ಬೆಂಗಳೂರು: ಕೋಡಿಹಳ್ಳಿ ಚಂದ್ರಶೇಕರ್ ನಿಮ್ಮ ದಾರಿ ತಪ್ಪಿಸುತ್ತಿದ್ದಾರೆ. ಸಮಾಜಘಾತುಕ ಶಕ್ತಿಗಳಲ್ಲಿ ಕೋಡಿಹಳ್ಳಿ ಚಂದ್ರಶೇಕರ್ ಮೋದಲನೆಯವರು ಎಂದು ಸಚಿವ ಕೆ.ಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಕೋಡಿಹಳ್ಳಿ ಚಂದ್ರಶೇಕರ್ ರಾಜ್ಯದಲ್ಲಿ ಅಶಾಂತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಎಸ್ಮಾ ಜಾರಿಯಾಗಿ ನೌಕರರು ಜೈಲಿಗೆ ಹೋದರೆ ಕೋಡಿಹಳ್ಳಿ ರಕ್ಷಣೆ ಮಾರುತ್ತಾರಾ? ನಿಮ್ಮ ಕುಟುಂಬಕ್ಕೆ ಕೋಡಿಹಳ್ಳಿ ರಕ್ಷಣೆ ನೀಡುತ್ತಾರಾ? ಯಾರದ್ದೋ ಮಾತು ಕೇಳಿ ಮುಷ್ಕರ ನಡೆಸುವುದು ಸರಿಯಲ್ಲ. ಸಾರಿಗೆ ಯೂನಿಯನ್ ಗೆ ಸ್ವತಂತ್ರವಾಗಿ ಯೋಚನೆ ಮಾಡುವ ಬುದ್ಧಿ ಇಲ್ವಾ? ನಿಮ್ಮ ನೌಕರರೇ ನಿಮ್ಮ ವಿರುದ್ಧ ತಿರುಗಿ ಬೀಳುವ ಪ್ರಸಂಗ ಎದುರಾಗುತ್ತೆ. ಕೋಡಿಹಳ್ಳಿ ಮಾತು ಕೇಳಿದರೆ ಯೂನಿಟ್ ಒಡೆದು ಹೋಗುತ್ತದೆ. 6ಕೋಟಿ ಜನರಿಗೆ ತೊಂದರೆ ಆಗುತ್ತದೆ. ಸಾರಿಗೆ ಯೂನಿಯನ್ ಗೆ ಸ್ವಂತ ಶಕ್ತಿ ಇಲ್ವಾ ಎಂದು ಈಶ್ವರಪ್ಪ ಶಿವಮೊಗ್ಗದಲ್ಲಿ ಕೋಡಿಹಳ್ಳಿ ಚಂದ್ರಶೇಕರ್ ವಿರುದ್ಧ ಕೀಡಿ ಕಾರಿದ್ದಾರೆ.