ಹುಬ್ಬಳ್ಳಿ: ಮಾಸ್ಕ್ ಧರಿಸದೇ ಓಡಾಡುವರನ್ನು ಕೋವಿಡ್ ತಪಾಸಣೆ ನಡೆಸಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಮಾಡಿದೆ. ಆದರೆ ಈ ಆದೇಶ ಕೋವಿಡ್ ತಪಾಸಣೆಗೆ ಬರುವ ಸಿಬ್ಬಂದಿಗಳಿಗೆ ಪೀಕಲಾಟ ತಂದಿದೆ. ನಗರದ ಹಳೇ ಬಸ್ ನಿಲ್ದಾಣದಲ್ಲಿ ಮಾಸ್ಕ್ ಧರಿಸದ ಹಿನ್ನೆಲೆಯಲ್ಲಿ ಮಹಿಳೆಗೆ ಕೋವಿಡ್ ತಪಾಸಣೆ ಮುಂದಾದಾಗ ಮೂವರು ಮಹಿಳೆಯರು ಸೇರಿ ವೈದ್ಯೆಯ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಮಹಿಳೆಯರು ಕೋವಿಡ್ ತಪಾಸಣೆ ಮಾಡಿಸಿಕೊಳ್ಳಲು ನಿರಾಕರಣೆ ಮಾಡಿದಲ್ಲದೇ ಮೊಬೈಲ್ ನಂಬರ್ ನೀಡಲು ಹಿಂದೇಟು ಹಾಕಿ ವೈದ್ಯೆ ಮೇಲೆ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ಮಹಿಳೆ ವೈದ್ಯೆ ಕಣ್ಣೀರು ಹಾಕಿದರು. ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ಆಗಮಿಸಿದ ಉಪನಗರ ಠಾಣೆ ಪೊಲೀಸರು ಹಲ್ಲೆಗೊಳಗಾದ ವೈದ್ಯೆಯನ್ನು ಸಮಾಧಾನಪಡಿಸಿ, ಹಲ್ಲೆ ಮಾಡಿದ ಮಹಿಳೆಯರಿಗೆ ಬುದ್ದಿವಾದ ಹೇಳಿದರು.