Home ರಾಜ್ಯ ಹೆಚ್.ಡಿ.ಕೆ ಗೈರಿಗೆ ನ್ಯಾಯಧೀಶರ ಆಕ್ಷೇಪ

ಹೆಚ್.ಡಿ.ಕೆ ಗೈರಿಗೆ ನ್ಯಾಯಧೀಶರ ಆಕ್ಷೇಪ

ರಾಮನಗರ: ಮಾಜಿ ಮುಖ್ಯಮಂತ್ರಿ ಕುಮಾರ್ ಸ್ವಾಮಿ ಅವರ ತಂದೆ-ತಾಯಿಗೆ ಕೋವಿಡ್ ಸೋಂಕು ದೃಢ ಪಟ್ಟಿದೆ.  ಕುಮಾರ ಸ್ವಾಮಿ ರಾಮನಗರದಲ್ಲಿ ಪಕ್ಷದ ಕಾರ್ಯರ್ತರ ಜೊತೆಗೆ ಸಭೆಯನ್ನ ನಡೆಸಿದ್ದಾರೆ. ಏಪ್ರಿಲ್ 1 ರಂದು ಕುಮಾರ ಸ್ವಾಮಿ ಅವರು ಹಲಗೆವಡೇರಹಳ್ಳಿ ಡಿನೋಟಿಫಿಕೇಷನ ಪ್ರಕರಣದ ವಿಚಾರಣೆಗೆ  ಹಾಜರಾಗಬೇಕಿತ್ತು. ಇವರು ತಂದೆ-ತಾಯಿಗೆ ಕೊರೋನಾ ಪಾಸಿಟಿವ್ ಇದೆ ಎಂದು ಕೋರ್ಟ್ ಗೆ ಹೇಳಿದ್ದು, ಕೋರ್ಟ್ ಗೆ ಹಾಜರಾಗದಿರುವ ಕಾರಣದಿಂದಾಗಿ, ಕುಮಾರ ಸ್ವಾಮಿ ಮೇಲೆ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯ ಗರಂ ಆಗಿದೆ.  

ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಇವರ ಪತ್ನಿ ಚೆನ್ನಮ್ಮಗೆ ಕೊವಿಡ್ ಪಾಸಿಟಿವ್ ವರದಿಯಾಗಿತ್ತು. ಕುಮಾರಸ್ವಾಮಿ ವಿಚಾರಣೆಗೆ ಹಾಜರಾಗಲು ಸೋಂಕಿತರ ಪ್ರಾಥಮಿಕ ಸಂಪರ್ಕದ ನೆಪ ಕೊಟ್ಟಿದ್ದರು ಎಂದು ನ್ಯಾಯಲಯ ತಿಳಿಸಿದ್ದು, ಚುನಾಣೆಯ ಕೆಲಸಗಳಿಗೆ, ಪಕ್ಷದ ಕಾರ್ಯಗಳಿಗೆ ಹೋಗುತ್ತೀರಿ, ಕೋರ್ಟ್ ವಿಚಾರಣೆಗೆ ಕರೆದರೆ ಏನೇನೋ ಹೇಳುತ್ತೀರಿ ಎಂದು  ಹೆಚ್.ಡಿ.ಕೆ ಗೈರಿಗೆ ನ್ಯಾಯಧೀಶರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಹೆಚ್.ಡಿ.ಕೆ ಕ್ವಾರೆಂಟೈನ್ ಆಗದೇ ರಾಮನಗರದಲ್ಲಿ ಸಭೆ ನೆಡಸಿದ್ದಾರೆ. ನೀವು ಕ್ಚಾರೆಂಟೈನ್ ಅಂತ ಕಾರಣ ಕೊಟ್ಟಿದ್ದೀರಾ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದರ ಕುರಿತು ಟಿವಿ, ಪೇಪರ್ ನಲ್ಲಿ ಗಮನ ಹರಿಸುತ್ತೇವೆ ಎಂದು ನ್ಯಾಯಧೀಶರು ಹೇಳಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಧನ್ವಂತರಿ ಹೋಮದ ಮೊರೆ ಹೋದ ಸಚಿವ ಈಶ್ವರಪ್ಪ..!

ಶಿವಮೊಗ್ಗ : ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಶೀಘ್ರದಲ್ಲೇ ಇಳಿಮುಖ ಕಾಣಲಿ ಎಂದು ಸಚಿವ ಈಶ್ವರಪ್ಪ, ಹೋಮದ ಮೊರೆ ಹೋಗಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ದಿನೇ ದಿನೆ, ಏರಿಳಿತ ಕಾಣುತ್ತಿರುವ ಹಿನ್ನೆಲೆಯಲ್ಲಿ,...

ಕೊಪ್ಪಳದಲ್ಲಿ ಒಂದು ಬ್ಲಾಕ್ ಫಂಗಸ್ ಕೇಸ್ ಪತ್ತೆ..!

ಕೊಪ್ಪಳ: ಕೊರೊನಾ ಎರಡನೇ ಅಲೆ ತೀವ್ರವಾಗಿ ಪ್ರಸರಣವಾಗುತ್ತಿರುವ ಈ ಸಂದರ್ಭದಲ್ಲಿ ಮತ್ತೊಂದು ಆತಂಕ ಎದುರಾಗಿದ್ದು, ಬ್ಲ್ಯಾಕ್​ ಫಂಗಸ್​ ಹರಡುವಿಕೆ ಬಗ್ಗೆ ಭಯ ಶುರುವಾಗಿದೆ. ಹೀಗಿರುವಾಗಲೇ ಕೊಪ್ಪಳ ಜಿಲ್ಲೆಯಲ್ಲಿ ಬ್ಲ್ಯಾಕ್​ ಫಂಗಸ್ ಕಾಣಿಸಿಕೊಂಡಿದೆ ಎಂದು...

‘ತೌಕ್ತೆ’ ಅವಾಂತರಕ್ಕೆ ಕತ್ತಲಲ್ಲಿ ಉತ್ತರಕನ್ನಡ ಬೆಳಕು ನೀಡಲು ಹೆಸ್ಕಾಂ ಸಿಬ್ಬಂದಿಗಳಿಂದ ಸಾಹಸ..!

ಕಾರವಾರ : ತೌಕ್ತೆ ಚಂಡಮಾರುತ ಸೃಷ್ಟಿಸಿದ ಅವಾಂತರ ಒಂದೆರೆಡಲ್ಲ. ಒಂದೆಡೆ ಕಡಲು ಉಕ್ಕೇರಿ ಕಡಲತೀರದ ಮಂದಿ ಸಂಕಷ್ಟಕ್ಕೆ ಸಿಲುಕಿದ್ದರೇ ಇನ್ನೊಂದೆಡೆ ಎಲ್ಲೆಡೆ ಮರಗಿಡಗಳು ಉರುಳಿ ವಿದ್ಯುತ್ ಕಂಬಗಳು ಬುಡಮೇಲಾಗಿವೆ. ಪರಿಣಾಮ ಉತ್ತರಕನ್ನಡ ಜಿಲ್ಲೆಯ...

‘ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸುವಲ್ಲಿ ವೈದ್ಯರ ತಂಡ ಯಶಸ್ವಿ’

ಶಿವಮೊಗ್ಗ: ಪ್ರಾಣದ ಹಂಗನ್ನೂ ಲೆಕ್ಕಿಸದೇ ಸೊರಬ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ತಂಡ ಕೋರೋನಾ ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಯಿಗೆ ಮೂರನೇ ಹೆರಿಗೆ ಯಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ....

Recent Comments