ಮಂಡ್ಯ : ಇಂದಿನ ಈ ಸ್ಥಿತಿಗೆ ಮುಖ್ಯಮಂತ್ರಿಗಳೇ ಕಾರಣ ಅಂತ ಮಾಜಿ ಸಚಿವ ಚೆಲುವರಾಯಸ್ವಾಮಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಇಂದಿನ ಈ ಸ್ಥಿತಿಗೆ ಮುಖ್ಯಮಂತ್ರಿಗಳೇ ಕಾರಣ.ರೇವಣ್ಣ ಅವರಿಂದ ಈ ರೀತಿ ಆಗಿದೆ ಅಂತಿದ್ದಾರೆ. ಅವರನ್ನೇ ಸಚಿವ ಸ್ಥಾನದಿಂದ ಹೊರಗಿಟ್ಟು ಸರ್ಕಾರ ನಡೆಸಬಹುದಿತ್ತು. ಈ ಎಲ್ಲಾ ಬೆಳವಣಿಗೆಗೆ ರೇವಣ್ಣ ಮತ್ತು ಕುಮಾರಸ್ವಾಮಿಯೇ ಕಾರಣ. ಎಂದಿದ್ದಾರೆ.
ಈ ಬೆಳವಣಿಗೆಗೆ ಅಣ್ಣತಮ್ಮಂದಿರೇ ಹೊಣೆ ಕುಮಾರಸ್ವಾಮಿ ಇಲ್ಲದೇ ರೇವಣ್ಣ ಒಬ್ಬರೇ ಹೊಣೆಯಾಗಲು ಸಾಧ್ಯವಿಲ್ಲ. ಅಂತಿಮವಾಗಿ ಸಹಿ ಹಾಕುವವರು, ನಿರ್ಧಾರ ಕೈಗೊಳ್ಳುವವರು ಕುಮಾರಸ್ವಾಮಿ. ಕುಮಾರಸ್ವಾಮಿ ಹೆಸರು ಉಳಿಸಿಕೊಳ್ಳಲು ರೇವಣ್ಣ ಹೆಸರು ಡ್ಯಾಮೇಜ್ ಮಾಡುತ್ತಿದ್ದಾರೆ. ಇದಕ್ಕೆಲ್ಲ ನೇರ ಹೊಣೆ ಕುಮಾರಸ್ವಾಮಿ ಹೊರತು ರೇವಣ್ಣ ಅಲ್ಲ. ರಾಜಕೀಯ ಅನುಭವ ಇಲ್ಲದವರು ರೇವಣ್ಣ ಅಂತಾರೆ ಅಷ್ಟೇ. ದೇವೇಗೌಡರ ಕುಟುಂಬದವರ ಕಿರುಕುಳ ಹೆಗಡೆಯವರ ಕಾಲದಿಂದ ಇಲ್ಲಿಯವರೆಗೂ ಮುಂದುವರಿದಿದೆ. ಈ ಹಿಂದೆ ನಾವು ಏಳು ಜನ ತಪ್ಪು ಮಾಡಿ ಪಕ್ಷ ಬಿಟ್ಟು ಬಂದಿರಲಿಲ್ಲ. ಅದೇ ಸ್ಥಿತಿ ಸಚಿವ ಪುಟ್ಟರಾಜುಗೂ ಬರಬಹುದು ಅಂತ ಚೆಲುವರಾಯಸ್ವಾಮಿ ಎಚ್ಚರಿಸಿದ್ದಾರೆ.