Homeರಾಜ್ಯಇತರೆಮಾನವೀಯತೆ ಮೆರೆದ ಕುಮಾರ ಬಂಗಾರಪ್ಪ!

ಮಾನವೀಯತೆ ಮೆರೆದ ಕುಮಾರ ಬಂಗಾರಪ್ಪ!

ಶಿವಮೊಗ್ಗ:  ಡಾಟಾ ಎಂಟ್ರಿ ಆಪರೇಟರ್ ಪಡೆದಿದ್ದ ಹೆಚ್ಚುವರಿ ಕಂದಾಯ ಹಣವನ್ನು ವ್ಯಕ್ತಿಗೆ ವಾಪಸ್ಸು  ಕೊಡಿಸಿ ಶಾಸಕ ಕುಮಾರ ಬಂಗಾರಪ್ಪ ಮಾನವೀಯತೆ ಮೆರೆದಿದ್ದಾರೆ. 

ಪಟ್ಟಣದ  ಪಂಚಾಯಿತಿಯಲ್ಲಿ ಡಾಟಾ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ರೇಖಾ ಕಳೆದ ವಾರ ಶಿಂಡಿ ರಂಗನಾಥ ಎಂಬುವವರಿಂದ ಚ್ಚುವರಿ ಹಣ ಪಡೆದು  ವಂಚಿಸಿದ್ದರು. ರಂಗನಾಥ್ 2,400 ರೂ ಗಳನ್ನು ಪಾವತಿಸಬೇಕಾಗಿತ್ತು. ಆದ್ರೆ, ಡಾಟಾ ಆಪರೇಟರ್ ರೇಖಾ 14,000 ರೂ ಗಳನ್ನು ಪಡೆದಿದ್ದಾರೆ. ಈ ವಿಚಾರವನ್ನು ರಂಗನಾಥ್​  ಮಂಗಳವಾರ ಪಟ್ಟಣ ಪಂಚಾಯಿತಿ ಸಭೆ ವೇಳೆ ಶಾಸಕ ಕುಮಾರ್ ಬಂಗಾರಪ್ಪ ಅವರ ಗಮನಕ್ಕೆ ತಂದಿದ್ದಾರೆ. 

ಹೆಚ್ಚುವರಿ ಹಣ ಪಡೆದು ವಂಚಿಸಿರುವ ರೇಖಾ ಅವರನ್ನು ಕೆಲಸದಿಂದ ಅಮಾನತು ಮಾಡುವಂತೆ ಆದೇಶಿಸಿ, ರಂಗನಾಥ್ ಅವರಿಂದ ಪಡೆದಿರುವ ಹೆಚ್ಚುವರಿ ಹಣವನ್ನು ಕೂಡಲೇ ವಾಪಸ್ಸು ನೀಡುವಂತೆ ಸೂಚಿಸಿದ್ದಾರೆ. ಅಲ್ಲದೆ ಪ ಪಂ ಅಧಿಕಾರಿಗಳಿಗೆ, ನೌಕರರಿಗೆ ನ್ಯಾಯ-ನೀತಿ ಧರ್ಮದಿಂದ ನಡೆದುಕೊಳ್ಳುವಂತೆ ಖಡಕ್ ಆಗಿ ಎಚ್ಚರಿಸಿದ್ದಾರೆ. 

ಪಟ್ಟಣ ಪಂಚಾಯತಿ ಸಿಬ್ಬಂದಿಗೆ ಶಾಸಕ ಕುಮಾರ ಬಂಗಾರಪ್ಪ ತರಾಟೆ : ಹೆಚ್ಚುವರಿ ಕಂದಾಯ ವಾಪಸ್

ಪಟ್ಟಣ ಪಂಚಾಯತಿ ಸಿಬ್ಬಂದಿಗೆ ಶಾಸಕ ಕುಮಾರ ಬಂಗಾರಪ್ಪ ತರಾಟೆ : ಹೆಚ್ಚುವರಿ ಕಂದಾಯ ವಾಪಸ್

Posted by Powertvnews on Wednesday, November 20, 2019

 

 

LEAVE A REPLY

Please enter your comment!
Please enter your name here

- Advertisment -

Most Popular

Recent Comments