ಬೆಂಗಳೂರು: ಇಂದು ಸಾರಿಗೆ ನೌಕರರ ಮುಷ್ಕರ ಕೊನೆಗೂ ಅಂತ್ಯವಾಗಿದೆ. ಬಾಗಲಕೋಟೆಯಲ್ಲಿ KSRTC ನೌಕರರು ಮುಷ್ಕರ ಅಂತ್ಯ ಬೆನ್ನಲೇ ಬಸ್ ಸಂಚಾರ ಆರಂಭ ಮಾಡಿ ಪರಸ್ಪರ ಗುಲಾಬಿ ಹೂ ಎರಚಿ ಸಂಭ್ರಮ ಆಚರಣೆ ಮಾಡಲಾಯಿತು. ಬಾಗಲಕೋಟೆ ಜಿಲ್ಲೆಯಾದ್ಯಂತ 100ಕ್ಕೂ ಅಧಿಕ ಬಸ್ ಗಳ ಸಂಚಾರ ಆರಂಭಿದರು. ಕಳೆದ ನಾಲ್ಕು ದಿನಗಳಿಂದ ಸಾರ್ವಜನಿಕರು ಮುಷ್ಕರದಿಂದ ಬಸ್ ಗಾಗಿ ಪರದಾಡುವಂತಾಗಿತ್ತು. ಆದರೆ ಇಂದು ಮುಷ್ಕರ ಅಂತ್ಯವಾದ ಬೆನ್ನಲೇ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಹುಬ್ಬಳ್ಳಿ-ಧಾರವಾಡದಲ್ಲಿ 100ಕ್ಕೂ ಹೆಚ್ಚು ಬಸ್ ಗಳು ಸಂಚಾರ ಆರಂಭ ಮಾಡಿವೆ. ಗ್ರಾಮೀಣ ಭಾಗಗಳಿಗೂ ಬಸ್ ಸಂಚಾರ ಆರಂಭ ಮಾಡಿದ್ದಾರೆ. ದಾವಣಗೆರೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಸಿಹಿ ಹಂಚಿ ಸಂಭ್ರಮ ಆಚರಣೆ. ಚಿಕ್ಕಮಗಳೂರಿನಲ್ಲಿ ಬಸ್ ನಿಲ್ದಾಣಕ್ಕೆ 20ಕ್ಕೂ ಹೆಚ್ಚು ಬಸ್ ಗಳ ಆಗಮನ.