Homeರಾಜ್ಯಪೊಲೀಸ್ ಭದ್ರತೆ ಇದ್ದರೂ KSRTC ಬಸ್ಸಿಗೆ ಕಲ್ಲು ತೂರಾಟ . . !

ಪೊಲೀಸ್ ಭದ್ರತೆ ಇದ್ದರೂ KSRTC ಬಸ್ಸಿಗೆ ಕಲ್ಲು ತೂರಾಟ . . !

ಹೊಸೂರು : ಸಾರಿಗೆ ನೌಕರರು ತಮ್ಮ ಬೇಡಿಕೆಗಳು ಈಡೇರುವವರೆಗೆ ಅನಿರ್ಧಿಷ್ಟಾವದಿ ಮುಷ್ಕರ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರ ಖಾಸಗಿ ಬಸ್ ಗಳ ಮೊರೆ ಹೋಗಿದೆ. ಸವಯಂ ಪ್ರೇರಿತರಾಗಿ ಬೆರಳೆಣಿಕೆಯಷ್ಟು ನೌಕರರು ಕೆಲಸಕ್ಕೆ ಹಾಜರಾಗಿದ್ದಾರೆ. ಈ ವೇಳೆಯಲ್ಲಿ ತಮಿಳುನಾಡಿನ ಹೊಸೂರಿಗೆ ಹೋಗಿದ್ದ ಬಸ್ಸಿಗೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ.

ಆನೇಕಲ್ ಡಿಪೋದಿಂದ ಹೊಸೂರಿಗೆ ಹೋಗಿದ್ದ ಕೆಎಸ್ಆರ್ಟಿಸಿ ಬಸ್ ಮೇಲೆ ದಾಳಿ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರಿಂದ ಬಸ್ಸಿಗೆ ಕಲ್ಲು ತೂರಾಟ ನಡೆದಿದೆ. ಚಾಲಕನ ಬಳಿ ಇರುವ ಮಿರರ್ ಗೆ ಕಲ್ಲು ಬಿದ್ದಿದೆ. ಪೊಲೀಸ್ ಭದ್ರತೆ ಇದ್ದರೂ ಬಸ್ಸಿಗೆ ಕಲ್ಲು ಹೊಡೆದ ಪುಂಡರು. ಗನ್ ಮ್ಯಾನ್ ಸಮೇತ ಭದ್ರತೆಯಲ್ಲಿ ಬಸ್ಸನ್ನು ಹೊಸೂರಿಗೆ ಕಳುಹಿಸಲಾಗಿತ್ತು.

LEAVE A REPLY

Please enter your comment!
Please enter your name here

- Advertisment -

Most Popular

Recent Comments