Home ರಾಜ್ಯ ಬೆಂಗಳೂರು ಪತ್ರಕರ್ತರ ಗೋಲ್ಡ್​ ಹಿಂತಿರುಗಿಸಿ ಮಾನವೀಯತೆ ಮೆರೆದ ಕೆಎಸ್​ಆರ್​ಟಿಸಿ ಸಿಬ್ಬಂದಿ!

ಪತ್ರಕರ್ತರ ಗೋಲ್ಡ್​ ಹಿಂತಿರುಗಿಸಿ ಮಾನವೀಯತೆ ಮೆರೆದ ಕೆಎಸ್​ಆರ್​ಟಿಸಿ ಸಿಬ್ಬಂದಿ!

ವಿಜಯಪುರ : ಹೈದ್ರಾಬಾದ್ ಮಾರ್ಗದಲ್ಲಿ ಪ್ರಯಾಣಿಸುವ ಬಸ್​ನಲ್ಲಿ ಸಿಕ್ಕ ಗೋಲ್ಡ್​ ಚೈನ್​ನ್ನು ವಾರಸುದಾರರಿಗೆ ಹಿಂತಿರುಗಿಸಿ ಕೆಎಸ್​ಆರ್​ಟಿಸಿ ಸಿಬ್ಬಂದಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ. ವಿಜಯಪುರ ನಗರ ಕೆಎಸ್​ಆರ್​ಟಿಸಿ ಘಟಕದ ನಿರ್ವಾಹಕ ಎಸ್.ಜೆ.ಬೊಮ್ಮಣಗಿ ತಮ್ಮ ಪ್ರಾಮಾಣಿಕತೆ ತೋರಿದ್ದಾರೆ. ಇಂದು ಬೆಳಗಿನ ಜಾವ ಹೈದ್ರಾಬಾದ್​ನಿಂದ ವಿಜಯಪುರಕ್ಕೆ ಬಂದ ಬಸ್​ನಲ್ಲಿ ಪತ್ರಕರ್ತ ಚಂದ್ರಕಾಂತ್​ ಮಾವೂರ ಚೈನ್ ಕಳೆದುಕೊಂಡಿದ್ರು. ಈ ವೇಳೆ ಆ ಬಸ್​ ನಿರ್ವಾಹಕ ಎಸ್.ಜೆ.ಬೊಮ್ಮಣಗಿ ಪ್ರಯಾಣಿಕರ ರಿಸರ್ವೇಶನ್ ಟಿಕೆಟ್​ನಲ್ಲಿನ ನಂಬರ್​ಗೆ ಕರೆ ಮಾಡಿ ಚೈನ್ ಸಿಕ್ಕಿದ್ದು, ಅದನ್ನು ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಬಸ್​ನಲ್ಲಿ ಸಿಕ್ಕ ಎಲ್ಲ ಗೋಲ್ಡ್​ನ್ನು ಘಟಕ ವ್ಯವಸ್ಥಾಪಕ ಶ್ರೀ ಎಂ.ಎಸ್.ಹಿರೇಮಠ, ಮತ್ತು ಸಾರಿಗೆ ನಿರೀಕ್ಷಕ ರೇವಣಸಿಧ್ದ ಅವರ ಸಮ್ಮುಖದಲ್ಲಿ ವಾರಸುದಾರರಿಗೆ ಹಿಂತಿರುಗಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

‘ಮನೆ ಮಾಲೀಕನನ್ನು ರಕ್ಷಿಸಿ ಸಾವಿಗೆ ಶರಣಾದ ಶ್ವಾನ’

ವಿಜಯಪುರ: ಶ್ವಾನ ಮನುಷ್ಯನ ಅತಿ ನಿಯತ್ತಿನ ಪ್ರಾಣಿ, ತನ್ನನು ಸಾಕಿದ ಯಜಮಾನನ ಮಾನ ಪ್ರಾಣ ಉಳಿಸಲು ಜೀವವನ್ನೇ ಪಣಕ್ಕಿಟ್ಟಿರುವ ಸಾವಿರಾರು ಪ್ರಕರಣ ದೇಶದಲ್ಲಿ‌ನಡೆದು ಹೋಗಿವೆ. ಅಂತದೇ ಒಂದು ಪ್ರಕರಣ ವಿಜಯಪುರ ಜಿಲ್ಲೆಯಲ್ಲಿ ಬೆಳಕಿಗೆ...

‘ಅಂಗ ವೈಕಲ್ಯತೆ ಶಾಪವಲ್ಲ,ಹುಟ್ಟಿನಿಂದ ಬರಬಹುದು’ : ಶಶಿಕಲಾ ಜೊಲ್ಲೆ

ಬೆಂಗಳೂರು : ಅಂಗ ವೈಕಲ್ಯತೆ ಶಾಪವಲ್ಲ,ಹುಟ್ಟಿನಿಂದ ಅಥವಾ ಅಪಘಾತದಿಂದಲೂ ಬರಬಹುದು.ಬಂದ ಮೇಲೆ ಕುಗ್ಗದೆ ಧೈರ್ಯವಾಗಿ ಎದುರಿಸಿ ಸಾಧನೆಯ ಮೆಟ್ಟಿಲನ್ನು ಏರಬೇಕಾಗಿದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಚಿವೆ ಶಶಿಕಲಾ ಜೊಲ್ಲೆ ಎಂದು ಹೇಳಿದರು. ಬೆಂಗಳೂರು...

ಕೋರ್ಟ್ ಆವರಣದಲ್ಲೇ ವಕೀಲನ ಬರ್ಬರ ಹತ್ಯೆ !

ವಿಜಯನಗರ (ಹೊಸಪೇಟೆ) : ಕೋರ್ಟ್ ಆವರಣದಲ್ಲೇ ವಕೀಲನೋರ್ವನ ಬರ್ಬರ ಹತ್ಯೆಯಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ಕೋರ್ಟ್ ಆವರಣದಲ್ಲಿ ಘಟನೆ ನಡೆದಿದೆ. ಡಾ. ತಾರಿಹಳ್ಳಿ ವೆಂಕಟೇಶ್ ಎನ್ನುವವರನ್ನ ಮನೋಜ್ ಎಂಬ ಯುವಕ (22) ಮಚ್ಚಿನಿಂದ...

ಬಾಲಕನ ಮೇಲೆ ಪೈಶಾಚಿಕ ಕೃತ್ಯ ಮರ್ಮಾಂಗಕ್ಕೆ ಚಿತ್ರಹಿಂಸೆ ನೀಡಿ ಕಗ್ಗೊಲೆ

ಕಲಬುರಗಿ/ಜೇವರ್ಗಿ : ಅನ್ಯ ಕೋಮಿನ ಯುವತಿಯನ್ನ ಪ್ರೀತಿಸುತ್ತಿದ್ದ 14 ವರ್ಷದ ಬಾಲಕನ ಮರ್ಮಾಂಗಕ್ಕೆ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿರುವಂತಹ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದ ಮಹೇಶ್ ಎಂಬ...

Recent Comments