ಲಕ್ನೋ : ಉತ್ತರ ಪ್ರದೇಶದ ಉನ್ನಾವ್ನಲ್ಲಿ 2 ವರ್ಷದ ಹಿಂದೆ ನಡೆದಿದ್ದ ಯುವತಿಯೊಬ್ಬಳ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ಉಚ್ಛಾಟಿತ ಶಾಸಕ ಕುಲದೀಪ್ ಸೇಂಗರ್ ದೋಷಿ ಎಂದು ಘೋಷಿಸಿದೆ.
ಪ್ರಕರಣದ ಬಗ್ಗೆ ಆ.5ರಿಂದ ಸತತ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಕುಲದೀಪ್ ಸೇಂಗರ್ ದೋಷಿ ಎಂದು ತೀರ್ಪಿತ್ತಿರೋ ಕೋರ್ಟ್ ಡಿಸೆಂಬರ್ 19ಕ್ಕೆ ಶಿಕ್ಷೆ ಪ್ರಕಟಿಸಲಿದೆ.
ಪ್ರಕರಣದ ಹಿನ್ನಲೆ : ಕುಲದೀಪ್ 2017ರಲ್ಲಿ ಮಹಿಳೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ. ಈ ಹಿನ್ನಲೆಯಲ್ಲಿ ಬಿಜೆಪಿ 2019 ಆಗಸ್ಟ್ ನಲ್ಲಿ ಪಕ್ಷದಿಂದ ಉಚ್ಚಾಟನೆ ಮಾಡಿತ್ತು . ಕಳೆದ ಜುಲೈನಲ್ಲಿ ಸಂತ್ರಸ್ತ ಮಹಿಳೆ ಇದ್ದ ಕಾರು ಅಪಘಾತಕ್ಕಿಡಾಗಿತ್ತು, ಸಂತ್ರಸ್ತೆ ಮಹಿಳೆ ತೀವ್ರವಾಗಿ ಗಾಯಗೊಂಡು , ಆಕೆಯ ಇಬ್ಬರು ಚಿಕ್ಕಮ್ಮಂದಿರು ಸಾವನ್ನಪ್ಪಿದರು .ಈ ಅಪಘಾತದ ಹಿಂದೆ ಕುಲದೀಪ್ ಪಾತ್ರವಿದೆ ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿತ್ತು .