ಕೇರಳದಲ್ಲೂ ಶುರುವಾಯ್ತು ಚಾಲೆಂಜಿಂಗ್ ಸ್ಟಾರ್ ಅಬ್ಬರ..!

0
184

ಸ್ಯಾಂಡಲ್ವುಡ್​ ಸಿನಿಮಾಗಳು ಈಗ ಪರ ಭಾಷೆಗಳಲ್ಲಿ, ಪರ ರಾಜ್ಯಗಳಲ್ಲಿಯೂ ಸಖತ್ ಸದ್ದು ಮಾಡ್ತಿವೆ. ಅಂಥಾ ಸಿನಿಮಾಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕುರುಕ್ಷೇತ್ರ’ ಕೂಡ ಒಂದು. ಈಗಾಗಲೇ ಕನ್ನಡ, ತೆಲುಗು, ತಮಿಳಿನಲ್ಲಿ ರಾರಾಜಿಸುತ್ತಿರುವ ಕುರುಕ್ಷೇತ್ರದ ‘ಸುಯೋಧನ’ ಕೇರಳದಲ್ಲಿ ಇಂದಿನಿಂದ ಅಬ್ಬರಿಸಲು ಶುರುಮಾಡಿದ್ದಾನೆ.
ಹೌದು, ಕುರುಕ್ಷೇತ್ರ ಮಲೆಯಾಳಂ ಭಾಷೆಯಲ್ಲಿ ಕೇರಳದ 100 ಥಿಯೇಟರುಗಳಲ್ಲಿ ರಿಲೀಸ್ ಆಗಿದೆ. ದರ್ಶನ್ ಸಿನಿ ಜರ್ನಿಯ 50ನೇ ಸಿನಿಮಾ ಇದಾಗಿದ್ದು, ಮುನಿರತ್ನ ಚಿತ್ರವನ್ನು ನಿರ್ಮಿಸಿದ್ದಾರೆ. ನಾಗಣ್ಣ ಆ್ಯಕ್ಷನ್ ಕಟ್ ಹೇಳಿದ್ದು, ರೆಬೆಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಅರ್ಜುನ್ ಸರ್ಜಾ, ಶಶಿಕುಮಾರ್, ಶ್ರೀನಿವಾಸ ಮೂರ್ತಿ, ಶ್ರೀನಾಥ್, ರಮೇಶ್ ಭಟ್​, ಯಶಸ್​​ ಸೂರ್ಯ , ಚಂದನ್ ಕುಮಾರ್, ಅವಿನಾಶ್​, ನಿಖಿಲ್ ಕುಮಾರಸ್ವಾಮಿ, ರವಿಶಂಕರ್, ಸೋನುಸೂದ್, ರವಿಚೇತನ್​​, ಭಾರತಿ ವಿಷ್ಣುವರ್ಧನ್, ಹರಿಪ್ರಿಯ, ಪವಿತ್ರ ಲೋಕೇಶ್, ಮೇಘನಾರಾಜ್ ಸೇರಿದಂತೆ ಬಹು ದೊಡ್ಡ ತಾರಾಗಣವಿದೆ.

LEAVE A REPLY

Please enter your comment!
Please enter your name here