HomeP.Cricketಇಂಟರ್ ನ್ಯಾಷನಲ್ವೆಲ್ ಕಮ್ ಬೆಂಗಳೂರು,ದೆಹಲಿ ಸೇರಿ ದೇಶದ ವಿವಿಧ ಮಹಾನಗರಗಳಿಗೆ ತಲುಪಿದ ಕೊವಿಡ್-19 ಲಸಿಕೆ

ವೆಲ್ ಕಮ್ ಬೆಂಗಳೂರು,ದೆಹಲಿ ಸೇರಿ ದೇಶದ ವಿವಿಧ ಮಹಾನಗರಗಳಿಗೆ ತಲುಪಿದ ಕೊವಿಡ್-19 ಲಸಿಕೆ

ಬೆಂಗಳೂರು: ಪುಣೆಯ ಸೆರಂ ಇನ್ಸ್​ಟಿಟ್ಯೂಟ್​ನಿಂದ ಇಂದು ಮುಂಜಾನೆ ಹೊರಟ ಕೋವಿಶೀಲ್ಡ್ ಕೊವಿಡ್ -19 ಲಸಿಕೆ ಬೆಂಗಳೂರು, ದೆಹಲಿ ಸೇರಿದಂತೆ ದೇಶದ ವಿವಿಧ ,ಮಹಾನಗರಗಳಿಗೆ ಈಗಾಗಲೇ ತಲುಪಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು ಬೆಳಗ್ಗೆ 8 ಗಂಟೆಗೆ ಪುಣೆ ವಿಮಾನ ನಿಲ್ದಾಣದಿಂದ ಸ್ಪೈಸ್ ಜೆಟ್ ವಿಮಾನ ಲಸಿಕೆಯನ್ನು ಹೊತ್ತು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 11.45ರ ಸುಮಾರಿಗೆ ಬಂದಿಳಿದಿದೆ. ದೆಹಲಿ ವಿಮಾನ ನಿಲ್ದಾಣಕ್ಕೆ 10 ಗಂಟೆ ಹೊತ್ತಿಗೆ ಬಂದಿಳಿಯಿತು. ಅಲ್ಲಿಂದ ವ್ಯಾಕ್ಸಿನ್ ಕೇಂದ್ರಗಳಿಗೆ ರವಾನೆಯಾಗಲಿದೆ.

ಇಂದು 56.5 ಲಕ್ಷ ಡೋಸ್ ಕೊವಿಡ್-19 ಲಸಿಕೆಯನ್ನು ಪುಣೆಯಿಂದ 13 ಮಹಾನಗರಗಳಿಗೆ ತಲುಪಿಸಲು ನಾಲ್ಕು ವಿಮಾನ ಯಾನ ಸಂಸ್ಥೆಗಳ 9 ವಿಮಾನಗಳಲ್ಲಿ ಸಾಗಿಸಲಾಗುತ್ತದೆ. ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

ಇದೇ 16ರಿಂದ ಕೊವಿಡ್-19 ಲಸಿಕೆ ಅಭಿಯಾನ ದೇಶಾದ್ಯಂತ ಆರಂಭವಾಗುತ್ತಿದ್ದು, ಆರಂಭದಲ್ಲಿ ಕೊವಿಡ್-19 ಕಾರ್ಯಕರ್ತರಿಗೆ ನೀಡಲಾಗುತ್ತದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments