‘ಕುರುಕ್ಷೇತ್ರ’ ಲೀಕ್ ಮಾಡಿದ ತಮಿಳು ರಾಕರ್ಸ್..!

0
1331

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕುರುಕ್ಷೇತ್ರ’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಚಿತ್ರಕ್ಕೆ ಪೈರಸಿ ಕಾಟ ಎದುರಾಗಿದೆ. ತಮಿಳು ರಾಕರ್ಸ್​ ಅನ್ನೋ ವೆಬ್​​ಸೈಟ್​ ‘ಕುರುಕ್ಷೇತ್ರ’ವನ್ನು ಕದ್ದಿದೆ.
ಆಗಸ್ಟ್ 9ರಂದು ಕನ್ನಡ ಮತ್ತು ತಮಿಳಿನಲ್ಲಿ ರಿಲೀಸ್ ಆಗಿದ್ದ ಕುರುಕ್ಷೇತ್ರ ಆಗಸ್ಟ್ 15ರಂದು ತಮಿಳಿನಲ್ಲಿ ತೆರೆಕಂಡಿತ್ತು. ತಮಿಳಿನಲ್ಲಿ ರಿಲೀಸ್ ಆದ ದಿನವೇ ಆನ್​ಲೈನ್​ನಲ್ಲಿ ಹರಿದಾಡುತ್ತಿದೆ. ಈ ಹಿಂದೆ ಯಜಮಾನ, ನಟಸಾರ್ವಭೌಮ ಮೊದಲಾದ ಸಿನಿಮಾಗಳನ್ನು ಮೊದಲ ದಿನವೇ ಲೀಕ್ ಮಾಡಿದ್ದ ತಮಿಳು ರಾಕರ್ಸ್ ಈಗ ಬಿಗ್ ಬಜೆಟ್​ ಮೂವಿ ಕುರುಕ್ಷೇತ್ರಕ್ಕೂ ದೊಡ್ಡ ತಲೆನೋವಾಗಿದೆ.
ಪೈರಸಿ ಕಾಟದಿಂದ ಚಿತ್ರದ ಗಳಿಕೆಗೂ ಪೆಟ್ಟು ಬಿದ್ದಿದ್ದು, ಈ ವೆಬ್​ ಸೈಟ್​ ವಿರುದ್ಧ ಕ್ರಮ ಜರುಗಿಸಬೇಕೆಂಬ ಕೂಗು ಎಲ್ಲೆಡೆ ಕೇಳಿ ಬರ್ತಾ ಇದೆ. ಇನ್ನು ಕುರುಕ್ಷೇತ್ರ ಮುನಿರತ್ನ ನಿರ್ಮಾಣ, ನಾಗಣ್ಣ ನಿರ್ದೇಶನದ ಸಿನಿಮಾ. ದರ್ಶನ್ ಅವರಲ್ಲದೆ ರೆಬೆಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಶಶಿಕುಮಾರ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಬಹು ದೊಡ್ಡ ತಾರಾಗಣ ಈ ಸಿನಿಮಾದಲ್ಲಿದೆ.

LEAVE A REPLY

Please enter your comment!
Please enter your name here