ಬೆಂಗಳೂರು: ಲಾಕ್ಡೌನ್ ಸಡಿಲಿಕೆ ಹಿನ್ನೆಲೆ ಈಗಾಗಲೇ ರಾಜ್ಯಾದ್ಯಂತ ಕೆಎಸ್ಆರ್ಟಿಸಿ ಬಸ್ಗಳು ಸಂಚಾರ ಪ್ರಾರಂಭವಾಗಿದೆ. ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಲ್ಲಿ ಸಂಚರಿಸುವ ಬಸ್ಗಳಿಗೆ ಸಮಯವನ್ನು ನಿಗದಿ ಮಾಡಲಾಗಿತ್ತು. ಆದರೆ ಇದೀಗ ಬಸ್ ಸಂಚರಿಸುವ ಸಮಯವನ್ನು ವಿಸ್ತರಣೆ ಮಾಡಲಾಗಿದೆ.
ರಾಜ್ಯದಲ್ಲಿ ಸಂಚರಿಸುವ ಬಸ್ಗಳು ಬೆಳಗ್ಗೆ 7 ಗಂಟೆಗೆ ಹೊರಟರೆ ಸಂಜೆ 7 ಗಂಟೆಯೊಳಗೆ ನಿಗದಿತ ಸ್ಥಳವನ್ನು ತಲುಪಬೇಕೆನ್ನುವ ನಿಯಮವನ್ನು ಜಾರಿಗೊಳಿಸಿತ್ತು. ಆದರೆ ಈಗ ಆ ಸಮಯವನ್ನು ವಿಸ್ತರಣೆ ಮಾಡಿದ್ದು, ಕೊನೆಯ ಬಸ್ ಸಂಜೆ 7 ಗಂಟೆಗೆ ಬೆಂಗಳೂರಿನಿಂದ ಹೊರಡುತ್ತದೆ. ಹೀಗೆ ಸಂಜೆ 7 ಕ್ಕೆ ಹೊರಟ ಬಸ್ ಮರುದಿನ ಬೆಳಗ್ಗೆ ನಿಗದಿತ ಸ್ಥಳವನ್ನು ತಲುಪಲಿದೆ. ಮುಂದಿನ ಆದೇಶಗಳು ಬರುವವರೆಗೂ ಇದೇ ಮಾದರಿಯಲ್ಲಿ ಕೆಎಸ್ಆರ್ಟಿಸಿ ಬಸ್ಗಳು ಸಂಚರಿಸಲಿವೆ ಎಂದು ಮಾಹಿತಿ ನೀಡಿದೆ.
2employers