ಮಂಡ್ಯ : ಜಿಲ್ಲೆಯ ಜೀವನಾಡಿ ಕೆಆರ್ಎಸ್ ಅಣೆಕಟ್ಟೆ ಮುಂಗಾರಿನ ಮೊದಲ ಮಳೆಗೆ 100 ಅಡಿ ತುಂಬಿದೆ. 124.80 ಅಡಿಯ ಗರಿಷ್ಠ ಮಟ್ಟವನ್ನು ಹೊಂದಿದ್ದು, ಬೆಳಗ್ಗೆ 7ರ ಸಮಯಕ್ಕೆ 100.33 ಅಡಿ ಇದೆ.
ಅಣೆಕಟ್ಟೆಗೆ ಒಳಹರಿವು 8972 ಕ್ಯೂಸೆಕ್ ಇದೆ. ಹೊರ ಹರಿವು 458 ಕ್ಯೂಸೆಕ್ ಇದ್ದು, ಸದ್ಯ ನೀರಿನ ಸಂಗ್ರಹ 23.071 ಟಿಎಂಸಿ ಇದೆ.
ಅಣೆಕಟ್ಟೆಯ ಗರಿಷ್ಠ ಸಂಗ್ರಹ 49 ಟಿಎಂಸಿ ಆಗಿದೆ. ಮಳೇಗಾಲದ ಮೊದಲ ಅವಧಿಯಲ್ಲಿ 100 ಅಡಿ ತುಂಬಿರೋದು ರೈತರ ಮುಖದಲ್ಲಿ ಸಂತಸ ಮೂಡಿಸಿದೆ. ಮಡಿಕೇರಿಯಲ್ಲಿ ಮಳೆ ಹಿನ್ನಲೆ ನದಿಯಲ್ಲಿ ಹರಿವಿನ ಪ್ರಮಾಣ ಹೆಚ್ಚಳವಾಗಿದೆ.