ಗುರು ಅವರ ಕುಟುಂಬಕ್ಕಾಗಿ ಕೊಪ್ಪಳ ಯುವಕರಿಂದ ದೇಣಿಗೆ

0
223

ಕೊಪ್ಪಳ : ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಗುಡಿಗೆರೆಯ ನಿವಾಸಿ, ವೀರ ಯೋಧ ಗುರು ಅವರ ಕುಟುಂಬಕ್ಕೆ ನೆರವಾಗಲು ಕೊಪ್ಪಳದ ಯುವಕರು ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆ.
ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಯುವಕರು ತಂಡ ಕಟ್ಟಿಕೊಂಡು, ಸ್ನೇಹಿತರೆಲ್ಲಾ ಒಡಗೂಡಿ ದೇಣಿಗೆ ಸಂಗ್ರಹದಲ್ಲಿ ನಿರತರಾಗಿದ್ದಾರೆ. ಗ್ರಾಮದಲ್ಲಿನ ಪ್ರತಿ ಮನೆಗಳಿಗೆ, ಅಂಗಡಿಗಳಿಗೆ ತೆರಳಿ ಹಣವನ್ನು ಸಂಗ್ರಹಿಸುತ್ತಿದ್ದಾರೆ. ದೇಣಿಗೆ ಸಂಗ್ರಹದ ಬಳಿಕ ಗುರು ಅವರ ಹುಟ್ಟೂರು ಗುಡಿಗೆರೆಗೆ ಹೋಗಿ ಅವರ ಕುಟುಂಬಕ್ಕೆ ಹಣ ನೀಡಿ, ‘ನಾವು ನಿಮ್ಮೊಂದಿಗೆ ಇದ್ದೀವಿ’ ಅಂತ ಧೈರ್ಯ ತುಂಬಿ, ಸಾಂತ್ವನ ಹೇಳಲಿದ್ದಾರೆ.

LEAVE A REPLY

Please enter your comment!
Please enter your name here