Home ರಾಜ್ಯ ಗಣೇಶ ಹಬ್ಬದ ಸಂಭ್ರಮಕ್ಕೆ ಕೊರೋನಾ ಅಡ್ಡಿ..!

ಗಣೇಶ ಹಬ್ಬದ ಸಂಭ್ರಮಕ್ಕೆ ಕೊರೋನಾ ಅಡ್ಡಿ..!

ಕೋಲಾರ :   ಜಿಲ್ಲೆಯಲ್ಲಿ ಮೊನ್ನೆಯವರೆಗೂ ಸಾರ್ವಜನಿಕ ಗಣೇಶೋತ್ಸವದ ಖದರ್​ ಜೋರಾಗಿತ್ತು. ವಿನಾಯಕ ಚೌತಿ ಅಂದ್ರೆ ಇಲ್ಲಿನ ಕೆಲವು ರಾಜಕಾರಣಿಗಳಿಗೆ ಆತಂಕವಿತ್ತು. ಪಬ್ಲಿಕ್​​ನಲ್ಲಿ ಗಣಪತಿಯನ್ನು ಇರಿಸೋರಿಗೆ ಖುಷಿಯಿತ್ತು. ಗೌರಿಸುತನ ಮೂರ್ತಿಗಳನ್ನು ಮಾರೋರಿಗೆ ಆನಂದವಿತ್ತು. ಆದ್ರೆ, ಕೊರೋನಾ ಕಾರಣದಿಂದಾಗಿ ಇದೀಗ ಎಲ್ಲವೂ ಮರೆಯಾಗಿದೆ. 

ಜಿಲ್ಲೆಯಲ್ಲಿ ಈ ಸಲ ಸಾರ್ವಜನಿಕ ಗಣೇಶೋತ್ಸವ ಸಪ್ಪೆಯಾಗಿದೆ. ಈ ಮೊದಲು ಪ್ರತಿ ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಗಲ್ಲಿಗೊಂದ್ರಂತೆ ರಾರಾಜಿಸ್ತಿದ್ದ ಗಣೇಶನ ವಿಗ್ರಹಗಳ ಸಂಭ್ರಮವು ಈ ವರ್ಷ ಮಾಯವಾಗಿದೆ. ಖುದ್ದು ರಾಜಕಾರಣಿಗಳೇ ಗಣೇಶನ ವಿಗ್ರಹಗಳನ್ನು ಉಚಿತವಾಗಿ ವಿತರಣೆ ಮಾಡ್ತಿದ್ದ ಪದ್ದತಿಗೆ ಈ ವರ್ಷ ಕೊರೋನಾ ವೈರಸ್ ಬ್ರೇಕ್ ಹಾಕಿದೆ.
ಕೋಲಾರ ಜಿಲ್ಲೆಯ ರಾಜಕಾರಣಕ್ಕೆ ಹತ್ತು ವರ್ಷಗಳ ಹಿಂದೆ ಕಾಲಿರಿಸಿದ ಹೊಸ ತಲೆಮಾರಿನವರಿಗೆ ಗಣೇಶ ಹಬ್ಬವು ವಿಶೇಷವಾಗಿ ಕಂಡಿತ್ತು. ಏರಿಯಾಗಳಲ್ಲಿನ ತಮ್ಮ ಬೆಂಬಲಿಗರಿಗೆ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸಲು ವಿನಾಯಕನ ಮೂರ್ತಿಗಳನ್ನು ಉಚಿತವಾಗಿ ವಿತರಿಸುವ ಅಭ್ಯಾಸ ಮಾಡಿದ್ರು. ರಾಜಕೀಯ ಭವಿಷ್ಯದ ದೃಷ್ಟಿಯಿಂದ ಶುರು ಮಾಡಿದ ಗಣೇಶನ ವಿಗ್ರಹಗಳ ಉಚಿತ ವಿತರಣೆಯ ಪದ್ದತಿಗೆ ಇದೀಗ ಕೊರೋನಾ ಕಡಿವಾಣ ಹಾಕಿದೆ.
ಭವಿಷ್ಯದ ಉದಯೋನ್ಮುಖ ರಾಜಕಾರಣಿಗಳು ಗಣೇಶನ ವಿಗ್ರಹಗಳ ಮಾರಾಟಗಾರರಿಗೆ ಹೋಲ್ಸೇಲ್ ಗ್ರಾಹಕರಾಗಿದ್ದರು. ಉಚಿತ ಗಣೇಶನ ವಿಗ್ರಹಗಳನ್ನು ವಿತರಿಸ್ತಿದ್ದ ಕಿರಿಯ ರಾಜಕಾರಣಿಗಳಿಂದಾಗಿ ವಿಗ್ರಹ ತಯಾರಕರಿಗೆ ಸಾಕಷ್ಟು ಲಾಭವೂ ಸಿಕ್ತಿತ್ತು. ಆದ್ರೆ, ಈ ಸಲ ಸಾರ್ವಜನಿಕ ಗಣೇಶೋತ್ಸವಕ್ಕೆ ಹಾಕಿರೋ ನಿರ್ಬಂಧದಿಂದಾಗಿ ವ್ಯಾಪಾರವೇ ಇಲ್ಲವಾಗಿದೆ.
ಮೊದಲು ಸ್ಥಳೀಯ ಯುವಕರು ಸಾರ್ವಜನಿಕ ಗಣೇಶೋತ್ಸವಕ್ಕಾಗಿ ಜನರಿಂದ ದೇಣಿಗೆ ಸಂಗ್ರಹಿಸ್ತಿದ್ರು. ಆದ್ರೆ, ಹತ್ತು ವರ್ಷಗಳ ಹಿಂದೆ ಹೊಸ ತಲೆಮಾರಿನ ರಾಜಕಾರಣಿಗಳು ಸಾರ್ವಜನಿಕ ಜೀವನಕ್ಕೆ ಎಂಟ್ರಿ ಕೊಟ್ಟು ಮೇಲೆ ಖದರ್ ಬದಲಾಯ್ತು. ಇದೀಗ ಗಣೇಶ ಹಬ್ಬದ ಖುಷಿಗೂ ಕೊರೋನಾ ಕೊಳ್ಳಿ ಇಟ್ಟಿದೆ.

-ಆರ್.ಶ್ರೀನಿವಾಸಮೂರ್ತಿ

LEAVE A REPLY

Please enter your comment!
Please enter your name here

- Advertisment -

Most Popular

ನಿರಂತರ ಜ್ಯೋತಿ ಯೋಜನೆಯಲ್ಲಿ ಅವ್ಯವಹಾರ: ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವ ನಿರಂತರ ಜ್ಯೋತಿ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆಯಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಕುರಿತು ಸೂಕ್ತ ಕ್ರಮ ಜರುಗಿಸಿ ಎಂದು...

‘ಪಿಬಿ ರಸ್ತೆ ಮೇಲ್ದರ್ಜೆಗೆ ಏರಿಸುವಂತೆ ಗಬ್ಬೂರು ಬೈಪಾಸ್ ಬಂದ್’

ಹುಬ್ಬಳ್ಳಿ: ಪುಣಾ-ಬೆಂಗಳೂರ ಬೈಪಾಸ್ ರಸ್ತೆಯು ಕಿರಿದಾಗಿದ್ದು, ಇದರಿಂದಾಗಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ಕೂಡಲೇ ಈ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಗಬ್ಬೂರು ಬೈಪಾಸ್ ಗೆ...

ಜ. 26 ರಂದು ಪರ್ಯಾಯ ರೈತ ಗಣರಾಜ್ಯೋತ್ಸವ ಪರೆಡ್: ಶಾಂತಕುಮಾರ

ಹುಬ್ಬಳ್ಳಿ : ದೆಹಲಿ ರೈತರ ಹೋರಾಟ ಬೆಂಬಲಿಸಿ ಜ. 26 ರಂದು ರೈತರ ಪರ್ಯಾಯ ಗಣರಾಜ್ಯೋತ್ಸವ ಪರೆಡ್ ಹಮ್ಮಿಕೊಳ್ಳಲಾಗಿದೆ. ಅಂದು ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ , ಮೋಟಾರ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ...

‘ಠಾಕ್ರೆ ಟ್ವೀಟ್ ಖಂಡಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ’

ಬೆಂಗಳೂರು: ಮಾಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಟ್ವೀಟ್ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಮೈಸೂರು ಬ್ಯಾಂಕ್ ಸರ್ಕಲ್ ಬಳಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಧರಣಿ ನಡೆಸುತ್ತಿವೆ. ಉದ್ದವ್ ಠಾಕ್ರೆ ಭೂತದಹನ...

Recent Comments