Home P.Special ಭತ್ತದ ಸಸಿಯಲ್ಲಿ ಮೂಡಿದ ಗಣೇಶ..!

ಭತ್ತದ ಸಸಿಯಲ್ಲಿ ಮೂಡಿದ ಗಣೇಶ..!

ಕೊಪ್ಪಳ : ಈ ಬಾರಿ ಕೊರೋನಾ ನಡುವೆಯೂ ರಾಜ್ಯಾದ್ಯಂತ ಗಣಪತಿ ಹಬ್ಬವನ್ನು ಜನರು ವಿಶಿಷ್ಟ ಹಾಗೂ ವಿಭಿನ್ನ ಶೈಲಿಯಲ್ಲಿ ಆಚರಿಸುತಿದ್ದಾರೆ. ಅದರಂತೆ ಕೊಪ್ಪಳದಲ್ಲಿ ವಿದ್ಯಾಸಂಸ್ಥೆಯೊಂದು ಭತ್ತದ ಸಸಿಗಳಲ್ಲಿ ಗಣಪತಿ ಬಾವಚಿತ್ರವನ್ನು ಮೂಡಿಸಿ ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದರೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಸಂಸ್ಥೆಯ ಆವರಣದಲ್ಲಿ ಇಂತಹದೊಂದ್ದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿ ಸೈ ಎನಿಸಿಕೊಂಡಿದ್ದಾರೆ.

ಹೌದು ಈಗಾಗಲೇ ಪಿಒಪಿ ಗಣಪನ್ನು ಸರ್ಕಾರ ನಿಷೇಧಿಸಿ ಆದೇಶ ಮಾಡಿದೆ ಮೇಲಾಗಿ ಪಿಒಪಿ ಗಣಪ ಪರಿಸರ ದೃಷ್ಟಿಯಿಂದಲೂ ಮಾರಕ ಈ ಕಾರಣಕ್ಕಾಗಿಯೇ ಶಾಲೆಯ ಆಡಳಿತ ಮಂಡಳಿ ಒಂದು ಹೆಜ್ಜೆ ಮುಂದೆ ಹೋಗಿ ಆಲೋಚನೆ ಮಾಡಿದೆ.

ಕೊಪ್ಪಳದ ಗಂಗಾವತಿ ತಾಲ್ಲೂಕು ಭತ್ತದ ಕಣಜ ಎಂದೇ ಹೆಸರುವಾಸಿಯಾಗಿದೆ ಸೊ ನಾವ್ಯಾಕೆ ಆ ಭತ್ತದಿಂದಲೇ ಗಣಪನನ್ನು ಮಾಡಬಾರದು ಎಂದು ಭತ್ತದ ಸಸಿ ತಂದು ನಾಟಿ ಮಾಡಿದ್ದಾರೆ.

ಅದು ಸರಿಯಾಗಿ ಗಣಪತಿ ಹಬ್ಬದ ದಿನದಂದೇ ಗಣೇಶನ ಆಕೃತಿ ಪಡೆದು ಎಲ್ಲರನ್ನೂ ಅಚ್ಚರಿಪಡಿಸಿದೆ. ಇನ್ನೂ ಇಲ್ಲಿ ಬಳಸಿದ ಭತ್ತದ ಸಸಿಗಳನ್ನು ವೇಸ್ಟ್​ ಮಾಡದೆ ಅವನ್ನು ಮತ್ತೆ ಗದ್ದೆಯಲ್ಲಿ ಸಸಿ ನಾಟಿ ಮಾಡುವ ಮುಖಾಂತರ ಮಕ್ಕಳಿಗೆ ಕೃಷಿಯ ಪಾಠವನ್ನು ಮಾಡುತ್ತಿರುವುದು ವಿಶೇಷ ಅಂತಾನೆ. ಹೇಳಬಹುದು ಹಾಗೂ ವಿದ್ಯಾನಿಕೇತನ ಶಾಲಾ ಆಡಳಿತ ಮಂಡಳಿಯವರು ಇದನ್ನು ಮೇಲಿನಿಂದ ವಿಡಿಯೋ ಮಾಡಿ ತಮ್ಮ ವಾಟ್ಸಪ್ ಸ್ಟೇಟಸ್ ಇಟ್ಕೊಂಡು ನಾಡಿನ ಜನತೆಗೆ ಶುಭಾಶಯ ಕೊರುತ್ತಿದೆ. ಒಟ್ಟಾರೆ ಭತ್ತದ ನಾಡಿನಲ್ಲಿ ಭತ್ತದ ಸಸಿಯಲ್ಲಿ ಗಣೇಶನನ್ನು ತಯಾರಿಸುವ ಮುಖಾಂತರ ವಿಭಿನ್ನ ಶೈಲಿಯಲ್ಲಿ ಹಬ್ಬವನ್ನು ಆಚರಸಿ ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ. 

-ಶುಕ್ರಾಜ ಕುಮಾರ್

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments