Sunday, May 29, 2022
Powertv Logo
Homeರಾಜ್ಯನಿಷೇಧವಿದ್ದರೂ ಕೊಪ್ಪಳದಲ್ಲಿ ಕೋಳಿ ಜೂಜಾಟ

ನಿಷೇಧವಿದ್ದರೂ ಕೊಪ್ಪಳದಲ್ಲಿ ಕೋಳಿ ಜೂಜಾಟ

ಕೊಪ್ಪಳ : ನಿಷೇಧದದ ನಡುವೆಯೂ ಹೊಸ ವರ್ಷದ ಪ್ರಯುಕ್ತ ಕೊಪ್ಪಳದ ಕಾರಟಗಿ ತಾಲೂಕಿನ ಬೂದುಗುಂಪಾ ಗ್ರಾಮದ ಮಲ್ಲಯ್ಯನ ಗುಡ್ಡದ ಬಳಿ ಕೋಳಿ ಜೂಜಾಟ ರಾಜಾರೋಷವಾಗಿ ನಡೆಸುತ್ತಿದ್ದು ಕ್ಯಾಮರಾ ಕಾಣುತ್ತಿದ್ದಂತೆ ಜೂಜೂಕೊರರು ಕಾಲ್ಕಿತ್ತಿದ್ದಾರೆ.

ಹುಂಜಗಳ ಕಾಲಿಗೆ ಕತ್ತಿಯನ್ನು ಕಟ್ಟಿ ಪಂದ್ಯವನ್ನು ನಡೆಸಲಾಗುತ್ತದೆ. ಹುಂಜಗಳ ಮೇಲೆ ಜನ ಸಾವಿರಾರು ರೂಪಾಯಿ ಜೂಜು ಕಟ್ಟುತ್ತಾರೆ. ಪಂದ್ಯಾವಳಿಗಾಗಿಯೇ ಹುಂಜಗಳನ್ನು ಬಲಿಷ್ಠವಾಗಿ ಬೆಳೆಸಿ ತರಲಾಗುತ್ತದೆ. ಸುತ್ತಮುತ್ತಲ ಗ್ರಾಮದ ಜನ ಮಾತ್ರವಲ್ಲದೆ ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳಿಂದಲೂ ನೂರಾರು ಜನರು ಆಗಮಿಸುತ್ತಾರೆ. 

ಅಲ್ಲದೆ ನಾನಾ ತಳಿಯ ಹುಂಜಗಳು, ವಿಶೇಷವಾಗಿ ಜವಾರಿ ಹುಂಜಕ್ಕೆ ಬೆಟ್ಟಿಂಗ್‌ನಲ್ಲಿ ಭಾರಿ ಬೇಡಿಕೆಯಿದ್ದು, ಇದರಲ್ಲಿ ಅಬ್ರಾಸ್ ಹುಂಜಕ್ಕೂ ಜನರು ಮೂಗಿಬಿದ್ದು ಬೆಟ್ಟಿಂಗ್ ಕಟ್ಟುತ್ತಾರೆ. ಬೆಟ್ಟಿಂಗ್‌ನಿಂದಾಗಿ ಈ ಭಾಗದಲ್ಲಿ ಹುಂಜದ ದರವೂ ಹೆಚ್ಚಾಗಿದೆ. ಎತ್ತರ, ಶೈಲಿ, ತೂಕವನ್ನು ಗಮನಿಸಿ 600-1000 ರೂ ದರದಲ್ಲಿ ಹುಂಜಗಳನ್ನು ಖರೀದಿ ಮಾಡಲಾಗುತ್ತದೆ.

ಹುಂಜಕ್ಕೆ ಮತ್ತೊಂದು ಹುಂಜವನ್ನು ಎದುರಾಳಿಯಾಗಿ ಬಿಡಲಾಗುತ್ತದೆ. ಕದನಕ್ಕೆ ಇಳಿಯುವ ಹುಂಜಗಳು ಪರಸ್ಪರ ಕುಕ್ಕುವುದು, ಕಾಲಿನಿಂದ ತಿವಿಯುವ ಮೂಲಕ ಪಂದ್ಯದಲ್ಲಿ ಜಯಶಾಲಿಯಾಗುತ್ತವೆ. ಸೋತು ಸುಣ್ಣವಾದ ಹುಂಜ ಕೆಳಗೆ ಬಿದ್ದರೆ, ಗೆದ್ದ ಹುಂಜ ಸಾಕಿದ ಯಜಮಾನ, ಹಣ ಹೂಡಿದವರ ಪಾಲಿನ ಅದೃಷ್ಟವಾಗುತ್ತದೆ.

ಯುವಕರ ದಂಡು ಕೋಳಿ ಪಂದ್ಯದಲ್ಲಿ ಬಾಜಿ ಕಟ್ಟಲು ಬರುತ್ತಾರೆ. ಬಹಿರಂಗವಾಗಿ ನಡೆಯುವ ಈ ಜೂಜಾಟಕ್ಕೆ ಸುತ್ತಲಿನ ಹಳ್ಳಿಗಳ ನೂರಾರು ಯುವಕರು ಸಾವಿರಾರು ರೂ ಹಣವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಆರಂಭದಲ್ಲಿ 500-1000 ರೂಪಾಯಿಗೆ ಇದ್ದ ಬೆಟ್ಟಿಂಗ್ ದರ ಈಗ 5000 ರಿಂದ ಲಕ್ಷದ ಗಡಿ ದಾಟಿದೆ. ಬಹುತೇಕರು ಪ್ರತಿಷ್ಠೆಯಿಂದಲೇ ಕೋಳಿ ಪಂದ್ಯಕ್ಕೆ ಇಳಿದು ಬೆಟ್ಟಿಂಗ್ ಆಡುತ್ತಿದ್ದಾರೆ.

ಪ್ರತಿ ವರ್ಷವೂ ಸಂಕ್ರಾಂತಿ, ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಕೋಳಿ ಪಂದ್ಯ ಇಲ್ಲಿ ಸಾಮಾನ್ಯವಾಗಿ ನೆಡೆಯುತ್ತದೆ ಅಂತ ಗೊತ್ತಿದ್ದರೂ ಪೊಲೀಸರು ಮಾತ್ರ ಇದವರೆಗೂ ಕ್ರಮಕ್ಕೆ ಮುಂದಾಗಿಲ್ಲ. 

LEAVE A REPLY

Please enter your comment!
Please enter your name here

- Advertisment -

Most Popular

Recent Comments