ಶಿವಮೊಗ್ಗ : ಆ ಅಯೋಗ್ಯ ಇರುವವರೆಗೂ ನಾನು ಯಾವ್ದೇ ಸಭೆಗೆ ಬರಲ್ಲ ಅಂತ ಸಚಿವ ಕೆ.ಎಸ್ ಈಶ್ವರಪ್ಪ ಅಧಿಕಾರಿಯೊಬ್ಬರ ವಿರುದ್ಧ ಫುಲ್ ಗರಂ ಆಗಿದ್ದಾರೆ.
ಜಿಲ್ಲೆಯ ಸ್ಮಾರ್ಟ್ ಸಿಟಿ ಕಾಮಗಾರಿಯೊಂದರ ಬಳಿ ತೆರಳಿದ್ದಾಗ ಸಂಸದ ಬಿ.ವೈ ರಾಘವೇಂದ್ರ ಕರೆಮಾಡಿ ಶಿವಮೊಗ್ಗ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಸಿಮ್ಸ್)ನ ಕಾರ್ಯಕ್ರಮವೊಂದಕ್ಕೆ ಆಹ್ವಾನ ನೀಡಿದ್ದಾರೆ. ಆ ವೇಳೆ ಸಿಮ್ಸ್ ಹೆಸರು ಪ್ರಸ್ತಾಪವಾಗುತ್ತಲೇ ಈಶ್ವರಪ್ಪ, ಆ ಆ ಅಯೋಗ್ಯ ಇರೋವರೆಗೂ ನಾನು ಅಲ್ಲಿನ ಯಾವ ಸಭೆಗೂ ಬರೋದಿಲ್ಲ. ಅವನನ್ನ ಕಿತ್ತಾಕಿ ಬಾ ನೀನು. ಮರುದಿನವೇ ಯಾವ ಸಭೆಗೆ ಕರೆದ್ರೂ ಅಲ್ಲಿಗೆ ಬರ್ತೀನಿ ಸಿಡಿಮಿಡಿಗೊಂಡಿದ್ದಾರೆ.
ಸಿಮ್ಸ್ ನಿರ್ದೇಶಕರಾಗಿರುವ ಡಾ ಲೇಪಾಕ್ಷಿ ವಿರುದ್ಧ ಸಚಿವ ಈಶ್ವರಪ್ಪ ಈ ರೀತಿಯಾಗಿ ಸಿಡಿಮಿಡಿಗೊಂಡಂತೆ ಕಂಡುಬಂದಿದೆ. ಆತ ಸಿಮ್ಸ್ ನಿರ್ದೇಶಕನಾಗಿ ಇರವವರೆಗೂ ನಾನು ಅಲ್ಲಿಗೆ ಕಾಲಿಡುವುದಿಲ್ಲ ,ಆತನನ್ನು ಕಿತ್ತು ಬಿಸಾಕು ಎಂದು ಬಿ.ವೈ ರಾಘವೇಂದ್ರರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ, ಲೇಪಾಕ್ಷಿ ವಿರುದ್ಧ ಈಶ್ವರಪ್ಪ ಕೋಪ ಯಾಕೆ ಅಂತ ಮಾತ್ರ ತಿಳಿದುಬಂದಿಲ್ಲ.