ಚಾಲೆಂಜಿಂಗ್ ಸ್ಟಾರ್​ಗೆ ‘ಬಾಹುಬಲಿ’ ಪವರ್…!

0
545

ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ  ‘ಕುರುಕ್ಷೇತ್ರ’ ಅಖಾಡದಿಂದ ಬಂದ ಸುದ್ದಿ.  ದಚ್ಚು ಅಭಿನಯದ ಸಿನಿಮಾಕ್ಕೀಗ ‘ಬಾಹುಬಲಿ’ ಬಲ ಸಿಕ್ಕಿದೆ.

ಹೌದು ಮುನಿರತ್ನ ನಿರ್ಮಾಣದ, ನಾಗಣ್ಣ ನಿರ್ದೇಶನದ ಚಂದನವನದ ಬಿಗ್ ಬಜೆಟ್ ಮೂವಿ ಕುರುಕ್ಷೇತ್ರ.  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತ್ರವಲ್ಲದೆ ರೆಬೆಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಅರ್ಜುನ್ ಸರ್ಜಾ, ಶಶಿಕುಮಾರ್, ರವಿಶಂಕರ್, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಬಹು ದೊಡ್ಡ ತಾರಾಗಣ ಹೊಂದಿರುವ ಸಿನಿಮಾ.
 

ಸೆಟ್ಟೇರಿದಲ್ಲಿಂದಲೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಕುರುಕ್ಷೇತ್ರ ಈಗ ಟೀಸರ್, ಟ್ರೇಲರ್ ಹಾಡುಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಅಬ್ಬರಿಸುತ್ತಿದ್ದೆ. ಯೂಟ್ಯೂಬ್​ನಲ್ಲಂತೂ ಕುರುಕ್ಷೇತ್ರದ್ದೇ ದರ್ಬಾರ್. ಆಗಸ್ಟ್ 9ಕ್ಕೆ ಕುರುಕ್ಷೇತ್ರ ತೆರೆಗೆ ಬರೋಕೆ ರೆಡಿಯಾಗಿದೆ. ಈ ನಡುವೆ  ಮತ್ತೊಂದು ಪವರ್ ಫುಲ್ ನ್ಯೂಸ್ ಕುರುಕ್ಷೇತ್ರ ಅಖಾಡದಿಂದ ಬಂದಿದೆ. ಅದೇ ಕುರುಕ್ಷೇತ್ರಕ್ಕೆ ಟಾಲಿವುಡ್​  ಮ್ಯೂಸಿಕ್ ಡೈರೆಕ್ಟರ್ ಸಾಥ್ ನೀಡಿರೋ ನ್ಯೂಸ್​..!

ಟಾಲಿವುಡ್​​ನ ಮೆಗಾ ಸೂಪರ್ ಮೂವಿ ಬಾಹುಬಲಿ ಸಿನಿಮಾಕ್ಕೆ ಸಂಗೀತ ಬಲ ತುಂಬಿದ್ದ ಮ್ಯೂಸಿಕ್ ಡೈರೆಕ್ಟರ್ ಎಂ.ಎಂ ಕೀರವಾಣಿ ‘ಕುರುಕ್ಷೇತ್ರ’ ಅಖಾಡಕ್ಕೆ ಇಳಿದಿದ್ದಾರೆ. ತೆಲುಗಿನ ಸ್ಟಾರ್ ಡೈರೆಕ್ಟರ್ ರಾಜಮೌಳಿಯವರ ಬಹುತೇಕ ಸಿನಿಮಾಗಳಿಗೆ ಮ್ಯೂಸಿಕ್ ನೀಡಿರುವ ಕೀರವಾಣಿ ಕನ್ನಡದ ವೀರಮದಕರಿ, ಭೈರವಿ, ಸ್ವಾತಿ, ಅಪ್ಪಾಜಿ, ದೀಪಾವಳಿ, ಸುಂದರಕಾಂಡ, ಜಮೀನ್ದಾರ್ ಮೊದಲಾದ ಚಿತ್ರಗಳಿಗೆ ಸಂಗೀತ ನೀಡಿದ್ದರು,

ಟಾಲಿವುಡ್​ನ ‘ಬಾಹುಬಲಿ’ ಸಂಗೀತದ ಶಕ್ತಿಯೂ ಇದೇ ಕೀರವಾಣಿಯವರು. ಇವರೀಗ ಡಿ,ಬಾಸ್ ನಟನೆಯ ಕುರುಕ್ಷೇತ್ರಕ್ಕೆ ಧ್ವನಿಯಾಗಿದ್ದಾರೆ. ಕುರುಕ್ಷೇತ್ರದ ಸಾಹೋರೇ ಸಾಹೋ ಸಾಂಗ್​ಗೆ ಕೀರವಾಣಿ ಯವರು ಧ್ವನಿ ನೀಡಿದ್ದಾರೆ.

ಹಾಗೆಂದ ಮಾತ್ರಕ್ಕೆ ಕನ್ನಡದಲ್ಲಿ ಕೀರವಾಣಿ ಹಾಡಿಲ್ಲ..! ಬದಲಾಗಿ ಎಲ್ರಿಗೂ ಗೊತ್ತೇ ಇರುವಂತೆ ಬಹು ಭಾಷೆಯಲ್ಲಿ ರಿಲೀಸ್ ಆಗುತ್ತಿರುವ ಕುರುಕ್ಷೇತ್ರ ತೆಲುಗಲ್ಲೂ ಬರ್ತಿದೆ. ತೆಲುಗು ವರ್ಷನ್ ಸಾಹೋರೇ ಸಾಹೋ ಗೀತೆಗೆ ಕೀರವಾಣಿ ಧ್ವನಿಯಾಗಿದ್ದಾರೆ. ಕನ್ನಡದಲ್ಲಿ ಡಾ.ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ತೆಲುಗಲ್ಲಿ ವೆನ್ನಿಲಕಾಂತಿ ಸಾಹಿತ್ಯ ನೀಡಿದ್ದಾರೆ. ಆ ಹಾಡಡನ್ನು ಕೀರವಾಣಿ ಹಾಡಿದ್ದಾರೆ. 

ಒಟ್ನಲ್ಲಿ ಕುರುಕ್ಷೇತ್ರ ಪಂಚ ಭಾಷೆಗಳಲ್ಲಿ ರಿಲೀಸ್ ಆಗಲಿದ್ದು, ಬಹು ದೊಡ್ಡ ಯಶಸ್ಸನ್ನು ಕಾಣುವ ನಿರೀಕ್ಷೆಯಿದ್ದು, ಕುರುಕ್ಷೇತ್ರ ಟೀಮ್​ಗೆ ನಮ್ ಕಡೆಯಿಂದಲೂ ಶುಭ ಹಾರೈಕೆ.

LEAVE A REPLY

Please enter your comment!
Please enter your name here