Home ರಾಜ್ಯ ಸ್ವಲ್ಪ ನಗಿ ಅನ್ನುವವರ ಅಳಲು..! ಕೊವಿಡ್​ ಆತಂಕ ಕಮ್ಮಿಯಾದ್ರೂ ಬದುಕಿಗಿಲ್ಲ ದಿಕ್ಕು..!

ಸ್ವಲ್ಪ ನಗಿ ಅನ್ನುವವರ ಅಳಲು..! ಕೊವಿಡ್​ ಆತಂಕ ಕಮ್ಮಿಯಾದ್ರೂ ಬದುಕಿಗಿಲ್ಲ ದಿಕ್ಕು..!

ಕೋಲಾರ :  ಸ್ಮೈಲ್ ಪ್ಲೀಸ್ ಎನ್ನುತ್ತಿದ್ದ ಫೋಟೋಗ್ರಾಹಕರು ಇದೀಗ ದುಃಖದಲ್ಲಿದ್ದಾರೆ. ಮುಖದ ಅಂದವನ್ನು ಹೆಚ್ಚಿಸ್ತಿದ್ದ ವಿಡಿಯೋಗ್ರಾಫರುಗಳು ಇದೀಗ ಕಳೆಗುಂದಿದ್ದಾರೆ. ಕೊವಿಡ್ ಪರಿಣಾಮವಾಗಿ ನಷ್ಟಕ್ಕೀಡಾದ ಸ್ಟುಡಿಯೋ ಉದ್ಯಮ ಇನ್ನೂ ಚೇತರಿಸಿಕೊಂಡಿಲ್ಲ. 

ಅದೆಂಥದ್ದೇ ಶುಭ ಕಾರ್ಯಕ್ರಮವಿರಲಿ ಅಲ್ಲಿ ಫೋಟೋ ಮತ್ತು ವಿಡಿಯೋಗ್ರಾಫರುಗಳು ಇರ್ಲೇಬೇಕು. ಅಲ್ಲಿರೋರ ಕೈಯಲ್ಲಿ ಲಕ್ಷ ರೂಪಾಯಿ ಬೆಲೆಯ ಮೊಬೈಲಿದ್ರೂ ಕೂಡಾ ವೃತ್ತಿ ನಿರತ ಫೋಟೋಗ್ರಾಫರುಗಳು ತೆಗೆಯೋ ಫೋಟೋಗಳೇ ಮುಖ್ಯವಾಗಿರುತ್ತೆ. ಕಾರ್ಯಕ್ರಮದಲ್ಲಿ ನೆರೆದವ್ರನ್ನು ಬಲವಂತವಾಗಿ ನಗಿಸುತ್ತಲೆ ಫೋಟೋ ಕ್ಲಿಕ್ ಮಾಡುವ ಫೋಟೋಗ್ರಾಫರ್ರುಗಳ ಬದುಕು ಇದೀಗ ಕಷ್ಟಕರವಾಗಿದೆ. ಇದು ಮಹಾಮಾರಿ ಕೋವಿಡ್ನ ಎಸಗಿರುವ ದುಷ್ಪರಿಣಾಮದ ಸ್ಯಾಂಪಲ್ಲು.

ತೀರಾ ಮೊನ್ನೆಯವರೆಗೂ ಫೋಟೋಗ್ರಾಫರುಗಳಿಲ್ಲದೆ ಯಾವುದೇ ಶುಭ ಸಮಾರಂಭ ನಡೀತಾನೆ ಇರ್ಲಿಲ್ಲ. ಆದ್ರೆ, ಐದಾರು ತಿಂಗಳ ಹಿಂದೆ ವಕ್ಕರಿಸಿದ ಕೊರೋನಾ ವೈರಸ್​​​ ಕಾರಣಕ್ಕಾಗಿ ಮುಖ್ಯವಾಹಿನಿಯಿಂದ ಹಿಂದೆ ಸರಿದ ಫೋಟೋಗ್ರಾಫರುಗಳು ಇದುವರೆಗೂ ಕಷ್ಟದಲ್ಲಿದ್ದಾರೆ. ಲಾಕ್ಡೌನ್ ರದ್ದಾದ ಮೇಲೂ ಆಡಂಭರದ ಶುಭ ಸಮಾರಂಭಗಳಿಗೆ ಜನ್ರು ಆಸಕ್ತಿಯನ್ನು ತೋರಿಸ್ತಿಲ್ಲ. ಇದ್ರ ಪ್ರತಿಕೂಲ ಪರಿಣಾಮವು ಫೋಟೋ-ವಿಡಿಯೋಗ್ರಾಫರುಗಳ ಮೇಲೆ ಆಗಿದೆ.

ರಾಜ್ಯದಲ್ಲಿ ಹತ್ರತ್ರ ಒಂದು ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಫೋಟೋ ಸ್ಟುಡಿಯೋಗಳಿವೆ. ಈ ಉದ್ಯಮದಲ್ಲಿ ಮಾಲಿಕರೂ ಸೇರಿದಂತೆ ಲಕ್ಷಾಂತರ ಮಂದಿ ಕಾರ್ಮಿಕರಿದ್ದಾರೆ. ಕೋವಿಡ್ ಸಂಕಷ್ಟದ ಕಾರಣಕ್ಕಾಗಿ ಸಂಸಾರವೂ ಸೇರಿದಂತೆ ಸ್ಟುಡಿಯೋಗಳ ನಿರ್ವಹಣೆಗೆ ತೊಂದ್ರೆಯಾಗಿದೆ. ಸ್ಟುಡಿಯೋ ಮಾಲೀಕರ ಕಷ್ಟ ಆಲಿಸುವಂತೆ ಸರ್ಕಾರಕ್ಕೆ ಮಾಡಿಕೊಂಡ ಮನವಿಯು ಇದುವರೆಗೂ ಫಲ ಕೊಟ್ಟಿಲ್ಲ.

ಒಟ್ನಲ್ಲಿ, ಕೋವಿಡ್ ಹೊಡೆತಕ್ಕೆ ಸಿಕ್ಕಿ ನಲುಗಿದ ಬಹಳಷ್ಟು ಕ್ಷೇತ್ರಗಳಲ್ಲಿನ ನೊಂದವ್ರಿಗೆ ಸರ್ಕಾರ ನೆರವಿಗೆ ಬಂದಿದೆ. ಅದೇ ರೀತಿಯಾಗಿ ನಮಗೂ ಸರ್ಕಾರದ ಸಹಾಯ ಸಿಗಲಿ ಅಂತ ಮನವಿ ಮಾಡ್ತಿರುವ ಸ್ಟುಡಿಯೋ ಮಾಲಿಕರ ಮೊರೆಯನ್ನು ಸರ್ಕಾರ ಆಲಿಸಬೇಕಾಗಿದೆ.

-ಆರ್.ಶ್ರೀನಿವಾಸಮೂರ್ತಿ

LEAVE A REPLY

Please enter your comment!
Please enter your name here

- Advertisment -

Most Popular

ಅವರ ಬಳಿ ಹಣ ಕೇಳಿದ್ದು ತಪ್ಪು-ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ

ಚಿಕ್ಕಮಗಳೂರು : ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಬಹಳ ಪ್ರಾಮಾಣಿಕ ವ್ಯಕ್ತಿ, ನಿಷ್ಠೆ ಯಿಂದ ಕೆಲಸ ಮಾಡ್ತಾ ಇದ್ದಾರೆ, ಅವರ ಬಳಿ ಕಂದಾಯ ಸಚಿವ ಆರ್.ಅಶೋಕ್ ಪಿಎ ಗಂಗಾಧರ್ ಹಣ ಕೇಳಿದ್ದು ತಪ್ಪು,...

ಪತ್ರಕರ್ತರ ಗೋಲ್ಡ್​ ಹಿಂತಿರುಗಿಸಿ ಮಾನವೀಯತೆ ಮೆರೆದ ಕೆಎಸ್​ಆರ್​ಟಿಸಿ ಸಿಬ್ಬಂದಿ!

ವಿಜಯಪುರ : ಹೈದ್ರಾಬಾದ್ ಮಾರ್ಗದಲ್ಲಿ ಪ್ರಯಾಣಿಸುವ ಬಸ್​ನಲ್ಲಿ ಸಿಕ್ಕ ಗೋಲ್ಡ್​ ಚೈನ್​ನ್ನು ವಾರಸುದಾರರಿಗೆ ಹಿಂತಿರುಗಿಸಿ ಕೆಎಸ್​ಆರ್​ಟಿಸಿ ಸಿಬ್ಬಂದಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ. ವಿಜಯಪುರ ನಗರ ಕೆಎಸ್​ಆರ್​ಟಿಸಿ ಘಟಕದ ನಿರ್ವಾಹಕ ಎಸ್.ಜೆ.ಬೊಮ್ಮಣಗಿ ತಮ್ಮ ಪ್ರಾಮಾಣಿಕತೆ ತೋರಿದ್ದಾರೆ....

ಕೆಂಪುಕೋಟೆ ಹತ್ತಿದವರು ಯಾರು ರೈತರಲ್ಲ : ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು : ನಿನ್ನೆ ದೆಹಲಿಯಲ್ಲಿ ನಡೆದ ಪ್ರತಿಭಟನೆಯ ನೇತೃತ್ವವನ್ನ ರೈತರು ವಹಿಸಿಲ್ಲ, ಕೆಂಪು ಕೋಟೆ ಹತ್ತಿದವರು ಯಾರೂ ಕೂಡ ರೈತರಲ್ಲ, ಹೋರಾಟದ ನೇತೃತ್ವವನ್ನ ಉಮ್ಮರ್ ಖಾಲಿದ್ ಬಿಡುಗಡೆ ಮಾಡಿ ಅನ್ನುವಂತಹ ವಿಚಾರವಾದಿಗಳು ಹಾಗೂ...

‘4 ವರ್ಷ ಸರೆಮನೆ ವಾಸ ಪೂರ್ಣಗೊಳಿಸಿದ ಶಶಿಕಲಾ’

ಬೆಂಗಳೂರು: ದಿ.ಜಯಲಲಿತಾ ಆಪ್ತೆ ಶಶಿಕಲಾ 4 ವರ್ಷ ಶಿಕ್ಷೆ ಅವಧಿ ಪೂರ್ಣಗೊಳಿಸಿ ಇಂದು ಬಿಡುಗಡೆಯಾಗುತ್ತಿದ್ದಾರೆ.  ಅಕ್ರಮ ಆಸ್ತಿ ಗಳಿಕೆ ವಿಚಾರದಲ್ಲಿ ಶಶಿಕಲಾ ಜೈಲು ಸೇರಿದ್ದರು. ಜೈಲಾಧಿಕಾರಿಗಳು ಆಸ್ಪತ್ರೆಗೆ ಬಂದು ಬಿಡುಗಡೆ ಪ್ರಕ್ರಿಯೆ ಮುಗಿಸಿ, ಶಶಿಕಲಾಯಿಂದ...

Recent Comments