ಕುಮಾರಸ್ವಾಮಿ ವಿರುದ್ಧ ರೇವಣ್ಣ ಕೆಂಡಾಮಂಡಲ!

0
827

ಹಳೇ ದೋಸ್ತಿಗಳ ನಡುವೆ ಮತ್ತೆ ಟಾಕ್ ವಾರ್ ಶುರುವಾಗಿದೆ. ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ವಿರುದ್ಧ ಮಾಜಿ ಸಚಿವ ಹೆಚ್​.ಎಂ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ‘ಸಮ್ಮಿಶ್ರ ಸರ್ಕಾರ ಪತನವಾಗಲು ಕಾಂಗ್ರೆಸ್ ಕಾರಣವಲ್ಲ. ಕುಮಾರಸ್ವಾಮಿ ಶಾಸಕರನ್ನು ಸರಿಯಾಗಿ ನಡೆಸಿಕೊಂಡಿಲ್ಲ. ಈಗ ಸಿದ್ದಾಯಮಯ್ಯ ವಿರುದ್ಧ ಆರೋಪಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ರು.
ಹೆಚ್​ಡಿಕೆ ಟ್ವೀಟ್ ವಿರುದ್ಧ ಫುಲ್ ಗರಂ ಆಗಿರುವ ಹೆಚ್​.ಎಂ ರೇವಣ್ಣ, ‘ನಾನೇ ಏನನ್ನಾದ್ರು ಕೇಳಿದರೆ ಕೆಲಸ ಆಗುತ್ತಿರಲಿಲ್ಲ. ಅಣ್ಣಾ, ಏನಣ್ಣಾ, ಎಂದು ಚೆನ್ನಾಗಿ ಮಾತನಾಡಿ ಕಳುಹಿಸುತ್ತಿದ್ರು. ಈಗ ತನ್ನ ತಪ್ಪನ್ನು ಸಿದ್ದರಾಮಯ್ಯ ಮೇಲೆ ಹಾಕೋದೆಷ್ಟು ಸರಿ? ಹೆಚ್​ಡಿಕೆ ಸರಿಯಾಗಿ ನಡೆದುಕೊಂಡಿದ್ರೆ ಏನೂ ಆಗ್ತಿರ್ಲಿಲ್ಲ. ಇದನ್ನು ಜೆಡಿಎಸ್​ನ ಪ್ರಮುಖ ನಾಯಕರೇ ಹೇಳ್ತಿದ್ದಾರೆ. ಅವರ ಶಾಸಕರನ್ನೇ ಹಿಡಿದುಕೊಳ್ಳಲು ಅವರಿಗೆ ಆಗಲಿಲ್ಲ ಎಂದರು.


”ನಮ್ಮ ಸಹವಾಸ ಮಾಡಿ ಎಂದು ಸಿದ್ದರಾಮಯ್ಯನವರನ್ನು ಬೇಡಿದ್ದು ಯಾರು. ಅವರ ಮನೆ ಬಾಗಿಲಿಗೆ ಹೋಗಿದ್ದು ಯಾರು? ಸಹಕಾರ(?) ಕೊಟ್ಟವರು ಯಾರು? ಪಕೃತಿ ಚಿಕಿತ್ಸೆಯಲ್ಲಿ ಕೂತು ಕತ್ತಿ ಮಸೆದಿದ್ದು ಯಾರು? ದಿನಕ್ಕೊಬ್ಬರ ಮೂಲಕ ನನ್ನನ್ನು ಟೀಕಿಸಿದ್ದು ಯಾರು?” ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು.

LEAVE A REPLY

Please enter your comment!
Please enter your name here