ಲಾ ಒಂದೆಡೆ ಸೇರಿ ತೀವ್ರ ವಿರೋಧ ವ್ಯಕ್ತ ಪಡಿಸಿದ್ರು....

Recent Comments