ಉಗ್ರನನ್ನು ಕಂಡು ಬೆಚ್ಚಿ ಬಿದ್ರು ಕೊಪ್ಪಳ ಜನತೆ..!

0
1836

ಕೊಪ್ಪಳ : ಉಗ್ರರನ್ನು ಕಂಡು ಕೊಪ್ಪಳ ಜನ ಬೆಚ್ಚಿ ಬಿದ್ದಿದ್ದಾರೆ..! ಅರೆ, ಕೊಪ್ಪಳದಲ್ಲಿ ಭಯೋತ್ಪಾದಕರು ಸಿಕ್ಕರಾ ಅಂತ ನೀವು ಭಯ ಪಡ್ಬೇಡಿ.. ಇದರ ಕಥೆಯೇ ಬೇರೆ ಇದೆ..! ಜನ ಬೆಚ್ಚಿ ಬಿದ್ದಿದ್ದು ಫೇಕ್ ಟೆರರಿಸ್ಟ್​ಗಳನ್ನು ಕಂಡು..!
ಹೌದು, ಪೊಲೀಸ್ ವೇಷದಲ್ಲಿ ಬಂದ ಟೆರರಿಸ್ಟ್ ಕೊಪ್ಪಳ ಬಸ್ ನಿಲ್ದಾಣದಲ್ಲಿ ಬಾಂಬ್ ಇಡುವ ವೇಳೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ ಎನ್ನುವ ವಿಡಿಯೋ ವೈರಲ್ ಮಾಡಿ ಜಿಲ್ಲೆಯ ಜನರನ್ನು ಬೆಚ್ಚಿ ಬಿಳಿಸಿರುವ ಘಟನೆಯೊಂದು ನೆಡೆದಿದೆ.
ಕೊಪ್ಪಳ ಬಸ್ ನಿಲ್ದಾಣದಲ್ಲಿ ದೊಡ್ಡ ದೊಡ್ಡ ಗನ್ ಗಳನ್ನು ಹಿಡಿದುಕೊಂಡು ಟೆರರಿಸ್ಟ್​​ನನ್ನು ಸುತ್ತುವರೆದ ಪೊಲೀಸರು… ಅಬ್ಬಾ ಈ ವಿಡಿಯೋವನ್ನು ನೋಡಿದ್ರೆ ಒಂದು ಕ್ಷಣ ಮೈ ಜುಮ್ ಎನ್ನು..! ಇದು ಎಂಥವರದನ್ನಾದರೂ ಬೆಚ್ಚಿ ಬೀಳಿಸುವಂತಿದೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ ಜನ ಭಯಭೀತರಾಗಿದ್ದಾರೆ. ಆದ್ರೆ, ಅಸಲಿಗೆ ಇದು ಕೊಪ್ಪಳ ಪೊಲೀಸರು ನೆಡಸಿರುವ ಅಣಕು ಪ್ರದರ್ಶನ ಮಾತ್ರ..!
ಟೆರರಿಸ್ಟ್ ನನ್ನು ಯಾವ ರೀತಿ ಬಂಧನ ಮಾಡಲಾಗುತ್ತೆ ಎನ್ನುವುದರ ಕುರಿತು ಪೊಲೀಸರು ಮಾಡಿರುವ ಅಣುಕು ಪ್ರದರ್ಶನ ಇದು.‌ ಆದರೆ ಇದನ್ನೇ ವಿಡಿಯೋ ಮಾಡಿದ ಪುಡಾರಿಗಳು ಕೊಪ್ಪಳ ಬಸ್ ನಿಲ್ದಾಣದಲ್ಲಿ ಟೆರರಿಸ್ಟ್ ಬಂಧನ. ಬಾಂಬ್ ಇಡುವ ವೇಳೆ ಟೆರರಿಸ್ಟ್ ಅನ್ನು ಬಂಧಿಸಿದ ಕೊಪ್ಪಳ ಪೊಲೀಸರು ಎಂದು ಬರೆದು ಹಾಕಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಮಾಡಿದ್ದಾರೆ. ಇನ್ನೂ ಈ ವಿಡಿಯೋ ಅನ್ನು ನೋಡಿದ ಕೊಪ್ಪಳ ಜನತೆ ಅಣಕು ಪ್ರದರ್ಶನ ಎಂದು ತಿಳಿಯದೆ ಬೆಚ್ಚಿ ಬಿದ್ದಿದ್ದಾರೆ.

LEAVE A REPLY

Please enter your comment!
Please enter your name here