ಬೆಂಗಳೂರು: ರಾಜ್ಯ ಸರ್ಕಾರ ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ಹೋಗಲು ಅನುಮತಿಯನ್ನು ನೀಡಿದ್ದು, ಅದಕ್ಕಾಗಿ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ.ಹಾಗಾಗಿ ಕಾರ್ಮಿಕರು ತಮ್ಮೂರು ಸೇರುವ ಖುಷಿಯಲ್ಲಿದ್ದಾರೆ. ಆದರೆ ಇದರ ನಡುವೆ ಬಸ್ನ ದರ ಹೆಚ್ಚಿಸಿದ್ದು, ಕಾರ್ಮಿಕರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಮೆಜೆಸ್ಟಿಕ್ನಲ್ಲಿ ತಮ್ಮ ಊರಿಗೆ ತೆರಳಲು ಸಾವಿರಾರು ವಲಸೆ ಕಾರ್ಮಿಕರು ಜಮಾಯಿಸಿದ್ದಾರೆ. ಆದರೆ ಈಗ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸುವ ನಿಟ್ಟಿನಲ್ಲಿ ಸರ್ಕಾರ ಬಡವರ ಲೂಟಿಗೆ ಇಳಿದಿದೆಯಾ ಎಂಬ ಅನುಮಾನ ಕಾಡುತ್ತಿದೆ. ಸರ್ಕಾರಿ ಬಸ್ ದರದಲ್ಲಿ ದಿಢೀರ್ ಏರಿಕೆಯನ್ನು ಮಾಡಿದ್ದಾರೆ.
ಕೊಪ್ಪಳಕ್ಕೆ ಹೋಗಲು ಹಿಂದಿನ ದರ 600 ರೂ – ಈಗ 1000 ರೂ.
ಬಾಗಲಕೋಟೆಗೆ ಹೋಗಲು ಹಿಂದಿನ ದರ 700 ರೂ – ಈಗ 1301 ರೂ.
ಬಳ್ಳಾರಿಗೆ ಹೋಗಲು ಹಿಂದಿನ 450 ರೂ – ಈಗಿನ ದರ 844ರೂ.
ಚಿತ್ರದುರ್ಗಕ್ಕೆ ಹೋಗಲು 300 ರೂ – ಈಗಿನ ದರ 602 ರೂ.
ಕಲಬುರಗಿಗೆ ಹೋಗಲು 600 ರೂ – ಈಗಿನ ದರ 1619 ರೂ.
3souvenir