Friday, September 30, 2022
Powertv Logo
Homeರಾಜ್ಯಚಿಕಿತ್ಸೆಗೆ ಹಣವಿಲ್ಲದೆ ಕುಟುಂಬ ಸದಸ್ಯರ ಆತ್ಮಹತ್ಯೆ : ಹೃದಯವಿದ್ರಾವಕ ಘಟನೆ

ಚಿಕಿತ್ಸೆಗೆ ಹಣವಿಲ್ಲದೆ ಕುಟುಂಬ ಸದಸ್ಯರ ಆತ್ಮಹತ್ಯೆ : ಹೃದಯವಿದ್ರಾವಕ ಘಟನೆ

ಕೋಲಾರ : ಇಡೀ ಪ್ರಪಂಚವೇ ಸದ್ಯ ಕೊರೋನಾ ಅನ್ನೋ ವೈರಸ್ನಿಂದ ಅನಾರೋಗ್ಯದಿಂದ ಬಳಲುತ್ತಿದೆ. ಹೀಗಿರುವಾಗ ಇಲ್ಲೊಂದು ಕುಟುಂಬ ಅನಾರೋಗ್ಯದಿಂದ ಬಳಲಿ ಬಳಲಿ, ಸಹಿಸಿಕೊಳ್ಳಲಾಗದೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ ತಾಯಿ, ಹೆಂಡತಿ ಮೃತಪಟ್ಟರೆ. ಕುಟುಂಬದ ಯಜಮಾನ ಸ್ವಲ್ಪದರಲ್ಲಿಯೇ ಬಚಾವಾಗಿದ್ದಾನೆ. ಅಷ್ಟಕ್ಕೂ ಆ ದುರಂತದ ಸ್ಟೋರಿ ಇಲ್ಲಿದೆ ನೋಡಿ.
ಕೋಲಾರದ ಮಾಲೂರು ಪಟ್ಟಣದ ತಿರುಮಲ ಕಲ್ಯಾಣ ಮಂಟಪದ ಆರ್.ಪಿ.ಲೇಔಟ್ ಬಾಡಿಗೆ ಮನೆಯಲ್ಲಿ ನಾಗರಾಜ್ ಅವ್ರು ತಾಯಿ ಹಾಗೂ ಪತ್ನಿಯೊಂದಿಗೆ ವಾಸವಾಗಿದ್ದರು. ಗುರುವಾರ ರಾತ್ರಿ ಈ ಕುಟುಂಬ ನೆಮ್ಮದಿಯಾಗಿ ಊಟ ಮಾಡಿ ಇನ್ನೇನು ಮಲಗಬೇಕಿತ್ತು. ಆ ವೇಳೆ ಮನೆಯಲ್ಲಿ ಎಂದಿನಂತೆ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಆರಂಭವಾದ ಜಗಳ ದೊಡ್ಡದೊಂದು ಅನಾಹುತವನ್ನೇ ಸೃಷ್ಠಿ ಮಾಡಿದೆ.
ಕಳೆದ ರಾತ್ರಿ ಈ ಮನೆಯಲ್ಲಿ 80 ವರ್ಷದ ತಾಯಿ ಆದಿಲಕ್ಷ್ಮೀ, 46 ವರ್ಷದ ಪತ್ನಿ ಪದ್ಮಾ ಹಾಗೂ 55 ವರ್ಷದ ಮನೆಯ ಯಜಮಾನ ನಾಗರಾಜ್ ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪೈಕಿ ಅತ್ತೆ ಮತ್ತು ಸೊಸೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮಗ ನಾಗರಾಜ್ ಸ್ಥಿತಿ ಗಂಭೀರವಾಗಿದೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ನಾಗರಾಜ್, ಇವತ್ತು ಬೆಳಿಗ್ಗೆ ತನ್ನ ಅಣ್ಣನ ಮಗನಿಗೆ ಪೋನ್ ಮಾಡಿ ರಾತ್ರಿ ಎಲ್ಲರೂ ವಿಷ ಕುಡಿದಿರುವ ವಿಷಯ ತಿಳಿಸಿದ್ದಾನೆ. ತಕ್ಷಣ ಸ್ಥಳಕ್ಕೆ ಬಂದ ಅಣ್ಣನ ಮಗ ವಿಜಯ್ ಸಾವು ಬದುಕಿನ ನಡುವೆ ಇದ್ದ ನಾಗರಾಜ್ರನ್ನ ಕೋಲಾರದ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ರೆ, ಉಳಿದಿಬ್ಬರು ತಾಯಿ ಮತ್ತು ಹೆಂಡತಿ ಸಾವನ್ನಪ್ಪಿದ್ರು.
ಪೆಟ್ರೋಲ್ ಬಂಕ್ನಲ್ಲಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ನಾಗರಾಜ್ ಪತ್ನಿ ಪದ್ಮಾಗೆ ಕಾಲು ನೋವಿನ ಸಮಸ್ಯೆ ಕಾಡುತ್ತಿತ್ತು. ಆಸ್ಪತ್ರೆಗೆ ತೋರಿಸಿದ್ರು ಪ್ರಯೋಜನವಾಗಿರಲಿಲ್ಲ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಕೊಡಿಸಿದ್ದರು. ಕಾಲು ಸರಿ ಹೋಗಲು ಒಂದೂವರೆ ಲಕ್ಷದಷ್ಟು ಹಣ ಖರ್ಚಾಗುತ್ತದೆ ಅಂತಾ ಹೇಳಿದ್ರು. ಆದ್ರೆ, ನಾಗರಾಜ್ ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಿ ಸಾಕಾಗಿದ್ದ. ನಾಗರಾಜ್ ಸದ್ಯಕ್ಕೆ ಚಿಕಿತ್ಸೆ ಕೊಡಿಸುವಷ್ಟು ಶಕ್ತನಾಗಿರಲಿಲ್ಲ. ಈ ವಿಚಾರವಾಗಿ ಮನೆಯಲ್ಲಿ ಪ್ರತಿನಿತ್ಯ ಜಗಳ ನಡೆಯುತ್ತಿತ್ತು. ಅದರಂತೆ ಗುರುವಾರ ರಾತ್ರಿ ಕೂಡಾ ಇದೇ ವಿಚಾರವಾಗಿ ಜಗಳ ನಡೆದಿತ್ತು.
ನಾಗರಾಜ್ ತಾನು ಸಾಯೋದಾಗಿ ಹೇಳಿ ವಿಷ ತಂದು ತಾನು ಕುಡಿದು ಮಲಗಿದ್ದಾನೆ. ಇದನ್ನ ಕಂಡ ನಾಗರಾಜ್ ತಾಯಿ ಆದಿಲಕ್ಷ್ಮಮ್ಮ ಕೂಡಾ ವಿಷ ಕುಡಿದಿದ್ದಾಳೆ. ಇವರಿಬ್ಬರನ್ನು ಕಂಡು ಪತ್ನಿ ಪದ್ಮಾ ಕೂಡಾ ಬಾಟಲಿನಲ್ಲಿದ್ದ ವಿಷ ಕುಡಿದು ಮಲಗಿದ್ದಾಳೆ. ಆದ್ರೆ, ಈ ಪೈಕಿ ನಾಗರಾಜ್ ತಾಯಿ ಮತ್ತು ಪತ್ನಿ ಇಬ್ಬರೂ ಮೃತಪಟ್ಟರೆ, ನಾಗರಾಜ್ ವಾಂತಿ ಮಾಡಿಕೊಂಡು ಬೆಳಿಗ್ಗೆವರೆಗೂ ಒದ್ದಾಡಿದ್ದಾನೆ. ಶುಕ್ರವಾರ ಬೆಳಕಾಗುತ್ತಿದ್ದಂತೆ ನಾಗರಾಜ್ ತನ್ನ ಅಣ್ಣನ ಮಗ ವಿಜಯ್ಗೆ ಪೋನ್ ಮಾಡಿ ವಿಷಯ ತಿಳಿಸಿದಾಗ ಆತ ಬಂದು ಆಸ್ಪತ್ರೆಗೆ ಸೇರಿಸಿ, ನಂತ್ರ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ.
ಒಟ್ನಲ್ಲಿ, ಸದ್ಯದ ಪರಿಸ್ಥಿತಿಯಲ್ಲಿ ಇಡೀ ವಿಶ್ವವೇ ಅನಾರೋಗ್ಯದಿಂದ ಬಳಲುತ್ತಿರುವಾಗ ಈ ಕುಟುಂಬ ಮಾತ್ರ ತಮ್ಮ ಆರೋಗ್ಯ ಸಮಸ್ಯೆಯಿಂದಲೇ ನರಳಿ ನೊಂದು ಆತ್ಮಹತ್ಯೆ ನಿರ್ಧಾರ ಮಾಡಿದ್ದು ದುರಂತ. ಆದ್ರೆ, ಮನೆಯ ಒಡೆಯ ನಾಗರಾಜ್ ಇಲ್ಲೂ ತಾನಂದುಕೊಂಡಂತೆ ನಡೆಯದೆ ಹೋಗಿದ್ದು ವಿಧಿಯಾಟ.

ಆರ್.ಶ್ರೀನಿವಾಸಮೂರ್ತಿ, ಪವರ್ ಟಿವಿ, ಕೋಲಾರ.

6 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments